Don't Miss!
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- News
ಜಾರ್ಖಂಡ್: ಆಸ್ಪತ್ರೆಯಲ್ಲಿ ಅಗ್ನಿ ದುರಂತ- ವೈದ್ಯ ದಂಪತಿ ಸೇರಿ 6 ಮಂದಿ ಸಾವು!
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Technology
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೆಡ್ ಬುಷ್ ವಿವಾದ: ಶೆಟ್ರೆ ಭಯನಾ? ಯಾಕೆ ಮಾತನಾಡುತ್ತಿಲ್ಲ? ರಿಷಬ್‌ಗೆ ತರಾಟೆ!
ಒಂದ್ಕಡೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಮತ್ತೊಂದ್ಕಡೆ ಡಾಲಿ ಧನಂಜಯ ನಿರ್ಮಿಸಿ ನಟಿಸಿರುವ 'ಹೆಡ್‌ಬುಷ್' ಸಿನಿಮಾ ಒಂದಷ್ಟು ವಿವಾದಗಳಿಂದ ಸುದ್ದಿ ಆಯಿತು. ಸಾಕಷ್ಟು ಜನ ಧನಂಜಯ್ ಪರ ನಿಂತಿದ್ದಾರೆ. ಚಿತ್ರರಂಗದ ಕೆಲ ತಾರೆಯರು ಧನಂಜಯ ಪರ ಬ್ಯಾಟ್ ಬೀಸಿದ್ದಾರೆ. ಆದರೆ ರಿಷಬ್ ಶೆಟ್ಟಿ ಯಾಕೆ ಮಾತನಾಡುತ್ತಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ.
'ಹೆಡ್‌ಬುಷ್' ಚಿತ್ರದಲ್ಲಿನ ಕೆಲ ದೃಶ್ಯಗಳ ಬಗ್ಗೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಧನಂಜಯ್ ವಿರುದ್ಧವೂ ಆಪಾದನೆ ಮಾಡಲಾಗುತ್ತಿದೆ. ಆದರೆ ಸಾಕಷ್ಟು ಜನ ಸಿನಿಮಾ ನೋಡಿ ಆಕ್ಷೇಪ ವ್ಯಕ್ತಪಡಿಸುವಂತಹ ಯಾವುದೇ ಅಂಶ ಚಿತ್ರದಲ್ಲಿ ಇಲ್ಲ. ಸಿನಿಮಾವನ್ನು ಸಿನಿಮಾ ಆಗಿ ನೋಡಿ. ಸುಖಾ ಸುಮ್ಮನೆ ಅದಕ್ಕೆ ಬೇರೆ ಬಣ್ಣ ಬಳಿಯಬೇಡಿ ಎಂದು ಹೇಳುತ್ತಾ ಬಂದಿದ್ದಾರೆ. ಕೆಲ ದಿನಗಳ ಹಿಂದೆ ಸಿನಿಮಾ ಪ್ರೀ ರಿಲೀಸ್ ಇವೆಂಟ್ ವೇದಿಕೆಯಲ್ಲಿ 'ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ' ಎಂದು ಧನಂಜಯ್ ಹೇಳಿದ್ದರು. ಅದೇ ಹೇಳಿಕೆಯನ್ನು ಬಳಸಿಕೊಂಡು ಡಾಲಿ ಪರವಾಗಿ ಅಭಿಯಾನ ಕೂಡ ನಡೀತು.
ಚಿತ್ರತಂಡವಲ್ಲ,
ಜನರೇ
ನೀಡುತ್ತಿದ್ದಾರೆ
'ಹೆಡ್
ಬುಷ್'
ಸಿನಿಮಾಕ್ಕೆ
ಉಚಿತ
ಟಿಕೆಟ್!
'ಕಾಂತಾರ' ಚಿತ್ರ ಎಲ್ಲಡೆ ಅದ್ಭುತ ಪ್ರದರ್ಶನ ಕಾಣುತ್ತಿದೆ. ದೊಡ್ಡದೊಡ್ಡ ಸೂಪರ್ ಸ್ಟಾರ್‌ಗಳೇ ಸಿನಿಮಾ ನೋಡಿ ಬಹುಪರಾಕ್ ಹೇಳುತ್ತಿದ್ದಾರೆ. 'ಹೆಡ್‌ಬುಷ್' ಸಿನಿಮಾ ರಿಲೀಸ್ ಒತ್ತಡದ ನಡುವೆಯೂ ಧನಂಜಯ 'ಕಾಂತಾರ' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.

ಯಾಕ್ ಶೆಟ್ರೆ ಭಯನಾ?
'ಹೆಡ್‌ಬುಷ್' ಸಿನಿಮಾ ವಿವಾದದ ವಿಚಾರದಲ್ಲಿ ಸಾಕಷ್ಟು ಜನ ಧನಂಜಯ ಪರ ನಿಂತಿದ್ದಾರೆ. ಆದರೆ ರಿಷಬ್ ಶೆಟ್ಟಿ ಯಾಕೆ ಇನ್ನು ಮೌನವಾಗಿದ್ದಾರೆ. ಯಾಕೆ ಶೆಟ್ರೆ ಭಯನಾ? ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಚಿತ್ರರಂಗ ಅಂದಮೇಲೆ ಒಬ್ಬರಿಗೆ ಒಬ್ಬರು ಜೊತೆಯಾಗಿ ಇರಬೇಕು. ಒಬ್ಬರಿಗೆ ಸಮಸ್ಯೆ ಅಂದಾಗ ಮತ್ತೊಬ್ಬರು ಬೆಂಬಲ ನೀಡಬೇಕು. 'ಕಾಂತಾರ' ಚಿತ್ರ ನೋಡಿ ಧನಂಜಯ ನಿಮ್ಮ ಅಭಿಮಾನಿಯಾದೆ ಎಂದು ಸಿನಿಮಾ ಮೆಚ್ಚಿ ಬರೆದುಕೊಂಡಿದ್ದರು. ಆದರೆ ಅದೇ ಧನಂಜಯ ಅವರ 'ಹೆಡ್‌ಬುಷ್' ವಿಚಾರದಲ್ಲಿ ನೀವು ಯಾಕೆ ಮಾತನಾಡುತ್ತಿಲ್ಲ ಎಂದು ಕೇಳುತ್ತಿದ್ದಾರೆ.
ಆ
ನಟರು
ಮಾಡಿದರೆ
ತಪ್ಪಲ್ಲ,
ಧನಂಜಯ್
ಮಾಡಿದರೆ
ತಪ್ಪೆ?
ನೆಟ್ಟಿಗರ
ಪ್ರಶ್ನೆ

ರಿಷಬ್‌ಗೆ ಅಭದ್ರತೆ ಕಾಡುತ್ತಿರಬಹುದು
"ರಿಷಬ್ ಶೆಟ್ಟಿ 'ಹೆಡ್‌ಬುಷ್' ಸಿನಿಮಾ ನೋಡಿ ಮಾತನಾಡದೇ ಇದ್ದರೂ ಪರವಾಗಿಲ್ಲ. ಕೊನೆ ಪಕ್ಷ ಈ ವಿವಾದದ ವಿಚಾರದಲ್ಲಿ ಒಂದು ಪೋಸ್ಟ್ ಮಾಡಿ ಬೆಂಬಲಕ್ಕೆ ನಿಲ್ಲಬಹುದಲ್ಲ. ಯಾಕೆ ಅವರಿಗೆ ಅಭದ್ರತೆ ಕಾಡುತ್ತಿದೆಯಾ? ರಿಷಬ್ ಬರೀ ರಕ್ಷಿತ್ ಶೆಟ್ಟಿಗೆ ಸಮಸ್ಯೆ ಆದರೆ ಮಾತ್ರ ಮಾತಾನಾಡುವುದು ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಬರೆಯುತ್ತಿದ್ದಾರೆ.

ಧನು ಜೊತೆ ಇದ್ದೀವಿ ಎಂದ ಲೀಲಾ
'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ನಾಯಕಿಯಾಗಿ ನಟಿಸಿರುವ ನಟಿ ಸಪ್ತಮಿ ಗೌಡ ಕೂಡ ಧನಂಜಯಗೆ ಬೆಂಬಲ ನೀಡಿದ್ದಾರೆ. ಸಿನಿಮಾವನ್ನು ಸಿನಿಮಾವಾಗಿ ನೋಡಿ ಎಂದು ಹೇಳಿದ್ದಾರೆ. "ನಾವು ನಿಮ್ಮ ಜೊತೆ ಸದಾ ಇರುತ್ತೇವೆ ಧನಂಜಯ" ಎಂದು ಟ್ವೀಟ್ ಮಾಡಿದ್ದಾರೆ. ಸಪ್ತಮಿ ಗೌಡ ಬೆಂಬಲಕ್ಕೆ ಸಾಕಷ್ಟು ಜನ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಏನಿದು 'ಹೆಡ್‌ಬುಷ್' ವಿವಾದ?
ಬೆಂಗಳೂರು ಭೂಗತಲೋಕದ ಕಥೆಯನ್ನು ಆಧರಿಸಿ 'ಹೆಡ್‌ಬುಷ್' ಸಿನಿಮಾ ನಿರ್ಮಾಣವಾಗಿದೆ. ಡಾನ್ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಬ್ಬರಿಸಿದ್ದಾರೆ. ಆದರೆ ಚಿತ್ರದ ದೃಶ್ಯವೊಂದಲ್ಲಿ ವೀರಗಾಸೆ ಕಲೆಗೆ ಅಪಮಾನ ಆಗಿದೆ ಎನ್ನುವ ಆರೋಪ ಬಂದಿತ್ತು. ಜೊತೆಗೆ ಬೆಂಗಳೂರು ಕರಗಕ್ಕೆ ಸಂಬಂಧಿಸಿದ ದೃಶ್ಯ ಹಾಗೂ ಪದಗಳ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ನಮ್ಮ ಸಿನಿಮಾದಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಧನಂಜಯ ಹೇಳಿದ್ದರು. ಆದರೆ ನಾವು ಚಿತ್ರದಲ್ಲಿ ಯಾವುದೇ ಕಲೆ, ಆಚರಣೆಗೆ ಅಪಮಾನ ಮಾಡುವಂತೆ ಕೆಲಸ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.