»   » ಕಿರುತೆರೆ ಗೊಂಬೆಯ ಕಲರ್‌ ಫುಲ್ ಫೋಟೋ ಶೂಟ್

ಕಿರುತೆರೆ ಗೊಂಬೆಯ ಕಲರ್‌ ಫುಲ್ ಫೋಟೋ ಶೂಟ್

Posted By:
Subscribe to Filmibeat Kannada
ಕಿರುತೆರೆ ಗೊಂಬೆಯ ಕಲರ್‌ ಫುಲ್ ಫೋಟೋ ಶೂಟ್ | Filmibeat Kannada

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗೊಂಬೆಯ ದರ್ಬಾರ್ ಜೋರಾಗಿದೆ. ಅಂದಿನಿಂದಲೂ ಇಂದಿನ ವರೆಗೂ ಗೊಂಬೆ ಅಂದ ತಕ್ಷಣ ಮನೆಮಂದಿಗೆಲ್ಲಾ ನೆನಪಾಗುವುದು ನಟಿ ನೇಹಾ ಗೌಡ, ನೇಹಾ ಗೌಡ ಎಂದು ಹೆಸರು ಹೇಳಿದ್ದರು ಅದೆಷ್ಟೋ ಜನರಿಗೆ ಅರ್ಥವಾಗಿರುವುದಿಲ್ಲ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತ ಹೇಳಿದ್ರೆ ಥಟ್ ಎಲ್ಲರೂ ಗೊಂಬೆ ಅಂದು ಬಿಡುತ್ತಾರೆ ಅಷ್ಟರ ಮಟ್ಟಿಗೆ ಈಕೆ ಅವರ ಅಭಿನಯ ಮತ್ತು ಪಾತ್ರದಿಂದ ಫೇಮಸ್ ಆಗಿದ್ದಾರೆ.

ಇತ್ತೀಚಿಗಷ್ಟೆ ಗೊಂಬೆ ತಮ್ಮ ಬಾಲ್ಯದ ಗೆಳೆಯ ಚಂದನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮೀ ಬಾರಮ್ಮ ನಟಿ ನೇಹಾ ಗೌಡ

ತೆರೆ ಮೇಲೆ ಮಾತ್ರವಲ್ಲದೆ ನಿಜವಾಗಿಯೂ ಗೊಂಬೆಯಂತೆಯೇ ಸುಂದರವಾಗಿರುವ ನೇಹಾ ಗೌಡ ಅವರ ಮದುವೆಗೂ ಮುಂಚೆ ಫ್ರೀ ವೆಡ್ಡಿಂಗ್ ಶೂಟ್ ಮಾಡಿಸಲಾಗಿದೆ. ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹಾಗಾದ್ರೆ ಗೊಂಬೆ ಫೋಟೋ ಶೂಟ್ ಹೇಗಿದೆ. ಫೋಟೋ ಸ್ಲೈಡ್ ಗಳ ಮೂಲಕ ನೀವು ಒಮ್ಮೆ ನೋಡಿ

ಗೊಂಬೆಯ ಅದ್ಬುತ ಫೋಟೋ ಶೂಟ್

ನಟಿ ನೇಹಾ ಗೌಡ ತಮ್ಮ ಮದುವೆ ಮುಂಚೆ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಸಾಕಷ್ಟು ಕಾಸ್ಟ್ಯೂಮ್ಸ್ ನಲ್ಲಿ ನೇಹಾ ಹಾಗೂ ಚಂದನ್ ಸಖತ್ ಕ್ಯೂಟ್ ಆಗಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ.

ಶೂಟಿಂಗ್ ಸ್ಪಾಟ್ ನಲ್ಲಿ ಫೋಟೋ ಶೂಟ್

ಮುಗುಳು ನಗೆ ಸಿನಿಮಾದ ಚಿತ್ರೀಕರಣ ಮಾಡಿರುವ ಜಾಗಗಳಲ್ಲಿ ನೇಹಾ ಗೌಡ ಅವರ ಪ್ರೀ ವೆಡ್ಡಿಂಗ್ ಚಿತ್ರೀಕರಣ ಮಾಡಲಾಗಿದೆ. ಮುಗುಳು ನಗೆ ಸಿನಿಮಾದ "ಕೆರೆ ಏರಿ ಮೇಲ್ ನಿಂತು ಚಂದ್ರ ಬಂದ" ಹಾಡನ್ನ ಶೂಟ್ ಮಾಡಿರುವ ದೇವಸ್ಥಾನದ ಸುತ್ತಾ ಮುತ್ತ ಗೊಂಬೆ ಹಾಗೂ ಚಂದನ್ ಕ್ಯಾಮೆರಾ ಕಣ್ಣಿನಲ್ಲಿ ಅಂದವಾಗಿ ಕಾಣಿಸಿಕೊಂಡಿದ್ದಾರೆ.

ಡಿಫ್ರೆಂಟ್ ಕಾಸ್ಟ್ಯೂಮ್ಸ್ ನಲ್ಲಿ ಶೂಟ್

ನಟಿ ನೇಹಾ ಗೌಡ ಹಾಗೂ ಚಂದನ್ ಮೂರು ಕಾಸ್ಟ್ಯೂಮ್ಸ್ ನಲ್ಲಿ ಕ್ಯಾಮೆರಾ ಗೆ ಫೋಸ್ ಕೊಟ್ಟಿರುವ ಫೋಟೋಗಳು ಸಾಮಾಜಿಕಾ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಕಿರು ತೆರೆಯಲ್ಲಿ ಗೊಂಬೆಯ ಮೋಡಿ

ನಟಿ ನೇಹಾ ಗೌಡ ಕಿರುತೆರೆಯಲ್ಲಿ ಸಖತ್ ಫೇಮಸ್ ತಮ್ಮ ಮುಗ್ದ ಅಭಿನಯದಿಂದಲೇ ಕನ್ನಡ ಪ್ರೇಕ್ಷಕರನ್ನ ಗೆದ್ದಿದ್ದಾರೆ. ಇನ್ನು ನೇಹಾ ಅವರ ಸಹೋದರಿ ಸೋನುಗೌಡ ಬೆಳ್ಳೆ ಪರದೆ ಮೇಲೆ ಸಾಕಷ್ಟು ಸಿನಿಮಾಗಳ ಮೂಲಕ ಮಿಂಚಿದ್ದಾರೆ.

English summary
Kannada actress Neha Gowda and Chandan's Pre wedding shoot photos are goes viral on social network. Neha and Chandan are photoshooted at where the Mugulunage movie has been filmed. Neha Gowda Lakshmi Baramma serial actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada