»   » ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆದ ಗಾಳಿಪಟ ನೀತು

ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆದ ಗಾಳಿಪಟ ನೀತು

Posted By:
Subscribe to Filmibeat Kannada

ಜೋಕ್ಸ್ ಫಾಲ್ಸ್ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗವನ್ನ ಪ್ರವೇಶ ಮಾಡಿ ನಂತರ ಗಾಳಿಪಟ ಸಿನಿಮಾದಲ್ಲಿ ಇಡೀ ಕನ್ನಡ ಸಿನಿಮಾ ರಸಿಕರ ಮನಸ್ಸನ್ನು ಕದ್ದ ನಟಿ ನೀತು ಶೆಟ್ಟಿ. ಚಿತ್ರರಂಗಕ್ಕೆ ಬಂದ ನಂತರ ಸಾಲು ಸಾಲು ಚಿತ್ರಗಳಲ್ಲಿ ಹಾಗೂ ಸ್ಟಾರ್ ಕಲಾವಿದರ ಜೊತೆಯಲ್ಲಿ ನೀತು ಆಕ್ಟ್ ಮಾಡಿದ್ರು. ಕೆಲ ವರ್ಷಗಳ ನಂತರ ಹಾಗೇ ಸೈಲೆಂಟ್ ಆಗಿ ಬಿಟ್ಟರು.

ನೀತು ಕನ್ನಡ ಸೇರಿದಂತೆ ತುಳು, ಮಲೆಯಾಳಂ ಹಾಗೂ ಕೊಂಕಣಿ ಸಿನಿಮಾಗಳಲ್ಲಿಯೂ ನಾಯಕಿಯಾಗಿ ಗುರುತಿಸಿಕೊಂಡವರು. ಕೇವಲ ಮರ ಸುತ್ತುವ ಪಾತ್ರಗಳು ಮಾತ್ರವಲ್ಲದೆ, ನೀತು ತಾನು ಕೂಡ ಅದ್ಬುತ ಕಲಾವಿದೆ ಅನ್ನುವುದನ್ನ ತೆರೆ ಮೇಲೆ ಪ್ರೂವ್ ಮಾಡಿದವರು.

Nethu Shetty has started his second innings in the film industry

ಸಣ್ಣ ಗ್ಯಾಪ್ ನಂತರ ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರ ಮುಂದೆ ಬಂದ ನೀತು ಅವರ ಬೋಲ್ಡ್ ಮಾತುಗಳು ಆಕರ್ಷಣೆ ಮಾಡಿತ್ತು. ರಿಯಾಲಿಟಿ ಶೋ ಮುಗಿಸಿದ ನೀತು ಮತ್ತೆ ಎಲ್ಲಿಯೂ ಕಾಣಲಿಲ್ಲ. ಅಯ್ಯೋ ನೀತು ಎಲ್ಲಿ ಹೋದರು ಅಂತ ಯೋಚನೆ ಮಾಡುತ್ತಿರುವಾಗಲೇ ಮತ್ತೆ ಗಾಂಧಿನಗರದಲ್ಲಿ ನೀವು ಶೆಟ್ಟಿಯ ಹೆಸರು ಕೇಳಿ ಬರುತ್ತಿದೆ.

Nethu Shetty has started his second innings in the film industry

ಹಿಂದಿನಂತೆಯೇ ನೀತು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸ್ವಲ್ಪ ದಪ್ಪ ಆಗಿದ್ದರೂ ನೀತು ಬಬ್ಲಿ ಆಗಿಯೇ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ನೀತು ವಜ್ರಮುಖಿ ಎನ್ನುವ ಹಾರಾರ್ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ. ಅದರ ಜೊತೆಯಲ್ಲಿ ಎ ಆರ್ ಬಾಬು ನಿರ್ದೇಶನದಲ್ಲಿ ಜಗ್ಗೇಶ್ ಅವರ ಪುತ್ರ ಗುರು ಜೊತೆ ಅಭಿನಯಿಸುತ್ತಿದ್ದಾರೆ. 1888 ಅನ್ನುವ ಚಿತ್ರದಲ್ಲಿಯೂ ನೀತು ನಾಯಕಿಯಾಗಿ ಆಕ್ಟ್ ಮಾಡುತ್ತಿದ್ದಾರೆ.

ಕೆ ಜಿ ಎಫ್ ಸಿನಿಮಾ ತಂಡದಿಂದ ಬಂತು ಹೊಸ ಸುದ್ದಿ

English summary
Kannada actress Nethu Shetty has started his second innings in the film industry. Nethu acting in Vajramukhi and 1888 film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X