»   » ಐಫಾ ಅವಾರ್ಡ್ಸ್ 2016-17 ಕುರಿತು 'ನೀರ್ ದೋಸೆ' ನಿರ್ಮಾಪಕ ವ್ಯಂಗ್ಯ

ಐಫಾ ಅವಾರ್ಡ್ಸ್ 2016-17 ಕುರಿತು 'ನೀರ್ ದೋಸೆ' ನಿರ್ಮಾಪಕ ವ್ಯಂಗ್ಯ

Posted By:
Subscribe to Filmibeat Kannada

2016-17ನೇ ಸಾಲಿನ ಐಫಾ (IIFA) ಉತ್ಸವಂ ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ನೆರವೇರಿತು. ದಕ್ಷಿಣ ಭಾರತದ ಖ್ಯಾತ ತಾರೆಯರು ಪಾಲ್ಗೊಂಡಿದ್ದ ಈ ಪ್ರಶಸ್ತಿ ಪ್ರದಾನ ಸಮಾರಂಭ ಈಗ ಕನ್ನಡ ಚಿತ್ರರಂಗದಲ್ಲಿ ವಿವಾದದ ಕೇಂದ್ರಬಿಂದುವಾಗಿದೆ.

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸಿನಿಮಾ ಐಫಾ ಉತ್ಸವಂನಲ್ಲಿ ಆರು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದು ನಿಮಗೆಲ್ಲಾ ಗೊತ್ತೇಯಿದೆ. ಈ ವಿಚಾರ ಕೆಲವರಿಗೆ ಖುಷಿ ನೀಡಿದ್ರೆ, ಹಲವರಿಗೆ ಬೇಸರ ತಂದಿದೆ.[ಐಐಎಫ್ ಎ ಉತ್ಸವ್: 'ಕಿರಿಕ್ ಪಾರ್ಟಿ' ತಂಡದ ಪ್ರಶಸ್ತಿಗಳ ಮೊತ್ತ 6]

ಅದಕ್ಕೆ ಸಾಕ್ಷಿ 'ನೀರ್ ದೋಸೆ' ಚಿತ್ರದ ನಿರ್ಮಾಪಕ ಪ್ರಸನ್ನ ರವರ ಫೇಸ್ ಬುಕ್ ಪೋಸ್ಟ್. ಮುಂದೆ ಓದಿ...

ಫೇಸ್ ಬುಕ್ ನಲ್ಲಿ ನಿರ್ಮಾಪಕ ಪ್ರಸನ್ನ ವ್ಯಂಗ್ಯ

ಐಫಾ ಅವಾರ್ಡ್ 2016-17 ಕುರಿತು 'ನೀರ್ ದೋಸೆ' ಚಿತ್ರದ ನಿರ್ಮಾಪಕ ಪ್ರಸನ್ನ ಫೇಸ್ ಬುಕ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಪ್ರಶಸ್ತಿ ನಿರ್ಣಾಯಕ ಸಮಿತಿಗೆ ಯಾವ ಪ್ರಶಸ್ತಿ ಕೊಟ್ಟರೂ ಸಾಲದು ಅಂತ ತಮ್ಮ ಅಸಮಾಧಾನವನ್ನ ಪ್ರಸನ್ನ ಹೊರಹಾಕಿದ್ದಾರೆ.[ಐಫಾ ಅವಾರ್ಡ್ಸ್ 2016-17 ವಿರುದ್ಧ ಜಗ್ಗೇಶ್ ಬಹಿರಂಗ ಆಕ್ರೋಶ.!]

ಪ್ರಸನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಏನಿದೆ.?

''ಯೋಗ್ಯತೆ ಇದೆಯೋ ಇಲ್ಲವೋ ಅನ್ನೋದನ್ನ ಆಮೇಲೆ ಯೋಚನೆ ಮಾಡೋಣ... ಆದರೆ iifa 2016 ಚಲನಚಿತ್ರ ಪ್ರಶಸ್ತಿ ಪಡೆದಿರುವ ಎಲ್ಲಾ ವಿಜೇತರಿಗೂ ಅಭಿನಂದನೆಗಳು'' ಅಂತ ವ್ಯಂಗ್ಯವಾಗಿ ಪ್ರಶಸ್ತಿ ವಿಜೇತರಿಗೆ ನಿರ್ಮಾಪಕ ಪ್ರಸನ್ನ ವಿಶ್ ಮಾಡಿದ್ದಾರೆ.

ಪ್ರಶಸ್ತಿ ನಿರ್ಣಾಯಕ ಸಮಿತಿಗೆ ಜ್ಞಾನಪೀಠ ಪ್ರಶಸ್ತಿ ಕೊಟ್ಟರೂ ಕಮ್ಮಿಯೇ.!

''ಇದಕ್ಕಿಂತ ಹೆಚ್ಚಾಗಿ ಪ್ರಶಸ್ತಿ ನಿರ್ಣಾಯಕ ಸಮಿತಿಗೆ ಯಾವ ಪ್ರಶಸ್ತಿ ಕೊಟ್ಟರೂ ಸಾಲದು. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಕಡಿಮೆ..!'' - ಪ್ರಸನ್ನ, ನಿರ್ಮಾಪಕ

ನಮ್ಮ ಜನ್ಮಕ್ಕೆ ಬೆಂಕಿ ಹಾಕ.!

''ನಿಮ್ಮ ಯೋಗ್ಯತೆಗೆ ನಾವು ಸಿನಿಮಾ ಮಾಡುತ್ತಿಲ್ಲ ಅನ್ನುವುದೇ ನಮ್ಮ ಕೊರಗು..! ನಮ್ಮ್ ಜನ್ಮಕ್ ಇಷ್ಟ್ ಬೆಂಕಿ ಹಾಕ..! ಐ ಲವ್ ಯೂ iifa ಅವಾರ್ಡ್ಸ್..!'' - ಪ್ರಸನ್ನ, ನಿರ್ಮಾಪಕ

ಕಾರಣ ಇಷ್ಟೇ.!

ಐಫಾ ಅವಾರ್ಡ್ 2016-17 ನಲ್ಲಿ ಹೆಚ್ಚು ಪ್ರಶಸ್ತಿಗಳು 'ಕಿರಿಕ್ ಪಾರ್ಟಿ' ಪಾಲಾಗಿವೆ. ಇತರೆ ಉತ್ತಮ ಚಿತ್ರಗಳತ್ತ ಪ್ರಶಸ್ತಿ ನಿರ್ಣಾಯಕರು ಗಮನ ಹರಿಸಿಲ್ಲ ಎಂಬುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಹರಿಪ್ರಿಯಾ, ದತ್ತಣ್ಣ ಪ್ರಶಸ್ತಿಗೆ ಅರ್ಹರು

'ನೀರ್ ದೋಸೆ' ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದ ಹರಿಪ್ರಿಯಾ ಹಾಗೂ ಹಿರಿಯ ನಟ ದತ್ತಣ್ಣ ಪ್ರಶಸ್ತಿಗೆ ಅರ್ಹರು ಎಂಬುದು ಕೆಲವರ ವಾದ

IIFA ಅವಾರ್ಡ್ಸ್ 2016-17 ಪ್ರಶಸ್ತಿ ವಿಜೇತರು

ಅತ್ಯುತ್ತಮ ಚಿತ್ರ - ಕಿರಿಕ್ ಪಾರ್ಟಿ
ಅತ್ಯುತ್ತಮ ನಟ - ರಕ್ಷಿತ್ ಶೆಟ್ಟಿ (ಕಿರಿಕ್ ಪಾರ್ಟಿ)
ಅತ್ಯುತ್ತಮ ನಟಿ - ಪಾರುಲ್ ಯಾದವ್ (ಕಿಲ್ಲಿಂಗ್ ವೀರಪ್ಪನ್)
ಅತ್ಯುತ್ತಮ ನಿರ್ದೇಶಕ - ಪವನ್ ಕುಮಾರ್ (ಯು-ಟರ್ನ್)
ಅತ್ಯುತ್ತಮ ಕಥೆ - ಪವನ್ ಕುಮಾರ್ (ಯು-ಟರ್ನ್)
ಅತ್ಯುತ್ತಮ ಹಿನ್ನಲೆ ಗಾಯನ - ವಿಜಯ್ ಪ್ರಕಾಶ್ (ಕಿರಿಕ್ ಪಾರ್ಟಿ)
ಅತ್ಯುತ್ತಮ ಸಂಗೀತ ನಿರ್ದೇಶನ - ಅಜನೀಶ್ ಲೋಕನಾಥ್ (ಕಿರಿಕ್ ಪಾರ್ಟಿ)
ಅತ್ಯುತ್ತಮ ಸಾಹಿತ್ಯ - ಕಥೆಯೊಂದ ಹೇಳಿದೆ (ಕಿರಿಕ್ ಪಾರ್ಟಿ)
ಅತ್ಯುತ್ತಮ ಕೊರಿಯೋಗ್ರಫಿ - ಕಿರಿಕ್ ಪಾರ್ಟಿ

English summary
'Neer Dose' Producer Prasanna has taken his Facebook page to express his displeasure over IIFA Awards Jury.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada