twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಹಾವಳಿ ದೂರವಾಗಲಿ ಎಂದು ಮಂತ್ರಾಲಯದಲ್ಲಿ 'ನೆನಪಿರಲಿ' ಪ್ರೇಮ್ ಉರುಳುಸೇವೆ

    |

    ಕೊರೊನಾ ವೈರಸ್ ಭೀತಿಯಿಂದ ಚಿತ್ರರಂಗ ಬಹುತೇಕ ಸ್ತಬ್ಧವಾಗಿದೆ. ಚಿತ್ರೀಕರಣಗಳು, ಚಿತ್ರಮಂದಿರಗಳು ಸ್ಥಗಿತಗೊಂಡಿವೆ. ಸಿನಿಮಾಗಳ ಪ್ರಿ ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ಅಡ್ಡಿಯಾಗಿದೆ. ಅನೇಕ ಸೆಲೆಬ್ರಿಟಿಗಳು ಆರೋಗ್ಯದ ಬಗ್ಗೆ ಗಮನ ಹರಿಸಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಅಭಿಮಾನಿಗಳಿಗೆ ಸಲಹೆ ನೀಡುತ್ತಿದ್ದಾರೆ.

    ಇತ್ತ 'ನೆನಪಿರಲಿ' ಪ್ರೇಮ್ ಜನರ ಒಳಿತಿಗಾಗಿ ದೇವರ ಮೊರೆ ಹೋಗಿದ್ದಾರೆ. ಮಂತ್ರಾಲಯಕ್ಕೆ ತೆರಳಿರುವ ಅವರು ಗುರು ರಾಘವೇಂದ್ರರ ಮುಂದೆ ಉರುಳು ಸೇವೆ ಮಾಡುವ ಮೂಲಕ ಕೊರೊನಾ ಹಾವಳಿಯಿಂದ ಜಗತ್ತನ್ನು ಕಾಪಾಡುವಂತೆ ಕೋರಿದ್ದಾರೆ. ಜತೆಗೆ ಕನ್ನಡ ಚಿತ್ರರಂಗದ ಒಳಿತಿಗೂ ಅವರು ಬೇಡಿಕೊಂಡಿದ್ದಾರೆ.

     Nenapirali Prem In Mantralaya Special Pooja Performance Against Coronavirus

    ಪ್ರೇಮ್ ಅವರು ಉರುಳು ಸೇವೆ ಮಾಡುವ ವಿಡಿಯೋವನ್ನು ಅವರ ಪತ್ನಿ ಜ್ಯೋತಿ ಪ್ರೇಮ್ ಟಿಕ್ ಟಾಕ್ ಮೂಲಕ ಸೆರೆ ಹಿಡಿದಿದ್ದಾರೆ. ಡಾ. ರಾಜ್‌ಕುಮಾರ್ ಹಾಡಿರುವ 'ರಾಘವೇಂದ್ರ ರಾಘವೇಂದ್ರ ಎನ್ನಿರಿ' ಹಾಡಿನ ಹಿನ್ನೆಲೆಯಲ್ಲಿ ಅವರ ಉರುಳುಸೇವೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

    'ಸ್ನೇಹಿತರಿಗೆ ಬಂದುಗಳಿಗೆ ನನ್ನ ಅಭಿಮಾನಿಗಳಿಗೆ ಮತ್ತು ಕನ್ನಡ ಚಿತ್ರ ರಂಗಕ್ಕೆ ಒಳ್ಳೆಯದಾಗಲಿ ಹಾಗೂ ಕೊರೊನಾ ಹಾವಳಿಯಿಂದ ಪ್ರಪಂಚವನ್ನು ಪಾರು ಮಾಡು ಎಂದು ಮಂತ್ರಾಲಯದಲ್ಲಿ ಗುರು ಸಾರ್ವಭೌಮನ ಮುಂದೆ ಉರುಳು ಸೇವೆ' ಎಂದು ಪ್ರೇಮ್ ತಿಳಿಸಿದ್ದಾರೆ.

    English summary
    Actor Nenapirali Prem performed special pooja in Mantralaya against Coronavirus.
    Wednesday, March 18, 2020, 19:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X