For Quick Alerts
  ALLOW NOTIFICATIONS  
  For Daily Alerts

  'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಅಂದವರು ಈ ಸ್ಟೋರಿ ನೋಡಿ!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕ್ರಾಂತಿ'. ಕಳೆದ ಕೆಲ ದಿನಗಳಿಂದ ಈ ಸಿನಿಮಾ ಬಗ್ಗೆ ಒಂದು ಗೊಂದಲ ಮೂಡಿತ್ತು. ಹೊಸ ಪೋಸ್ಟರ್‌ನಿಂದ ಆ ಗೊಂದಲಕ್ಕೆ ಈಗ ಬ್ರೇಕ್‌ ಬಿದ್ದಿದೆ.

  'ಕ್ರಾಂತಿ' ಟೈಟಲ್‌ನಲ್ಲೇ ವೈಬ್ರೇಷನ್ ಇದೆ. ಚಿತ್ರಕ್ಕೆ ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದು ದರ್ಶನ್‌- ರಚಿತಾ ರಾಮ್‌ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ಶೈಲಜಾ ನಾಗ್‌ ಹಾಗೂ ಬಿ. ಸುರೇಶ ದಂಪತಿ ನಿರ್ಮಾಣದ ಬಹುಕೋಟಿ ವೆಚ್ಚದ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಸಿನಿಮಾ ಡಬ್ಬಿಂಗ್ ಸಹ ಮುಗಿಸಿದ್ದಾರೆ. ಚಿತ್ರತಂಡ ಹೆಚ್ಚೇನು ಪ್ರಚಾರ ಮಾಡದಿದ್ದರೂ ಅಭಿಮಾನಿಗಳೇ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಚಾರ ಮಾಡ್ತಿದ್ದಾರೆ. ಅಭಿಮಾನಿಗಳ ಪ್ರೀತಿಗೆ ನಟ ದರ್ಶನ್‌ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ಮನ ಸೋತಿದ್ದಾರೆ.

  'ಕ್ರಾಂತಿ' ಕಥೆ ಏನು? 'ದರ್ಶನ್' ಪಾತ್ರ ಏನು? ಇಲ್ಲಿದೆ ಉತ್ತರ!'ಕ್ರಾಂತಿ' ಕಥೆ ಏನು? 'ದರ್ಶನ್' ಪಾತ್ರ ಏನು? ಇಲ್ಲಿದೆ ಉತ್ತರ!

  'ರಾಬರ್ಟ್' ಬ್ಲಾಕ್ ಬಸ್ಟರ್ ಹಿಟ್ ಆದ ಮೇಲೆ 'ಕ್ರಾಂತಿ' ಸಿನಿಮಾ ಬರ್ತಿದೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರುರಂತಹ ಘಟಾನುಘಟಿ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ. ಈಗಾಗಲೇ ಟೀಸರ್‌ ಹಾಗೂ ಪೋಸ್ಟರ್‌ಗಳು ರಿಲೀಸ್ ಆಗಿ ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಿಸಿದೆ. ಪೋಸ್ಟ್‌ ಪ್ರೊಡಕ್ಷನ್‌ ವರ್ಕ್ ಭರದಿಂದ ಸಾಗುತ್ತಿದ್ದು, ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಈ ವರ್ಷ 'ಕೆಜಿಎಫ್- 2', '777 ಚಾರ್ಲಿ', 'ವಿಕ್ರಾಂತ್ ರೋಣ' ಸಿನಿಮಾಗಳು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದ್ದು, ಅದೇ ಸಾಲಿಗೆ 'ಕ್ರಾಂತಿ' ಸಹ ಸೇರಿಕೊಳ್ಳುತ್ತಿದೆ.

  'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ

  ಸಿನಿಮಾ ಶುರು ಆದಾಗಲೇ ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತ ಘೋಷಿಸಿದ್ದರು. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ಪೋಸ್ಟರ್‌ ರಿಲೀಸ್ ಆಗಿತ್ತು. ಆದರೆ ಶೂಟಿಂಗ್ ನಡೀತಾ ನಡೀತ ಇದು ಪ್ಯಾನ್ ಇಂಡಿಯಾ ಸಿನಿಮಾ ಹೌದೋ ಅಲ್ವೋ ಅನ್ನುವ ಗೊಂದಲ ಶುರುವಾಗಿತ್ತು. ಇದೀಗ 5 ಭಾಷೆಗಳಲ್ಲಿ ಪೋಸ್ಟರ್‌ ರಿಲೀಸ್ ಮಾಡಿ ಗೊಂದಲಗಳಿಗೆ ಚಿತ್ರತಂಡ ತೆರೆ ಎಳೆದಿದೆ.

  ಹೊಸ ಹೇರ್‌ಸ್ಟೈಲ್ ಸೀಕ್ರೆಟ್ ಬಿಚ್ಚಿಟ್ಟ ದರ್ಶನ್: 'ಕಾಟೇರ'ನ ತಯಾರಿ ಹೇಗಿದೆ?ಹೊಸ ಹೇರ್‌ಸ್ಟೈಲ್ ಸೀಕ್ರೆಟ್ ಬಿಚ್ಚಿಟ್ಟ ದರ್ಶನ್: 'ಕಾಟೇರ'ನ ತಯಾರಿ ಹೇಗಿದೆ?

   ಗೊಂದಲಕ್ಕೆ ಕಾರಣ ಏನು?

  ಗೊಂದಲಕ್ಕೆ ಕಾರಣ ಏನು?

  'ಕ್ರಾಂತಿ' ಸಿನಿಮಾದಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ನಾಯಕ ಹೋರಾಟ ಮಾಡುವ ಕಥೆ ಇದೆ ಎನ್ನಲಾಗ್ತಿದೆ. ಚಿತ್ರದಲ್ಲಿ ದರ್ಶನ್ ಎನ್‌ಆರ್‌ಐ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಕಥೆಯನ್ನು ಎಲ್ಲಾ ಭಾಷೆಗಳಿಗೂ ಒಪ್ಪುವಂತೆ ಮಾಡಲು ಸಾಧ್ಯಾನಾ ? ಅನ್ನುವುದು ಕೆಲವರ ಪ್ರಶ್ನೆ ಆಗಿತ್ತು. ಇನ್ನು ದರ್ಶನ್‌ ಹುಟ್ಟುಹಬ್ಬದ ದಿನ ಕನ್ನಡದಲ್ಲಿ ಮಾತ್ರ ಟೀಸರ್ ರಿಲೀಸ್ ಆಗಿತ್ತು. ಟೀಸರ್‌ ಕೊನೆಯಲ್ಲಿ ಕನ್ನಡದಲ್ಲಷ್ಟೇ ಸಿನಿಮಾ ಹೆಸರನ್ನು ನಮೂದಿಸಲಾಗಿತ್ತು. ಹಾಗಾಗಿ ಸಹಜವಾಗಿಯೇ ಇಂತಹ ಗೊಂದಲ ಮೂಡಿತ್ತು.

  ಎಲ್ಲೆಲ್ಲೂ 'ಕ್ರಾಂತಿ'ಯ ಕಹಳೆ

  ಚಿತ್ರತಂಡದಿಂದ ಇನ್ನು 'ಕ್ರಾಂತಿ' ಸಿನಿಮಾ ಪ್ರಚಾರ ಶುರುವಾಗಿಲ್ಲ. ಆದರೆ ಅಭಿಮಾನಿಗಳೇ ಹಬ್ಬದ ರೀತಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ದೇವಸ್ಥಾನ, ಹಬ್ಬ, ಜಾತ್ರೆ ಎಲ್ಲೆಲ್ಲೂ ಸಿನಿಮಾ ಪೋಸ್ಟರ್‌ಗಳು ರಾರಾಜಿಸುವಂತೆ ಮಾಡುತ್ತಿದ್ದಾರೆ. ನಾನಾ ಜಿಲ್ಲೆಗಳಲ್ಲಿ 'ಕ್ರಾಂತಿ' ಬೈಕ್‌ ಜಾಥಾ ಮಾಡಿದ್ದಾರೆ. ರಿಲೀಸ್‌ ಡೇಟ್ ಅನೌನ್ಸ್ ಆಗುವುದಕ್ಕೂ ಮೊದಲೇ ತಿಂಗಳುಗಳ ಕಾಲ ಈ ರೀತಿ ಅಭಿಮಾನಿಗಳು ಸಿನಿಮಾ ಪ್ರಚಾರ ಮಾಡುತ್ತಿರುವುದು ಇದೇ ಮೊದಲು.

   'ಕ್ರಾಂತಿ' ಹೊಸ ಪೋಸ್ಟರ್ ಸೂಪರ್

  'ಕ್ರಾಂತಿ' ಹೊಸ ಪೋಸ್ಟರ್ ಸೂಪರ್

  ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಇಂದು(ಆಗಸ್ಟ್ 05) ಬಿಡುಗಡೆ ಆಗಿರುವ 'ಕ್ರಾಂತಿ' ಹೊಸ ಪೋಸ್ಟರ್ ಅಭಿಮಾನಿಗಳ ಮನಗೆದ್ದಿದೆ. ಬ್ಯಾಸ್ಕೆಟ್ ಬಾಲ್‌ ಹಿಡಿದು ಸ್ಟೈಲಿಶ್ ಲುಕ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ. 'ಒಂಟಿಯಾಗಿ ಹೋರಾಡುವುದನ್ನು ಕಲಿ' ಅನ್ನುವ ಪವರ್‌ಫುಲ್ ಸ್ಟೇಟ್‌ಮೆಂಟ್‌ ಗಮನ ಸೆಳೆಯುತ್ತಿದೆ.

  English summary
  New Poster Gave Clarification That Kranti is Pan India Movie. Know More.
  Friday, August 5, 2022, 19:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X