For Quick Alerts
  ALLOW NOTIFICATIONS  
  For Daily Alerts

  ಕತ್ರಿ ಪ್ರಯೋಗಕ್ಕೆ ಒಳಗಾದ 'ಮಾಸ್ತಿ ಗುಡಿ' ಚಿತ್ರದಲ್ಲಿ ಬದಲಾಗಿದೆ ಕ್ಲೈಮ್ಯಾಕ್ಸ್.!

  |

  ದುನಿಯಾ ವಿಜಯ್ ನಟನೆಯ 'ಮಾಸ್ತಿ ಗುಡಿ' ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿತ್ತು. ಅನೇಕ ಕಾರಣಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಕೂಡ ಲಭಿಸಿತ್ತು. ಆದ್ರೆ, ಸೆಕೆಂಡ್ ಹಾಫ್ ನಲ್ಲಿ 'ಮಾಸ್ತಿ ಗುಡಿ' ಸಿನಿಮಾ ತೀರಾ ಎಳೆದಂತಿದೆ ಎಂಬ ಪ್ರತಿಕ್ರಿಯೆ ಹಲವರಿಂದ ವ್ಯಕ್ತವಾಗಿತ್ತು. ಹೀಗಾಗಿ, 'ಮಾಸ್ತಿ ಗುಡಿ' ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲು ಚಿತ್ರತಂಡ ಮುಂದಾಗಿದೆ.

  'ಮಾಸ್ತಿ ಗುಡಿ' ಸಿನಿಮಾ ಬಿಡುಗಡೆಯಾಗಿ ನಾಲ್ಕೈದು ದಿನ ಕಳೆದಿದೆ ಅಷ್ಟೆ. ಹೀಗಿರುವಾಗಲೇ, 'ಮಾಸ್ತಿ ಗುಡಿ' ಸಿನಿಮಾದಲ್ಲಿ 12 ನಿಮಿಷಗಳ ಕೆಲ ದೃಶ್ಯಗಳನ್ನ ಕಟ್ ಮಾಡಿ, ಬದಲಾದ ಕ್ಲೈಮ್ಯಾಕ್ ಇರುವ ಹೊಸ ವರ್ಷನ್ ಚಿತ್ರವನ್ನ ರಿಲೀಸ್ ಮಾಡುವ ತಯಾರಿ ನಡೆಸಿದೆ. ಮುಂದೆ ಓದಿ...

  12 ನಿಮಿಷಗಳ ದೃಶ್ಯಕ್ಕೆ ಕತ್ತರಿ

  12 ನಿಮಿಷಗಳ ದೃಶ್ಯಕ್ಕೆ ಕತ್ತರಿ

  'ಮಾಸ್ತಿ ಗುಡಿ' ಸಿನಿಮಾದ ಒಟ್ಟು ಕಾಲಾವಧಿ 2 ಗಂಟೆ 30 ನಿಮಿಷ. ಆದರೆ ಈಗ ಚಿತ್ರದ 12 ನಿಮಿಷಗಳ ದೃಶ್ಯಗಳನ್ನ ತೆಗೆದು ಹಾಕುವುದಕ್ಕೆ ಚಿತ್ರತಂಡ ನಿರ್ಧಾರ ಮಾಡಿದೆ.

  ಕತ್ತರಿ ಕೆಲಸ ಶುರು

  ಕತ್ತರಿ ಕೆಲಸ ಶುರು

  ಈಗಾಗಲೇ 'ಮಾಸ್ತಿ ಗುಡಿ' ಸಿನಿಮಾದ ಟ್ರಿಮಿಂಗ್ ಕೆಲಸ ಶುರುವಾಗಿದೆಯಂತೆ. ಅದಕ್ಕಾಗಿ ನಿರ್ದೇಶಕ ನಾಗಶೇಖರ್ ಮತ್ತು ನಿರ್ಮಾಪಕ ಸುಂದರ್ ಪಿ.ಗೌಡ ಚೆನ್ನೈಗೆ ತೆರಳಿದ್ದಾರೆ.

  ಕತ್ತರಿ ಪ್ರಯೋಗಕ್ಕೆ ಕಾರಣ

  ಕತ್ತರಿ ಪ್ರಯೋಗಕ್ಕೆ ಕಾರಣ

  'ಮಾಸ್ತಿ ಗುಡಿ' ಸಿನಿಮಾ ಬಿಡುಗಡೆಯಾದ ಬಳಿಕ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅಲ್ಲದೆ, ನಿರ್ದೇಶಕರ ಕಥೆಯ ನಿರೂಪಣೆ ಅನೇಕರಿಗೆ ಹಿಡಿಸಿರಲಿಲ್ಲ. ಆ ಕಾರಣದಿಂದ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ.

  ಹೊಸ ವರ್ಷನ್ ರಿಲೀಸ್

  ಹೊಸ ವರ್ಷನ್ ರಿಲೀಸ್

  ಸಿನಿಮಾದ ಕೆಲ ದೃಶ್ಯಗಳನ್ನು ಕಟ್ ಮಾಡಿ ಒಂದು ಹೊಸ ವರ್ಷನ್ ರೆಡಿ ಮಾಡುವ ಕಾರ್ಯಗಳು ನಡೆದಿದೆಯಂತೆ. ಆದಷ್ಟು ಬೇಗ ಸೆನ್ಸಾರ್ ಮುಗಿಸಿ ಮಂಗಳವಾರ ಸಂಜೆಯಿಂದ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಹೊಸ ವರ್ಷನ್ ರಿಲೀಸ್ ಆಗಲಿದೆಯಂತೆ.

  ಯಾವ ದೃಶ್ಯ ಇರುವುದಿಲ್ಲ.?

  ಯಾವ ದೃಶ್ಯ ಇರುವುದಿಲ್ಲ.?

  ಚಿತ್ರದ 12 ನಿಮಿಷಗಳ ಕೆಲ ಸನ್ನಿವೇಶಗಳನ್ನ ತೆಗೆದು ಹಾಕಲು ಚಿತ್ರತಂಡ ಮುಂದಾಗಿದೆ. ಜೊತೆಗೆ ಬೇಕಾದ ಕಡೆಗಳಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಮಾಡಿ, ಚಿತ್ರದಲ್ಲಿ ಬದಲಾದ ಕ್ಲೈಮ್ಯಾಕ್ಸ್ ಇರಲಿದೆಯಂತೆ.

  ಅನಿಲ್, ಉದಯ್ ಸೀನ್ ಬದಲು

  ಅನಿಲ್, ಉದಯ್ ಸೀನ್ ಬದಲು

  ಖಳ ನಟರಾದ ಅನಿಲ್ ಮತ್ತು ಉದಯ್ ಕಾಣಿಸಿಕೊಂಡಿದ್ದ ಕ್ಲೈಮ್ಯಾಕ್ಸ್ ದೃಶ್ಯ ಸ್ವಲ್ಪ ಮಟ್ಟಿಗೆ ಬದಲಾಗಲಿದೆ. ಕ್ಲೈಮ್ಯಾಕ್ಸ್ ಸೀನ್ ನಲ್ಲಿ ಹೆಲಿಕಾಪ್ಟರ್ ನಿಂದ ಅನಿಲ್ ಮತ್ತು ಉದಯ್ ನೀರಿಗೆ ಜಿಗಿಯುವ ಸಂದರ್ಭದ ಜೊತೆ ಸಂದೇಶವಿರುವ ಒಂದು ದೃಶ್ಯವನ್ನ ಸೇರಿಸಲಾಗಿದೆಯಂತೆ.

  English summary
  New climax for Duniya Vijay's 'Maasthi Gudi' movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X