For Quick Alerts
  ALLOW NOTIFICATIONS  
  For Daily Alerts

  ಚಿತ್ರ ಬಿಡುಗಡೆಯಾಗಿ ಥಿಯೇಟರ್ ಖಾಲಿ ಹೊಡೆಯುತ್ತಿದ್ರೂ ನಟನಿಗೆ ಗಡ್ಡದ ಚಿಂತೆ; ಜಾಡಿಸಿದ ನೆಟ್ಟಿಗರು!

  |

  ಈ ಹಿಂದೆ ಮೋಸಗಾಳ್ಳು ಎಂಬ ಸಿನಿಮಾ ಮಾಡಿ ನೂರಾರು ಕೋಟಿ ಬಜೆಟ್ ಸಿನಿಮಾ ಎಂದು ಪುಂಗಿ ಊದಿದ್ದ ತೆಲುಗು ನಟ ಮಂಚು ವಿಷ್ಣು ಅಭಿನಯದ ಹೊಸ ಚಿತ್ರ ಜಿನ್ನ ಕಳೆದ ವಾರವಷ್ಟೇ ತೆರೆ ಕಂಡು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಹೌದು, ಮಂಚು ವಿಷ್ಣು, ಪಾಯಲ್ ರಜಪೂತ್ ಹಾಗೂ ಸನ್ನಿ ಲಿಯೋನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಜಿನ್ನ ಚಿತ್ರ 21ರ ಅಕ್ಟೋಬರ್ ಶುಕ್ರವಾರದಂದು ಬಿಡುಗಡೆಗೊಂಡಿತ್ತು.

  ಇನ್ನು ಚಿತ್ರ ಬಿಡುಗಡೆಯಾಗಿ ಆರು ದಿನಗಳಲ್ಲಿ ಒಂದು ಕೋಟಿ ಹತ್ತು ಲಕ್ಷ ರೂಪಾಯಿಗಳನ್ನು ಕಲೆಹಾಕಿದೆ. ಚಿತ್ರ ಸೇಫ್ ಆಗಬೇಕೆಂದರೆ ಇನ್ನೂ ನಾಲ್ಕು ಕೋಟಿಗಳನ್ನು ಗಳಿಸಲೇಬೇಕಿದೆ, ಗಳಿಸುವುದೂ ಇಲ್ಲ ಬಿಡಿ. ಹೀಗೆ ಮಂಚು ವಿಷ್ಣು ಅಭಿನಯದ ಮತ್ತೊಂದು ಚಿತ್ರ ಮಣ್ಣು ಮುಕ್ಕಿದೆ. ಜಟ್ಟಿ ಜಾರಿ ಬಿದ್ರೂ ಮೀಸೆ ಮಾತ್ರ ಮಣ್ಣಾಗಲಿಲ್ಲ ಅಂತಾರಲ್ಲ ಹಾಗೆ ಒಂದೆಡೆ ಚಿತ್ರ ಹೇಳ ಹೆಸರಿಲ್ಲದಂತೆ ಸೋತು ಸುಣ್ಣವಾಗಿದ್ದರೂ ಇದರ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಮಂಚು ವಿಷ್ಣು ತಮ್ಮ ಟ್ವಿಟರ್ ಖಾತೆಯಲ್ಲಿ ಗಡ್ಡ ಬೆಳೆಸಬೇಕೆಂಬ ಆಸೆ ಆದರೆ ಮನೆಯವರು ಒಪ್ಪುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

  ಇನ್ನು ಮೂವಿ ಆರ್ಟಿಸ್ಟ್ ಅಸೋಸಿಯೇಶನ್‌ನ ಅಧ್ಯಕ್ಷ ಎನಿಸಿಕೊಂಡಿರುವ ಮಂಚು ವಿಷ್ಣು ತನ್ನ ಸಿನಿಮಾ ಮಣ್ಣು ಮುಕ್ಕಿರುವುದರ ಕುರಿತೇ ತಲೆಕೆಡಿಸಿಕೊಳ್ಳದೇ ಇದ್ದಾರೆ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ತನ್ನ ಚಿತ್ರ ಸೋತು ಮಕಾಡೆ ಮಲಗಿರುವಾಗ ತಲೆ ಕೆಡಿಸಿಕೊಳ್ಳದ ಈತ ಬೇರೆ ಕಲಾವಿದರಿಗೆ ಅಧ್ಯಕ್ಷನಾಗಿ ಏನು ಮಾಡಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

  ಮೊದಲು ಒಂದೊಳ್ಳೆ ಸಿನಿಮಾ ಮಾಡುವುದು ಕಲಿ ಗುರು, ಆಮೇಲೆ ಈ ತರ ಚೈಲ್ಡ್ ಪೋಸ್ಟ್ ಮಾಡುವೆ ಎಂದು ಮಂಚು ವಿಷ್ಣು ವಿರುದ್ಧ ನೆಟ್ಟಿಗನೋರ್ವ ಕಿಡಿಕಾರಿದ್ದಾರೆ. ಅಣ್ಣ ಗಡ್ಡ ಬೆಳೆಸುವ ಯೋಜನೆಯಲ್ಲಿದ್ದಾರೆ ರಾಜಮೌಳಿ ಏನಾದರೂ ಚಿತ್ರ ಮಾಡ್ತಿದ್ದಾರೆ ಹೇಗೆ ಎಂದು ಮತ್ತೋರ್ವ ನೆಟ್ಟಿಗ ಕಾಲೆಳೆದಿದ್ದಾರೆ. ಮತ್ತೋರ್ವ ನೆಟ್ಟಿಗ ಈ ತರ ಇರೋಕಾದ್ರೂ ಹೇಗೆ ಸಾಧ್ಯ ಗುರು ಸ್ವಲ್ಪನಾದ್ರೂ ಬದಲಾಗು ಎಂದು ರಿಪ್ಲೇ ಮಾಡುವ ಮೂಲಕ ಮಂಗಳಾರತಿ ಮಾಡಿದ್ದಾರೆ.

  English summary
  Netizens trolled Vishnu Manchu as he is not worrying about his back to back flop movies
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X