For Quick Alerts
  ALLOW NOTIFICATIONS  
  For Daily Alerts

  ವಿರೋಧಿಗಳಿಗೆ ಉರಿಸೋಣ ಎಂದ ದರ್ಶನ್; ನಟನೇ ಹೀಗಂದ್ರೆ ಫ್ಯಾನ್ಸ್ ಕಥೆ ಏನೆಂದು ಕಿಡಿಕಾರಿದ ನೆಟ್ಟಿಗರು!

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಫ್ಯಾನ್ ವಾರ್ ದೊಡ್ಡಮಟ್ಟಕ್ಕೆ ತಲುಪಿದೆ. ಕಳೆದ ವಾರವಷ್ಟೇ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮ ನಡೆದ ದಿನ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಉಂಟಾಗಿದ್ದ ಇದಕ್ಕೆ ತಾಜಾ ಉದಾಹರಣೆ. ಇನ್ನು ಈ ಕಾರ್ಯಕ್ರಮದ ಕೊನೆಯಲ್ಲಿ ನಟ ದರ್ಶನ್ ಮೇಲೆ ಕಿಡಿಗೇಡಿಯೋರ್ವ ಚಪ್ಪಲಿ ಎಸೆದ ಘಟನೆ ನಡೆಯಿತು.

  ಇದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮಾಡಿದ ಕೃತ್ಯ ಎಂದು ದರ್ಶನ್ ಫ್ಯಾನ್ಸ್ ಆರೋಪಿಸಿದರೆ, ಮೂರನೇ ವ್ಯಕ್ತಿ ಎಸಗಿದ ಕೃತ್ಯವನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ ಅಷ್ಟೇ ಎಂದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಪ್ರತಿವಾದಿಸಿದ್ದರು. ಇನ್ನು ಈ ಕುರಿತು ಯುವ ರಾಜ್‌ಕುಮಾರ್ ಸಹ ಪ್ರತಿಕ್ರಿಯಿಸಿ ಯಾರೋ ಮಾಡಿದ ತಪ್ಪನ್ನು ಅಪ್ಪು ಫ್ಯಾನ್ಸ್ ಮೇಲೆ ಹಾಕಬೇಡಿ, ಆ ಕಾಣದ ಕೈಗಳು ಯಾರೆಂಬುದು ತಿಳಿಯಲಿ ಎಂದು ಪೋಸ್ಟ್ ಹಾಕಿ ಅಪ್ಪು ಫ್ಯಾನ್ಸ್ ವಿರುದ್ಧ ಕೈ ತೋರಿಸಿದ್ದವರಿಗೆ ಟಾಂಗ್ ನೀಡಿದ್ದರು.

  'ಕ್ರಾಂತಿ' ಟ್ರೈಲರ್ ರಿಲೀಸ್ ಈವೆಂಟ್ ಎಲ್ಲಿ ಯಾವಾಗ? ನಟ ದರ್ಶನ್ ಹೇಳಿದಿಷ್ಟು'ಕ್ರಾಂತಿ' ಟ್ರೈಲರ್ ರಿಲೀಸ್ ಈವೆಂಟ್ ಎಲ್ಲಿ ಯಾವಾಗ? ನಟ ದರ್ಶನ್ ಹೇಳಿದಿಷ್ಟು

  ಹೀಗೆ ಇಷ್ಟೆಲ್ಲಾ ಬೆಳವಣಿಗೆಗಳು ನಡೆದ ವಾರಕ್ಕೆ ಸರಿಯಾಗಿ ಅಂದರೆ ನಿನ್ನೆ ( ಡಿಸೆಂಬರ್ 25 ) ಹುಬ್ಬಳ್ಳಿಯಲ್ಲಿ ಕ್ರಾಂತಿ ಚಿತ್ರದ ಮೂರನೇ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ದೊಡ್ಡ ಮಟ್ಟದಲ್ಲಿ ನಡೆದ ಈ ಸಮಾರಂಭದಲ್ಲಿ ದರ್ಶನ್ ಮಾತನಾಡಿ ಹೊಸಪೇಟೆಯಲ್ಲಿ ತಮ್ಮ ಮೇಲೆ ಚಪ್ಪಲಿ ಎಸೆದದ್ದರ ಬಗ್ಗೆ ಕೂಡ ಮಾತನಾಡಿದರು. ಸದ್ಯ ಆ ಘಟನೆ ಕುರಿತು ಅವರು ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

  ದರ್ಶನ್ ಹೇಳಿದ್ದೇನು?

  ದರ್ಶನ್ ಹೇಳಿದ್ದೇನು?

  "ನೀವು ಏನೇ ಮಾಡಿದ್ರೂ ನಾವು ತಲೆಗೂ ಹಾಕಿಕೊಳ್ಳಲ್ಲ. ನೊಂದುಕೊಳ್ಳಲ್ಲ. ಬೇಜಾರು ಮಾಡಿಕೊಳ್ಳಲ್ಲ. ಹಿಂಗೆ (ಕಾಲರ್) ಅಂದ್ಕೊಂಡೇ ಓಡಾಡೋಣ. ಇನ್ನೂ ಒಂದು ಸ್ಟೆಪ್ ಮುಂದಕ್ಕೆ ಹೋಗಿ ಉರಿಸಬೇಕು ಅಂದ್ರೆ, ಇನ್ನೂ ಜಾಸ್ತಿ ಉರಿಸೋಣ. ನಾವು ಮಾತಾಡೋದು ಬೇಡ. ನಮ್ಮ ಕೆಲಸ ಮಾತಾಡಲಿ ಅಂತಾನೇ ನಾನು ಬಯಸೋದು." ಎಂದು ದರ್ಶನ್ ಪರೋಕ್ಷವಾಗಿ ಚಪ್ಪಲಿ ಎಸೆದವರಿಗೆ ವಾರ್ನಿಂಗ್ ನೀಡಿದರು.

  ಅಭಿಮಾನಿಗಳ ಮೆಚ್ಚುಗೆ

  ಅಭಿಮಾನಿಗಳ ಮೆಚ್ಚುಗೆ

  ಇನ್ನು ನಟ ದರ್ಶನ್ ಈ ರೀತಿಯ ಹೇಳಿಕೆ ನೀಡಿದ್ದು ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಅಭಿಮಾನಿಗಳು ದರ್ಶನ್ ಅವರ ಬಾಯಿಂದ ಈ ಡೈಲಾಗ್ ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಹೊಡೆದು, ಕೂಗಿ ಸಂಭ್ರಮಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಹ ಈ ವಿಡಿಯೊ ವೈರಲ್ ಆಗಿದ್ದು, ಇದಪ್ಪಾ ವಾರ್ನಿಂಗ್ ಎಂದರೆ, ಇದು ಡಿ ಬಾಸ್ ಎಂದರೆ ಎಂದು ದರ್ಶನ್ ಫ್ಯಾನ್ಸ್ ಬೆಂಬಲಿಸಿದ್ದಾರೆ.

  ನಟನೇ ಹೀಗಂದ್ರೆ ಫ್ಯಾನ್ಸ್ ಕಥೆ ಏನು?

  ನಟನೇ ಹೀಗಂದ್ರೆ ಫ್ಯಾನ್ಸ್ ಕಥೆ ಏನು?

  ಸದ್ಯ ದರ್ಶನ್ ಹೇಳಿಕೆಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಸಿನಿ ರಸಿಕರು ಹಾಗೂ ನೆಟ್ಟಿಗರು ಹೆಚ್ಚಾಗಿ ಇಂಥ ಹೇಳಿಕೆ ತಪ್ಪು ಎಂದಿದ್ದಾರೆ. ನಟನೇ ಈ ರೀತಿ ಉರಿಸೋಣ ಎಂದು ಹೇಳಿಕೆ ಕೊಟ್ಟರೆ ಅಭಿಮಾನಿಗಳು ಇತರ ನಟರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ, ದರ್ಶನ್ ಇಂಥ ಹೇಳಿಕೆ ನೀಡುವ ಬದಲು ಫ್ಯಾನ್ ವಾರ್ ಬೇಡ ಎಂದು ಅಭಿಮಾನಿಗಳಿಗೆ ಬುದ್ಧಿಯನ್ನಾದರೂ ಹೇಳಬೇಕಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ಹೊತ್ತಿಕೊಂಡು ಉರಿಯುತ್ತಿರುವ ಫ್ಯಾನ್ ವಾರ್ ಎಂಬ ಬೆಂಕಿಗೆ ದರ್ಶನ್ ಹೇಳಿಕೆ ಪೆಟ್ರೋಲ್ ಸುರಿದಂತಾಗಿದೆ ಎಂದೂ ಸಹ ಕೆಲವರು ಪ್ರತಿಕ್ರಿಯಿಸಿದ್ದಾರೆ.

  English summary
  Netizens trolling Darshan for his statement about Hospete slipper incident. Take a look
  Monday, December 26, 2022, 11:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X