For Quick Alerts
  ALLOW NOTIFICATIONS  
  For Daily Alerts

  'ನೀರ್ ದೋಸೆ' ಬೇಡ ಅಂತ ತಳ್ಳಿದ ರಮ್ಯಾ ಬಗ್ಗೆ ಚಿತ್ರದಲ್ಲಿ ಕೊಂಕು ನುಡಿ.?!

  By Harshitha
  |

  ಸ್ಯಾಂಡಲ್ ವುಡ್ ಅಂಗಳದಲ್ಲಿ 'ನೀರ್ ದೋಸೆ' ದೊಡ್ಡ ವಿವಾದಾತ್ಮಕ, ಅಷ್ಟೇ ಚರ್ಚಾಸ್ಪದ ಚಿತ್ರ ಅಂತ ಬ್ರ್ಯಾಂಡ್ ಆಗುವುದಕ್ಕೆ ಕಾರಣ ನಟಿ ಹಾಗೂ ಮಾಜಿ ಸಂಸದೆ ರಮ್ಯಾ.!

  ಓರ್ವ ನಟಿಯಾಗಿದ್ದಾಗ 'ನೀರ್ ದೋಸೆ' ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದ ರಮ್ಯಾ, ಸಂಸದೆ ಗದ್ದುಗೆಗೆ ಏರಿದ್ಮೇಲೆ 'ದೋಸೆ' ಸಹವಾಸ ಬೇಡ ಅಂತ ಸುಮ್ಮನಾಗ್ಬಿಟ್ರು. ಕಾಲ್ ಶೀಟ್ ನೀಡದೆ ವರ್ಷಾನುಗಟ್ಟಲೆ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಸತಾಯಿಸಿದ್ರು.

  ಇದರಿಂದ ಆಕ್ರೋಶಗೊಂಡಿದ್ದ 'ನವರಸ ನಾಯಕ' ಜಗ್ಗೇಶ್ ಟ್ವಿಟ್ಟರ್ ನಲ್ಲಿ ರಮ್ಯಾ ವಿರುದ್ಧ ಕಿಡಿ ಕಾರಿದ್ರು. ಅಲ್ಲಿಗೆ, 'ನೀರ್ ದೋಸೆ' ಸೀದು ಹೋದ ಹಾಗೆ ಲೆಕ್ಕ ಅಂತ ಎಲ್ಲರೂ ಭಾವಿಸಿರುವಾಗಲೇ, ದೋಸೆಗೆ ಮಿರ್ಚಿ ಮಸಾಲೆ ಅರೆಯಲು ಬಂದಿದ್ದು ಗುಂಗುರು ಚೆಲುವೆ ಹರಿಪ್ರಿಯಾ.

  ಸದ್ಯ ಹರಿಪ್ರಿಯಾ ಕೈಯಾರೆ ಬಿಸಿ ಬಿಸಿ ಆದ 'ನೀರ್ ದೋಸೆ' ಸವಿಯಲು ಸಿದ್ಧವಾಗಿದ್ದರೂ, ಚಿತ್ರತಂಡಕ್ಕೆ ರಮ್ಯಾ ಮೇಲೆ ಇರುವ ಕೋಪ ಕಮ್ಮಿ ಆದಂತೆ ಇಲ್ಲ. ಮುಂದೆ ಓದಿ....

  ರಮ್ಯಾ ಕಾಲು ಎಳೆದಿದೆ 'ನೀರ್ ದೋಸೆ' ಚಿತ್ರತಂಡ.?

  ರಮ್ಯಾ ಕಾಲು ಎಳೆದಿದೆ 'ನೀರ್ ದೋಸೆ' ಚಿತ್ರತಂಡ.?

  ಇದೀಗಷ್ಟೇ ಬಿಡುಗಡೆ ಆಗಿರುವ 'ನೀರ್ ದೋಸೆ' ಚಿತ್ರದ ಟ್ರೈಲರ್ ನಲ್ಲಿ ಚಿತ್ರತಂಡ ನಟಿ ರಮ್ಯಾ ಕಾಲೆಳೆದಿರುವುದು ಸ್ಪಷ್ಟವಾಗಿದೆ. ['ನೀರ್ ದೋಸೆ'ಯಲ್ಲಿ ಎಂತೆಂಥಾ ಡೈಲಾಗುಗಳಿವೆ ಗೊತ್ತಾ?]

  ರಮ್ಯಾ ಬಗ್ಗೆ ಇರುವ ಡೈಲಾಗ್ ಏನು ಗೊತ್ತಾ.?

  ರಮ್ಯಾ ಬಗ್ಗೆ ಇರುವ ಡೈಲಾಗ್ ಏನು ಗೊತ್ತಾ.?

  ಜಗ್ಗು ಪಾತ್ರಧಾರಿ ಜಗ್ಗೇಶ್ ರವರನ್ನ ಶಾನುಭೋಗ ಪಾತ್ರಧಾರಿ ದತ್ತಣ್ಣ ಕೇಳುವ ಪ್ರಶ್ನೆ ಇದು - ''ಲೋ ಜಗ್ಗು, 'ಮಸಾಲೆ ದೋಸೆ' ಚಿತ್ರದಿಂದ ಹೊರಗೆ ಹೋಗಿದ್ದಾಳಲ್ಲಾ ಆ ಚಿತ್ರ ನಟಿ 'ಸೌಮ್ಯ'...ಆಯಮ್ಮ ಹೆಂಗೋ..?'' ['ನೀರ್ ದೋಸೆ' ಅಂದ್ರೇನು, ಅವರಿವರು ಕಂಡಂತೆ 'ನೀರ್ ದೋಸೆ']

  ಜಗ್ಗು ಕೊಡುವ ಉತ್ತರ ಏನು.?

  ಜಗ್ಗು ಕೊಡುವ ಉತ್ತರ ಏನು.?

  ''ಅವರು ಒಂಥರಾ ಅವರೇ ಕಾಯಿ ಇದ್ಹಂಗೆ. ಹುಳ ಇದ್ದರೂ, ಸೊಗಡು ಜಾಸ್ತಿ'' ಅಂತ ಜಗ್ಗು ಉತ್ತರ ಕೊಡುತ್ತಾರೆ.

  'ಸೌಮ್ಯ' ಅಂದ್ಮೇಲೆ ಬಿಡಿಸಿ ಹೇಳಬೇಕಾಗಿಲ್ಲ ಅಲ್ವಾ.?

  'ಸೌಮ್ಯ' ಅಂದ್ಮೇಲೆ ಬಿಡಿಸಿ ಹೇಳಬೇಕಾಗಿಲ್ಲ ಅಲ್ವಾ.?

  'ಮಸಾಲೆ ದೋಸೆ' ಮತ್ತು ಚಿತ್ರನಟಿ 'ಸೌಮ್ಯ' ಅಂದ್ಮೇಲೆ ರಮ್ಯಾ ಕಡೆಗೆ ಬೆಟ್ಟು ಮಾಡುತ್ತಿರುವುದನ್ನು ಬಿಡಿಸಿ ಹೇಳಬೇಕಾಗಿಲ್ಲ ಅಲ್ವಾ.?

  ಪಾಸಿಟಿವ್ ಅಥವಾ ನೆಗೆಟಿವ್.?

  ಪಾಸಿಟಿವ್ ಅಥವಾ ನೆಗೆಟಿವ್.?

  ಈ ಡೈಲಾಗ್ ನ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೀರೋ, ನೆಗೆಟಿವ್ ಆಗಿ ತೆಗೆದುಕೊಳ್ಳುತ್ತೀರೋ...ನಿಮಗೆ ಬಿಟ್ಟಿದ್ದು.

  ಹೊಸ ವಿವಾದ.!

  ಹೊಸ ವಿವಾದ.!

  ವಿವಾದಗಳಿಂದಲೇ ಸದ್ದು-ಸುದ್ದಿ ಮಾಡಿದ್ದ 'ನೀರ್ ದೋಸೆ' ಸಿನಿಮಾ ಈಗ ಮತ್ತೊಮ್ಮೆ ವಿವಾದವನ್ನ ಮೈಮೇಲೆ ಎಳೆದುಕೊಳ್ಳದಿದ್ದರೆ ಒಳ್ಳೆಯದ್ದು.

  'ನೀರ್ ದೋಸೆ' ಚಿತ್ರದ ಡೈಲಾಗ್ ಗಳು ಅಬ್ಬಬ್ಬಾ..!

  'ನೀರ್ ದೋಸೆ' ಚಿತ್ರದ ಡೈಲಾಗ್ ಗಳು ಅಬ್ಬಬ್ಬಾ..!

  ಭಯಂಕರ ವೋಲ್ಟೇಜ್, ಮೈಲೇಜ್ ಇರುವ ಬೇಜಾನ್ ಡೈಲಾಗ್ ಗಳು 'ನೀರ್ ದೋಸೆ' ಚಿತ್ರದಲ್ಲಿವೆ.

  ಹರಿಪ್ರಿಯಾ ಮೊದಲು ಬೇಡ ಅಂದಿದ್ರಂತೆ.!

  ಹರಿಪ್ರಿಯಾ ಮೊದಲು ಬೇಡ ಅಂದಿದ್ರಂತೆ.!

  ರಮ್ಯಾ ಕೈ ಕೊಟ್ಟ ಮೇಲೆ ಹರಿಪ್ರಿಯಾ ರವರಿಗೆ ಸ್ಕ್ರಿಪ್ಟ್ ಹೇಳಿದಾಗ, ಮೊದಮೊದಲು ಆಕೆ 'ಬೇಡ' ಅಂದುಕೊಂಡಿದ್ರಂತೆ. ಆಮೇಲೆ ಒಪ್ಪಿಕೊಂಡಿದ್ದಾರೆ.

  'ನೀರ್ ದೋಸೆ' ಚಿತ್ರದ ಟ್ರೈಲರ್ ನೋಡಿದ್ರಾ.?

  'ನೀರ್ ದೋಸೆ' ಚಿತ್ರದ ಟ್ರೈಲರ್ ನೋಡಿದ್ರಾ.?

  ವಿಜಯ ಪ್ರಸಾದ್ ಆಕ್ಷನ್ ಕಟ್ ಹೇಳಿರುವ ಜಗ್ಗೇಶ್, ಸುಮನ್ ರಂಗನಾಥ್, ಹರಿಪ್ರಿಯಾ, ದತ್ತಣ್ಣ ಅಭಿನಯಿಸಿರುವ 'ನೀರ್ ದೋಸೆ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿರಿ....

  'ನೀರ್ ದೋಸೆ' ಬಗ್ಗೆ ಚಿತ್ರತಂಡದ ಮಾತು

  'ನೀರ್ ದೋಸೆ' ಬಗ್ಗೆ ಚಿತ್ರತಂಡದ ಮಾತು

  'ನೀರ್ ದೋಸೆ' ಬಗ್ಗೆ ಹರಿಪ್ರಿಯಾ, ಜಗ್ಗೇಶ್, ಸುಮನ್ ರಂಗನಾಥ್, ದತ್ತಣ್ಣ, ವಿಜಯ ಪ್ರಸಾದ್ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

  English summary
  Kannada Movie 'Neer Dose' trailer is out and in the trailer, it seems that the movie team has pulled Actress, Congress Politician, EX MP Ramya's leg with 'Masala Dosa' dialogue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X