twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರದ ಹೊಸ ಆದೇಶ: ಫೇಸ್‌ಬುಕ್, ಟ್ವಿಟ್ಟರ್, ವಾಟ್ಸ್‌ಆಪ್‌ ಬಳಕೆದಾರರೆ ಗಮನಿಸಿ

    |

    ಸಾಮಾಜಿಕ ಜಾಲತಾಣ ಎಂಬುದು ಪಿಡುಗಾಗಿ ಪರಿಣಮಿಸುವ ಬಗ್ಗೆ ವಿಶ್ವದಾದ್ಯಂತ ಹಲವಾರು ಮಂದಿ ಈಗಾಗಲೇ ಮಾತನಾಡುತ್ತಿದ್ದಾರೆ.

    ಸಾಮಾಜಿಕ ಜಾಲತಾಣದಿಂದ ಭಾರತದಲ್ಲಿ ಸಾಕಷ್ಟು ಉತ್ತಮ ಕಾರ್ಯಗಳಾಗಿವೆ. ಜೊತೆಗೆ ಇದೇ ಸಾಮಾಜಿಕ ಜಾಲತಾಣಗಳಿಂದಾಗಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹಿಂಸೆಗಳೂ ಆಗಿವೆ. ಸುಳ್ಳು ಸುದ್ದಿಗಳು, ಅವಹೇಳನ, ದ್ವೇಷ ಹರಡಿಸುವುದು, ಐಡಿಯಾಲಜಿ ಬಿತ್ತುವಿಕೆ ಇನ್ನೂ ಹಲವಾರು ಋಣಾತ್ಮಕ ಕಾರ್ಯಗಳಿಗೆ ಸಾಮಾಜಿಕ ಜಾಲತಾಣ ಹೆಚ್ಚು ಬಳಕೆ ಆಗುತ್ತಿರುವುದನ್ನು ಅಲ್ಲಗಳೆಯಲಾಗದು.

    ಒಟಿಟಿಗಳಿಗೆ ಸರ್ಕಾರ ಮೂಗುದಾರ: ಸರ್ಕಾರದ ನಿಗಾವಣೆಯಲ್ಲಿ 'ಸ್ಟ್ರೀಮಿಂಗ್'ಒಟಿಟಿಗಳಿಗೆ ಸರ್ಕಾರ ಮೂಗುದಾರ: ಸರ್ಕಾರದ ನಿಗಾವಣೆಯಲ್ಲಿ 'ಸ್ಟ್ರೀಮಿಂಗ್'

    ಇದೀಗ ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ. ಸಾಮಾಜಿಕ ಜಾಲತಾಣ ಮಾತ್ರವೇ ಅಲ್ಲದೆ, ಡಿಜಿಟಲ್ ಮಾಧ್ಯಮ, ಒಟಿಟಿ, ಸಾಮಾಜಿಕ ಜಾಲತಾಣ, ಸಾ.ಮಾಧ್ಯಮಗಳ ಮೇಲೆ ಒಟ್ಟಿಗೆ ನಿಯಂತ್ರಣ ಹೇರಲು ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ ಕೇಂದ್ರ ಸರ್ಕಾರ.

    ಇದೇ ದಿನ ಹೊಸ ಮಾಹಿತಿ ತಂತ್ರಜ್ಞಾನ ಆದೇಶ ಹೊರಡಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ, ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ಗಳು, ಸರ್ಕಾರದಿಂದ ಆದೇಶ ಬಂದ ಅಥವಾ ಯಾವುದೇ ನ್ಯಾಯಾಲಯದ ಆದೇಶ ಬಂದ ಕೂಡಲೇ ಸಂಬಂಧಿತ ಪೋಸ್ಟ್ ಅನ್ನು ತೆಗೆಯಬೇಕಿದೆ.

    36 ಗಂಟೆ ಒಳಗಾಗಿ ಪೋಸ್ಟ್ ತೆಗೆಯಬೇಕು

    36 ಗಂಟೆ ಒಳಗಾಗಿ ಪೋಸ್ಟ್ ತೆಗೆಯಬೇಕು

    ಒಂದು ವೇಳೆ ಯಾವುದೋ ಪೋಸ್ಟ್ ಒಂದರ ಬಗ್ಗೆ ದೂರು ದಾಖಲಾಗಿ, ಸರ್ಕಾರ ಅಥವಾ ನ್ಯಾಯಾಲಯ ಆ ಪೋಸ್ಟ್ ಅನ್ನು ತೆಗೆಯಲು ಆದೇಶಿಸಿದ 36 ಗಂಟೆಯ ಒಳಗಾಗಿ ಪೋಸ್ಟ್ ಅನ್ನು ತೆಗೆಯಲೇ ಬೇಕಾಗಿದೆ. ಅಷ್ಟೇ ಅಲ್ಲದೆ, ಈ ಸಂಸ್ಥೆಗಳು 72 ಗಂಟೆಯ ಒಳಗಾಗಿ ತನಿಖೆಗೆ ಸಹಕರಿಸಬೇಕಾಗಿರುತ್ತದೆ. ನ್ಯಾಯಾಲಯ ಅಥವಾ ತನಿಖಾ ಸಂಸ್ಥೆಯ ಆದೇಶಕ್ಕೆ ಫೇಸ್‌ಬುಕ್, ಟ್ವಿಟ್ಟರ್‌ಗಳು ಸ್ಪಂದಿಸಲೇ ಬೇಕಿದೆ.

    ದೂರು ನೀಡಿದ ಕೂಡಲೇ ಪೋಸ್ಟ್ ತೆಗೆಯಬೇಕು

    ದೂರು ನೀಡಿದ ಕೂಡಲೇ ಪೋಸ್ಟ್ ತೆಗೆಯಬೇಕು

    ಲೈಂಗಿಕ ಕ್ರಿಯೆ, ಲೈಂಗಿಕ ನಡವಳಿಕೆ, ಪೂರ್ಣ ಅಥವಾ ಭಾಗಶಃ ನಗ್ನತೆಯಿಂದ ವ್ಯಕ್ತಿಯನ್ನು ಚಿತ್ರಿಸಿರುವ ಪೋಸ್ಟ್‌ಗಳ ಬಗ್ಗೆ ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ಆ ಪೋಸ್ಟ್‌ ಅನ್ನು ಅಥವಾ ಲಿಂಕ್‌ ಅನ್ನು ಸಾಮಾಜಿಕ ಜಾಲತಾಣ ವೇದಿಕೆಗಳು ತೆಗೆದುಹಾಕಬೇಕು.

    ತನಿಖಾ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು

    ತನಿಖಾ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು

    ಯಾವುದೇ ಸಾಮಾಜಿಕ ಮಾಧ್ಯಮ ಸಂಸ್ಥೆಗಳು (ವಾಟ್ಸ್‌ಆಪ್, ಟೆಲಿಗ್ರಾಂ ಇನ್ನಿತರೆ ಸಂವಹನ ಆಪ್‌ ಸಂಸ್ಥೆಗಳು ಸೇರಿದಂತೆ) ಯಾವುದೇ ಸಂದೇಶವನ್ನು ಯಾರು ಕಳಿಸಿದ್ದಾರೆ ಎಂಬ ಮೂಲದ ಮಾಹಿತಿಯನ್ನು ತನಿಖೆಯ ಅಗತ್ಯಕ್ಕಾಗಿ ತನಿಖಾ ಸಂಸ್ಥೆ ಜೊತೆ ಹಂಚಿಕೊಳ್ಳಬೇಕು.

    Recommended Video

    ನನ್ನ ಸೆಲೆಬ್ರಿಟಿಗಳಿಂದ ತಪ್ಪಾಗಿದೆ ಪ್ಲೀಸ್ ಕ್ಷಮಿಸಿ ಜಗ್ಗಣ್ಣ | Darshan Apologize to Jaggesh
    ಒಟಿಟಿಗಳಿಗೆ ಸಹ ಮಾರ್ಗಸೂಚಿ ಪ್ರಕಟ

    ಒಟಿಟಿಗಳಿಗೆ ಸಹ ಮಾರ್ಗಸೂಚಿ ಪ್ರಕಟ

    ಬಳಕೆದಾರರ ಗೌಪ್ಯತೆಯನ್ನು ಕಾಪಾಡುವುದಾಗಿ ಎಲ್ಲ ಸಾಮಾಜಿಕ ಮಾಧ್ಯಮಗಳು, ಜಾಲತಾಣಗಳು ತಾವುಗಳು , ಆಪ್‌ಗಳು ಪ್ರಮಾಣೀಕರಿಸಿ ಅದನ್ನು ಪ್ರಕಟಿಸಬೇಕು. ಅಲ್ಲದೆ ತಾವುಗಳು ಸರ್ಕಾರದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಧೀನದಲ್ಲಿರುವುದನ್ನು ಸಹ ಪ್ರಕಟಿಸಬೇಕು ಎಂದು ಸರ್ಕಾರವು ಸೂಚಿಸಿದೆ. ಇದರ ಜೊತೆಗೆ ಒಟಿಟಿಗಳಿಗೆ ಸಹ ಹಲವಾರು ಮಾರ್ಗಸೂಚಿಗಳನ್ನು ಸರ್ಕಾರ ಪ್ರಕಟಿಸಿದೆ.

    English summary
    Government new rules for Facebook, Twitter, Whats app and other social media, digital media and OTT.
    Thursday, February 25, 2021, 15:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X