Just In
Don't Miss!
- News
ಸಂಚಾರ ನಿಯಮ ಉಲ್ಲಂಘನೆ: ವಿಶೇಷ ಕಾರ್ಯಾಚರಣೆ ಹೇಗಿರಲಿದೆ ಗೊತ್ತೇ?
- Lifestyle
ಬುಧವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಟಿಟಿಯಲ್ಲಿ ಸ್ಟಾರ್ ನಟರ ಚಿತ್ರಗಳು: ಅಸಮಾಧಾನಗೊಂಡ ಅಭಿಮಾನಿಗಳಿಂದ ಕಿತ್ತಾಟ
ಕನ್ನಡದ ಸ್ಟಾರ್ ನಟರ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಬಹುದು ಎಂದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಅಚ್ಚರಿ ವಿಚಾರ ಹೊರಬಿದ್ದಿದೆ. ಬಿಗ್ ಬಜೆಟ್ ಸಿನಿಮಾಗಳು ಥಿಯೇಟರ್ ರಿಲೀಸ್ ಆಗುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ನಡೆಯುತ್ತಿರುವ ಕಾಳಗದಿಂದ ಚಿತ್ರಮಂದಿರದಿಂದ ಸ್ಟಾರ್ ನಟರ ಚಿತ್ರಗಳು ಹಿಂದಕ್ಕೆ ಸರಿದಿದೆ ಎಂಬ ಸುದ್ದಿ ಹೊರಬಿದ್ದಿದೆ.
ಈ ಕುರಿತು ಕಾರ್ತಿಕ್ ಗೌಡ ಸುಳಿವು ನೀಡಿದ್ದು, ಮುಂದಿನ ವಾರದಲ್ಲಿ ಕೆಲವು ಸ್ಟಾರ್ ನಟರ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದನ್ನು ಪ್ರಕಟಿಸಲಿದೆ, ಇನ್ನು ಕೆಲವು ಚಿತ್ರಗಳು ಅದನ್ನು ಅನುಸರಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಟಾರ್ ನಟರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಒಟಿಟಿಯಲ್ಲಿ ರಿಲೀಸ್ ಮಾಡುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದು, ಕಿತ್ತಾಡುತ್ತಿದ್ದಾರೆ.

ಥಿಯೇಟರ್‌ನಲ್ಲೇ ನೋಡಬೇಕು
ಒಟಿಟಿಯಲ್ಲಿ ನಮ್ಮ ನಟನ ಸಿನಿಮಾ ಬಿಡುಗಡೆ ಮಾಡುವುದು ಬೇಡ. ನಾವು ಚಿತ್ರಮಂದಿರದಲ್ಲಿ ನೋಡಬೇಕು ಎಂದು ದರ್ಶನ್, ಪುನೀತ್, ಸುದೀಪ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ತಿಕ್ ಗೌಡ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಒಟಿಟಿ ಬಿಡುಗಡೆಯನ್ನು ಖಂಡಿಸುತ್ತಿದ್ದಾರೆ.
ನಿರ್ಮಾಪಕ-ಪ್ರದರ್ಶಕರ ಕಿತ್ತಾಟ: ಬಿಗ್ಬಜೆಟ್ ಸಿನಿಮಾಗಳು ಒಟಿಟಿಗೆ

ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡಿ
ಚಿತ್ರಮಂದಿರಗಳನ್ನು ಉಳಿಸಿ, ಸಿನಿಮಾ ಗೆಲ್ಲೋದೇ ಥಿಯೇಟರ್‌ನಲ್ಲಿ, ದಿನಗೂಲಿ ಕಾರ್ಮಿಕರ ಬಗ್ಗೆ ಚಿಂತೆ ಮಾಡಿ ಎಂದು ಕೆಲವರು ಸಲಹೆ ಕೊಡ್ತಿದ್ದಾರೆ. ಒಟಿಟಿಯಲ್ಲಿ ರಿಲೀಸ್ ಮಾಡಿ ಕಾರ್ಪೋರೆಟ್ ಸಂಸ್ಥೆಗಳನ್ನು ಉದ್ದಾರ ಮಾಡಬೇಡಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಿಮ್ಮ ಸಿನಿಮಾ ಬಿಡಿ, ನಮ್ಮ ಸಿನಿಮಾ ಬೇಡ
ಕಾರ್ತಿಕ್ ಗೌಡ ಅವರ ಟ್ವೀಟ್‌ಗೆ ಇತರೆ ಸ್ಟಾರ್ ನಟರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಿನಿಮಾಗಳನ್ನು ಬೇಕಾದರೆ ಒಟಿಟಿಯಲ್ಲಿ ರಿಲೀಸ್ ಮಾಡಿ, ನಮ್ಮ ನಟನ ಚಿತ್ರಗಳನ್ನು ನಾವು ಚಿತ್ರಮಂದಿರಲ್ಲೇ ನೋಡುತ್ತೇವೆ ಎಂದು ಹೇಳುತ್ತಿದ್ದಾರೆ.
ಸ್ಟಾರ್ ನಟರ ಚಿತ್ರಗಳ ರಿಲೀಸ್ ಬಗ್ಗೆ ನಿರ್ಮಾಪಕರ ಸಭೆ: ಯಾರೆಲ್ಲ ಸೇರಿದ್ದರು? ಏನು ಚರ್ಚಿಸಿದರು?

ಹೊಸ ಮಾದರಿ ಲಾಭ ಹಂಚಿಕೆ
ಚಿತ್ರ ಪ್ರದರ್ಶಕರು ಹೊಸ ಮಾದರಿ 'ಲಾಭ ಹಂಚಿಕೆ'ಗೆ ಒತ್ತಾಯ ಮಾಡಿದ ಕಾರಣ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನೇರ ಒಟಿಟಿಗೆ ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ. ಆದರೆ, ಯಾವ ಯಾವ ನಿರ್ಮಾಪಕರು ಎಂದು ಕಾರ್ತಿಕ್ ಗೌಡ ಹೇಳಿಲ್ಲ. ಸದ್ಯದಲ್ಲೇ ಪ್ರಕಟ ಮಾಡುತ್ತೇವೆ ಎಂದಿದ್ದಾರೆ. ಕಾರ್ತಿಕ್ ಗೌಡ ಟ್ವೀಟ್‌ನಂತೆ ಯಾವೆಲ್ಲ ಚಿತ್ರಗಳು ಒಟಿಟಿ ಮೊರೆ ಹೋಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.