For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್, ಪ್ರೇಮ್ ಗೆ ಪುಕ್ಕಟೆ ಸಲಹೆ: ಹುಚ್ಚ ವೆಂಕಟ್ ಗೆ ನೆಟ್ಟಿಗರ ಛೀಮಾರಿ.!

  |

  'ಏಕ್ ಲವ್ ಯಾ' ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಮೋಕಿಂಗ್ ಜೊತೆಗೆ ಲಿಪ್ ಕಿಸ್ ಕೂಡ ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ 'ಐ ಲವ್ ಯು' ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದ ರಚಿತಾ, 'ಏಕ್ ಲವ್ ಯಾ' ಚಿತ್ರದಲ್ಲೂ ಬೋಲ್ಡ್ ಆಗಿ ಅಭಿನಯಿಸಿದ್ದಾರೆ.

  ರಚಿತಾ ಲಿಪ್ ಕಿಸ್ ನೋಡಿ ವೆಂಕಟ್ ಹೇಳಿದ್ದೇನು ನೋಡಿ

  'ಏಕ್ ಲವ್ ಯಾ' ಟೀಸರ್ ನಲ್ಲಿರುವ ರಚಿತಾ-ರಾಣಾ ಲಿಪ್ ಕಿಸ್ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇದೇ ಟಾಪಿಕ್ ಬಗ್ಗೆ ಹುಚ್ಚ ವೆಂಕಟ್ ಒಂದು ವಿಡಿಯೋ ಮಾಡಿದ್ದಾರೆ.

  ಲಿಪ್ ಕಿಸ್ ಮಾಡಿರುವ ರಚಿತಾ ರಾಮ್ ವಿರುದ್ಧ ಹುಚ್ಚ ವೆಂಕಟ್ ಕೆಂಡಕಾರಿದ್ದಾರೆ. ಸಾಲದಕ್ಕೆ, ''ಇನ್ಮುಂದೆ ದಯವಿಟ್ಟು ಇಂತಹ ಪಾತ್ರಗಳನ್ನು ಮಾಡಬೇಡಿ'' ಅಂತ ಬೇಡಿಕೊಂಡಿದ್ದಾರೆ. ಇನ್ನೂ ''ಚಿತ್ರದಲ್ಲಿರುವ ಬೋಲ್ಡ್ ಸೀನ್ ಗಳನ್ನು ತೆಗೆದುಹಾಕಿ'' ಅಂತ ನಿರ್ದೇಶಕ ಪ್ರೇಮ್ ಗೆ ಹುಚ್ಚ ವೆಂಕಟ್ ಪುಕ್ಕಟೆ ಸಲಹೆ ನೀಡಿದ್ದಾರೆ.

  ಪಬ್ಲಿಸಿಟಿಗಾಗಿ ಸದಾ ಇನ್ನೊಬ್ಬರ ವಿರುದ್ಧ ರೊಚ್ಚಿಗೆದ್ದು 'ನನ್ ಮಗಂದ್', 'ನನ್ ಎಕ್ಕಡ' ಅಂತ ಗರಂ ಆಗುವ ಹುಚ್ಚ ವೆಂಕಟ್ ಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ರಚಿತಾ ರಾಮ್ ಗೆ ಬುದ್ಧಿವಾದ ಹೇಳಿರುವ ಹುಚ್ಚ ವೆಂಕಟ್ ಗೆ ನೆಟ್ಟಿಗರು ಮಹಾ ಮಂಗಳಾರತಿ ಮಾಡುತ್ತಿದ್ದಾರೆ. ಮುಂದೆ ಓದಿರಿ...

  ರಚಿತಾ ರಾಮ್ ವಿರುದ್ಧ ಹುಚ್ಚ ವೆಂಕಟ್ ಹೇಳಿದ್ದೇನು.?

  ರಚಿತಾ ರಾಮ್ ವಿರುದ್ಧ ಹುಚ್ಚ ವೆಂಕಟ್ ಹೇಳಿದ್ದೇನು.?

  ''ನನ್ ಮಗಂದ್... ಯಾಕ್ರೀ ಈ ತರಹದ ಪಾತ್ರಗಳನ್ನು ಮಾಡಿ ಜನರನ್ನು ಹಾಳು ಮಾಡುತ್ತಿದ್ದೀರಾ.? ಲಿಪ್ ಕಿಸ್ ಮಾಡಿ, ಸಿಗರೇಟ್ ಸೇದಿದರೆ.. ಸಿನಿಮಾ ನೋಡುವ ಹೆಣ್ಣು ಮಕ್ಕಳಿಗೆ ಮುಜುಗರ ಆಗಲ್ವಾ.? ಇನ್ಮೇಲೆ ದಯವಿಟ್ಟು ಈ ತರಹದ ಪಾತ್ರಗಳನ್ನು ಮಾಡಬೇಡಿ'' ಎಂದೆಲ್ಲ ವಿಡಿಯೋದಲ್ಲಿ ಹುಚ್ಚ ವೆಂಕಟ್ ಹೇಳಿದ್ದಾರೆ.

  ಪೊಲೀಸ್ ವಶದಲ್ಲಿ ಹುಚ್ಚ ವೆಂಕಟ್: ಮದುವೆಯಾಗುವಂತೆ ಯುವತಿಯನ್ನು ಪೀಡಿಸಿದ ನಟಪೊಲೀಸ್ ವಶದಲ್ಲಿ ಹುಚ್ಚ ವೆಂಕಟ್: ಮದುವೆಯಾಗುವಂತೆ ಯುವತಿಯನ್ನು ಪೀಡಿಸಿದ ನಟ

  ಮೊದಲು ತೆಗೆದು ಹಾಕಿ.!

  ಮೊದಲು ತೆಗೆದು ಹಾಕಿ.!

  ''ದಯವಿಟ್ಟು ಈ ಲಿಪ್ ಕಿಸ್ ಸೀನ್ ಮತ್ತು ಸ್ಮೋಕಿಂಗ್ ಸೀನ್ ನ ತೆಗೆದುಬಿಡಿ.. ಅಶ್ಲೀಲ ದೃಶ್ಯಗಳನ್ನು ಹಾಕಬೇಡಿ'' ಎಂದು 'ಏಕ್ ಲವ್ ಯಾ' ಚಿತ್ರದ ನಿರ್ದೇಶಕ ಪ್ರೇಮ್ ಗೆ ಹುಚ್ಚ ವೆಂಕಟ್ ಪುಕ್ಕಟೆ ಸಲಹೆ ಕೊಟ್ಟಿದ್ದಾರೆ.

  'ಆ' ಒಂದು ಘಟನೆ ಆಗದಿದ್ದರೆ ಹುಚ್ಚ ವೆಂಕಟ್ ಈ ಸ್ಥಿತಿಗೆ ಬರುತ್ತಿರಲಿಲ್ಲ!'ಆ' ಒಂದು ಘಟನೆ ಆಗದಿದ್ದರೆ ಹುಚ್ಚ ವೆಂಕಟ್ ಈ ಸ್ಥಿತಿಗೆ ಬರುತ್ತಿರಲಿಲ್ಲ!

  ಛೀಮಾರಿ ಹಾಕಿದ ನೆಟ್ಟಿಗರು

  ಛೀಮಾರಿ ಹಾಕಿದ ನೆಟ್ಟಿಗರು

  ''ಒಬ್ಬ ಹುಡುಗಿಯ ಕೈಯನ್ನು ದೊಡ್ಡಬಳ್ಳಾಪುರದ ರೋಡ್ ನಲ್ಲಿ ಹಿಡಿದು ಎಳೆದಾಗ ಎಲ್ಲಿ ಅಡಗಿತ್ತು ನಿನ್ನ ಮುಖ'', ''ಮಹಿಳೆಯರು ಹೇಗಿರಬೇಕು ಎಂಬುದನ್ನು ಬಡಾಯಿ ಕೊಚ್ಚಿಕೊಳ್ಳುವ ಇವನು ಜೆಂಟಲ್ ಮ್ಯಾನ್ ತರಹ ಯಾವತ್ತಾದರೂ ಬದುಕಿದ್ದಾನಾ.?'', ''ಇವನ ಪುಕ್ಕಟೆ ಉಪದೇಶ ಯಾರಿಗೆ ಬೇಕಾಗಿದೆ.?'' ಅಂತೆಲ್ಲಾ ನೆಟ್ಟಿಗರು ಹುಚ್ಚ ವೆಂಕಟ್ ಗೆ ಛೀಮಾರಿ ಹಾಕುತ್ತಿದ್ದಾರೆ.

  ಮಡಿಕೇರಿ ಬೀದಿಯಲ್ಲಿ ಕಾರಿನ ಗ್ಲಾಸ್ ಒಡೆದು 'ಹುಚ್ಚಾಟ' ಮಾಡಿದ ವೆಂಕಟ್ಮಡಿಕೇರಿ ಬೀದಿಯಲ್ಲಿ ಕಾರಿನ ಗ್ಲಾಸ್ ಒಡೆದು 'ಹುಚ್ಚಾಟ' ಮಾಡಿದ ವೆಂಕಟ್

  ಪಬ್ಲಿಸಿಟಿ ಗೀಳು.!

  ಪಬ್ಲಿಸಿಟಿ ಗೀಳು.!

  ಕಳೆದ ವರ್ಷ ಹುಚ್ಚ ವೆಂಕಟ್ ಮಾಡಿಕೊಂಡಿದ್ದ ರಂಪಾಟಗಳು ಒಂದೆರಡಲ್ಲ. ಚೆನ್ನೈ, ಮಡಿಕೇರಿ, ರಾಜಾನುಕುಂಟೆ ಸೇರಿದಂತೆ ಹಲವೆಡೆ 'ಹುಚ್ಚಾಟ' ಪ್ರದರ್ಶಿಸಿ ಪೊಲೀಸ್ ಠಾಣೆಗೆ ಅತಿಥಿಯಾಗಿದ್ದ ಹುಚ್ಚ ವೆಂಕಟ್ ಇದೀಗ ಮತ್ತೆ ಪಬ್ಲಿಸಿಟಿಗಾಗಿ ಹಳೇ ಟ್ರ್ಯಾಕ್ ಗೆ ಮರಳಿದ್ದಾರೆ. ಅವರಿವರ ಬಗ್ಗೆ ವಿಡಿಯೋ ಮಾಡುತ್ತ, ಬಾಯಿಗೆ ಬಂದ ಹಾಗೆ ಮಾತನಾಡುತ್ತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ ಹುಚ್ಚ ವೆಂಕಟ್.

  English summary
  Netizens are annoyed with Huccha Venkat for advising Rachita Ram and Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X