Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅದೃಷ್ಟ ದೇವತೆಯ ಬಟ್ಟೆ ಬಿಚ್ಚಿ ರೂಮ್‌ನಲ್ಲಿ ಕೂರಿಸಿಕೊಳ್ಳಬೇಕು'; ದರ್ಶನ್ ಹೇಳಿಕೆಗೆ ಆಕ್ರೋಶ, ಫ್ಯಾನ್ಸ್ ಬೆಂಬಲ!
ಕ್ರಾಂತಿ ಚಿತ್ರ ಮುಂದಿನ ಜನವರಿ ತಿಂಗಳಿನ 26ರಂದು ಗಣ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ವರ್ಷ ದರ್ಶನ್ ಅವರ ಯಾವುದೇ ಚಿತ್ರಗಳೂ ಸಹ ತೆರೆ ಕಾಣದೇ ಇರುವುದರಿಂದ ಬೇಸರಕ್ಕೊಳಗಾಗಿರುವ ದರ್ಶನ್ ಅಭಿಮಾನಿಗಳು ಕ್ರಾಂತಿ ಚಿತ್ರವನ್ನು ವಿಜೃಂಭಣೆಯಿಂದ ಬರ ಮಾಡಿಕೊಳ್ಳಲು ಕಾತರರಾಗಿ ಕಾಯುತ್ತಿದ್ದಾರೆ. ಹೌದು, ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ರಾಬರ್ಟ್ ಬಳಿಕ ದರ್ಶನ್ ನಟನೆಯ ಯಾವುದೇ ಚಿತ್ರ ತೆರೆ ಕಂಡಿಲ್ಲ. ಹೀಗಾಗಿ ಕ್ರಾಂತಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಕೊಂಡಿದೆ.
ಅಭಿಮಾನಿಗಳು ಸ್ವತಃ ಕ್ರಾಂತಿ ಚಿತ್ರದ ಪ್ರಚಾರವನ್ನು ಹಲವಾರು ತಿಂಗಳುಗಳಿಂದ ಮಾಡುತ್ತಾ ಬರುತ್ತಿದ್ದು, ಈಗ ಸಿನಿಮಾ ಮೇಲಿನ ಹೈಪ್ ಹೆಚ್ಚಿಸಲು ಚಿತ್ರತಂಡ ಯುಟ್ಯೂಬ್ ಚಾನೆಲ್‌ಗಳಿಗೆ ದರ್ಶನ್ ಅವರ ಬಳಿ ಸಂದರ್ಶನವನ್ನು ನೀಡಿಸುತ್ತಿದೆ. ಹೌದು, ದರ್ಶನ್ ಅವರು ಇದೇ ಮೊದಲ ಬಾರಿಗೆ ತಮ್ಮ ಚಿತ್ರದ ಪ್ರಚಾರ ಮಾಡಲು ಹಲವಾರು ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಕ್ರಾಂತಿ ಸಿನಿಮಾ ಕುರಿತಾಗಿ, ತಾವು ನಡೆದು ಬಂದ ಹಾದಿಯ ಕುರಿತಾತಿ ಹಾಗೂ ತಮ್ಮ ಸಕ್ಸಸ್ ಕುರಿತಾಗಿ ವಿಶೇಷವಾಗಿ ಮನ ಬಿಚ್ಚಿ ಮಾತನಾಡಿದ್ದಾರೆ.
ಹೀಗೆ ಸಂದರ್ಶನದಲ್ಲಿ ನಿರ್ಮಾಪಕರು ಅವಕಾಶ ನೀಡುವುದು ಅದೃಷ್ಟ ಎಂದು ಮಾತನಾಡಿದ ದರ್ಶನ್ ಅದನ್ನು ದೇವತೆಗೆ ಹೋಲಿಸಿ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹೇಳಿಕೆ ಸದ್ಯ ವಿವಾದದ ರೂಪ ಪಡೆದುಕೊಳ್ಳುತ್ತಿದ್ದು, ಹಲವಾರು ನೆಟ್ಟಿಗರು ದರ್ಶನ್ ಹೇಳಿಕೆ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ದರ್ಶನ್ ಹೇಳಿಕೆಗೆ ಕಿಡಿ
"ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ, ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್‌ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು" ಎಂದು ದರ್ಶನ್ ನೀಡಿರುವ ಹೇಳಿಕೆಯ ವಿಡಿಯೊ ತುಣುಕನ್ನು ಹಂಚಿಕೊಳ್ಳುತ್ತಿರುವ ಹಲವಾರು ನೆಟ್ಟಿಗರು ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ. ಅದೃಷ್ಟ ದೇವತೆ ಎಂದರೆ ಲಕ್ಷ್ಮಿ ಎಂಬರ್ಥ, ಲಕ್ಷ್ಮಿ ದೇವತೆ ಬಗ್ಗೆ ದರ್ಶನ್ ಇಷ್ಟು ಕೆಳಮಟ್ಟದ ಹೇಳಿಕೆ ನೀಡಿದ್ದಾರೆ ಇವರ ಮೇಲೆ ಇದ್ದ ಗೌರವ ಕೂಡ ಹೋಯಿತು ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ದರ್ಶನ್ ಅವರನ್ನು ನಿಂದಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ರೀತಿಯ ಸಾಕಷ್ಟು ಪೋಸ್ಟ್ ಟ್ವಿಟರ್‌ನಲ್ಲಿ ಕಾಣಸಿಗುತ್ತಿವೆ.

ಬೆಂಬಲಕ್ಕೆ ನಿಂತ ಸೆಲೆಬ್ರಿಟೀಸ್!
ಇನ್ನು ದರ್ಶನ್ ಅವರಿಂದೆ ಸೆಲೆಬ್ರಿಟೀಸ್ ಎಂದೇ ಕರೆಸಿಕೊಳ್ಳುವ ಅವರ ಅಭಿಮಾನಿಗಳು ಈ ವಿವಾದದಲ್ಲಿಯೂ ಸಹ ತಮ್ಮ ನೆಚ್ಚಿನ ನಟನ ಪರವೇ ಬ್ಯಾಟ್ ಬೀಸಿದ್ದಾರೆ. ಈ ಹಿಂದೆ ಲಕ್ಷ್ಮಿ ನಮ್ಮ ಮನೆಯಲ್ಲೇ ಕಾಲು ಮುರಿದುಕೊಂಡು ಬಿದ್ದಿರಬೇಕು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು, ಅದೇ ಅರ್ಥದಲ್ಲಿ ದರ್ಶನ್ ಕೂಡ ಹೇಳಿದ್ದಾರೆ ಅಷ್ಟೇ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ದರ್ಶನ್ ಹೇಳಿರುವುದು ಅದೃಷ್ಟ ದೇವತೆಯ ಬಗ್ಗೆಯೇ ಹೊರತು ಲಕ್ಷ್ಮಿ ಬಗ್ಗೆ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ ಹಾಗೂ ದರ್ಶನ್ ಹೇಳಿರುವುದು ಯಾವ ದೇವರ ಬಗ್ಗೆಯೂ ಅಲ್ಲ, ಅದೃಷ್ಟ ಎಂಬ ಪದದ ಬಗ್ಗೆ ಅಷ್ಟೇ ಎಂದೂ ಸಹ ಹೇಳಿಕೆ ನೀಡಿದ್ದಾರೆ. ಹೀಗೆ ದರ್ಶನ್ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿಡಿದೆದ್ದ ದರ್ಶನ್ ಫ್ಯಾನ್ಸ್ ತಮ್ಮ ನಟನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇದೇ ಹೇಳಿಕೆಯನ್ನು ಬಾಲಿವುಡ್ ನಟ ಹೇಳಿದ್ರೆ?
ಇನ್ನು ನೆಟ್ಟಿಗನೋರ್ವ ದರ್ಶನ್ ಅವರು ನೀಡಿರುವ "ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ, ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್‌ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು" ಎಂಬ ಹೇಳಿಕೆ ಒಬ್ಬ ಬಾಲಿವುಡ್ ನಟನಿಂದ ಬಂದಿದ್ದರೆ ಇದೇ ರೀತಿ ಬೆಂಬಲ ಸೂಚಿಸ್ತಾ ಇದ್ರಾ ಎಂದು ದರ್ಶನ್ ಪರ ಬ್ಯಾಟ್ ಬೀಸಿದವರಿಗೆ ಟಾಂಗ್ ನೀಡಿದ್ದಾರೆ. ಬಾಲಿವುಡ್ ಮಂದಿ ಈ ರೀತಿ ಹೇಳಿಕೆ ನೀಡಿದ್ರೆ ಅವರ ಕೆರಿಯರ್ ಮುಗಿಸಿಬಿಡ್ತಿದ್ರಿ ಎಂದು ಕಾಮೆಂಟ್‌ಗಳೂ ಸಹ ಹರಿದುಬರುತ್ತಿವೆ.

ಎಡವಿದ್ರಾ ದರ್ಶನ್?
ಇನ್ನು ದರ್ಶನ್ ಪರ ಹಾಗೂ ವಿರೋಧವಾಗಿ ಎರಡು ಗುಂಪುಗಳು ಬ್ಯಾಟ್ ಬೀಸಿದ್ರೆ ಮತ್ತೊಂದಷ್ಟು ನೆಟ್ಟಿಗರು ದರ್ಶನ್ ಮಾತಿನ ಭರಾಟೆಯಲ್ಲಿ ಉದಾಹರಣೆ ಕೊಡಲು ಹೋಗಿ ಎಡವಿದ್ದಾರೆ ಹೊರತು ಇದನ್ನು ಅವರು ಉದ್ದೇಶಪೂರ್ವಕವಾಗಿ ಹೇಳಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಭಿನ್ನ ವಿಭಿನ್ನ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ದರ್ಶನ್ ಅವರ ಈ ವಿವಾದಾತ್ಮಕ ಹೇಳಿಕೆ ಯಾವ ಹಂತ ತಲುಪುತ್ತೋ ಕಾದು ನೋಡಬೇಕಿದೆ..