For Quick Alerts
  ALLOW NOTIFICATIONS  
  For Daily Alerts

  ಹೊಸಬರ ಹವಾ : 2015ರಲ್ಲಿ ನಡೆಯುವುದಾ 2013ರ ಮ್ಯಾಜಿಕ್?

  By ಜೀವನರಸಿಕ
  |

  ಒಬ್ಬ ಹೊಸ ನಿರ್ದೇಶಕನ ಸಿನಿಮಾ ಗೆದ್ರೆ ಹತ್ತು ಹೊಸ ನಿರ್ದೇಶಕರಿಗೆ ಅವಕಾಶ ಸಿಗುತ್ತೆ. ಹಾಗೇ ಒಂದು ಹೊಸ ಸಿನಿಮಾ ಗೆದ್ದಾಗ ಕೂಡ. ಈ ಮಾತನ್ನ ನಾವು ಹೇಳಿದ್ದಲ್ಲ.., ಸ್ಯಾಂಡಲ್ವುಡ್ನ ರಾಕಿಂಗ್ಸ್ಟಾರ್ ಯಶ್ ಹೇಳಿದ್ದು.. ಇದು ರಾಮಾಚಾರಿ ಸಿನಿಮಾ ಮಾಡೋವಾಗ ನಿರ್ದೇಶಕ ಸಂತೋಷ್ಗೆ ಯಶ್ ಹೇಳಿದ್ದು.

  ಈ ಪೀಠಿಕೆ ಹಾಕ್ತಿರೋದು ಯಶ್ ವಿಷ್ಯಕ್ಕೋ ಅಥವಾ ಸಂತೋಷ್ ಅವ್ರ ವಿಷ್ಯಕ್ಕೋ ಅಲ್ಲ. ಯಶ್ ಮಾತು ಈ ಹಿಂದೆಯೂ ಸತ್ಯ ಆಗಿತ್ತು. ಅಂತಹ ಸತ್ಯ ವಾಸ್ತವವಾಗಿ ಕಣ್ಣೆದುರು ಬಂದ ಅರಿವಿದ್ದೇ ಯಶ್ ಈ ಮಾತನ್ನಾಡಿದ್ದು. ಅದಕ್ಕೊಂದು ಬೆಸ್ಟ್ ಎಕ್ಸಾಂಪಲ್ 2013ರ ಸ್ಯಾಂಡಲ್ವುಡ್ ಸಿನಿಮಾಗಳು.

  2013 ಸ್ಯಾಂಡಲ್ವುಡ್ನ ಮಟ್ಟಿಗೆ ಜೀವಂತಿಕೆಯ ವರ್ಷ. ಕಳೆದು ಹೋಗಿದ್ದ ಹೊಸಬರ ಸಿನಿಮಾಗಳು ಅನ್ನೋ ಲೇಬಲ್ ಮತ್ತೆ ಚಾಲ್ತಿಗೆ ಬಂದ ವರ್ಷ. ಹೊಸಬರ ಹೊಸತನದ ಸಿನಿಮಾಗಳು ಮ್ಯಾಜಿಕ್ ಮಾಡಿದ ವರ್ಷ. ಈಗ ಮತ್ತೆ ತರ್ಕ ಶುರುವಾಗಿರೋದು 2015 ಮತ್ತೊಂದು 2013 ಆಗುತ್ತಾ ಅನ್ನೋದು. ಯಾಕಂದ್ರೆ ಈ ವರ್ಷವೂ 2013ರ ಲೂಸಿಯಾ.. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯಂತಹಾ ಸಿನಿಮಾಗಳು ನಿಧಾನಕ್ಕೆ ಸದ್ದು ಮಾಡ್ತಿವೆ.. [ಸದ್ದಿಲ್ಲದೇ ಗೆದ್ದಿದೆ ಹೊಸಬರ ಚಿತ್ರ ಬಾಂಬೆ ಮಿಠಾಯಿ]

  ರಂಗೀನ್ ರಂಗಿತರಂಗ

  ರಂಗೀನ್ ರಂಗಿತರಂಗ

  ಅನೂಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಚಿತ್ರದ ರಂಗು ರಾಜ್ಯಾದ್ಯಂತ ಮೋಡಿ ಮಾಡ್ತಿದೆ. ವಡ್ಸರ್ರ ಅನ್ನೋ ಶಾರ್ಟ್ ಮೂವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಾರ್ಡ್ ಪಡ್ಕೊಂಡಿದ್ದ ನಿರ್ದೇಶಕ ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೂಲಕ ಪರಭಾಷಾ ಸಿನಿಮಾಗಳಿಗೆ ಸೆಡ್ಡು ಹೊಡೀತಿದ್ದಾರೆ.

  ಒಂದ್ಸಾರಿ ನೋಡಿ ಗಣಪನನ್ನ

  ಒಂದ್ಸಾರಿ ನೋಡಿ ಗಣಪನನ್ನ

  ಹೊಸ ನಟನ ನಟಿಯರು ಮತ್ತು ತಂತ್ರಜ್ಞರ ತಂಡವೇ ತುಂಬಿರೋ 'ಗಣಪ' ಚಿತ್ರದ ಬಗ್ಗೆಯೂ ಭರಪೂರ ಪಾಸಿಟೀವ್ ವಿಮರ್ಶೆಗಳು ಕೇಳಿ ಬಂದಿವೆ. ಒಂದ್ಸಾರಿ ಚಿತ್ರವನ್ನ ನೋಡಿ ಅಂತಿದ್ದಾರೆ ಚಿತ್ರ ನೋಡಿದ ಪ್ರೇಕ್ಷಕರು.

  ಪ್ಲಸ್ ಮಾಸ್ ಅಥವಾ ಕ್ಲಾಸ್

  ಪ್ಲಸ್ ಮಾಸ್ ಅಥವಾ ಕ್ಲಾಸ್

  'ದ್ಯಾವ್ರೇ' ಸಿನಿಮಾ ಮೂಲಕ ಮತ್ತೊಬ್ಬ ಟಿಪಿಕಲ್ ಡೈರೆಕ್ಟರ್ ಅನ್ನಿಸಿಕೊಂಡಿದ್ದ ಗಡ್ಡ ವಿಜಿ ನಿರ್ದೇಶನದ ಪ್ಲಸ್ ಸೈಕೋಲಾಜಿಕಲ್ ಥ್ರಿಲ್ಲರ್ ತರಹ ಕಾಣಿಸ್ತಿದ್ದು, ಚಿತ್ರ ಮತ್ತೊಂದು ಲೂಸಿಯಾ ತರಹ ಇರಲಿದೆ ಅಂತಿದೆ ಗಾಂಧಿನಗರ.

  ಪವನ್ರ ನಿಕೋಟಿನ್

  ಪವನ್ರ ನಿಕೋಟಿನ್

  'ಲೂಸಿಯಾ' ನಿರ್ದೇಶಕ ಪವನ್ ಲೂಸಿಯಾ ಚಿತ್ರದ ಮೂಲಕ ಭಾರೀ ಪ್ರಶಂಸೆ ಗಳಿಸಿದ್ರು. ಪಾಕಿಸ್ತಾನದಲ್ಲೂ ಚಿತ್ರ ಪ್ರದರ್ಶನವಾಯ್ತು. ಪಾಕಿಸ್ತಾನದಲ್ಲಿ ತೆರೆಕಂಡ ಮೊದಲ ಕನ್ನಡ ಚಿತ್ರ ಅನ್ನಿಸಿಕೊಳ್ತು. ಈಗ 'ನಿಕೋಟಿನ್' ರೆಡಿಯಾಗ್ತಿದೆ. ಲೂಸಿಯಾ ತರಹದ್ದೇ ಮತ್ತೊಂದು ಥ್ರಿಲ್ಲರ್ ಈ ವರ್ಷದ ಕೊನೆಯಲ್ಲಿ ಹೊರಬರುತ್ತೆ ಅಂತಿದೆ ಚಿತ್ರದ ಮೂಲ.

  ಸಿಂಪಲ್ಲಾಗ್ ಇನ್ನೊಂದ್ ಲವ್ಸ್ಟೋರಿ

  ಸಿಂಪಲ್ಲಾಗ್ ಇನ್ನೊಂದ್ ಲವ್ಸ್ಟೋರಿ

  2013ರಲ್ಲಿ ಬಂದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಯುವ ಚಿತ್ರಪ್ರೇಮಿಗಳ ಮನಸ್ಸಿಗೆ ಪುಳಕ ನೀಡಿದ ಚಿತ್ರ. ಪಡ್ಡೆಗಳ ಕಿವಿಗಳಿಗೆ ಕಚಗುಳಿ ಇಟ್ಟ ಚಿತ್ರ ಕೂಡ. ಈಗ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಮೂಲಕ ಚಿತ್ರ ತಂಡ ಶೂಟಿಂಗ್ ಮುಗಿಸುವ ಹಂತದಲ್ಲಿದೆ. ಮೇಘನಾ ಗಾಂವ್ಕರ್ ನಾಯಕಿಯಾಗಿರೋ ಚಿತ್ರ ಅಕ್ಟೋಬರ್ ವೇಳೆಗೆ ತೆರೆಗಪ್ಪಳಿಸಲಿದೆ.

  ಮುದ್ದುಮನಸೇ ಮೋಡಿ

  ಮುದ್ದುಮನಸೇ ಮೋಡಿ

  ಮತ್ತೊಂದು ಹೊಸಬರ ಪ್ರಯತ್ನ 'ಮುದ್ದು ಮನಸೇ' ಹಾಡುಗಳ ಮೂಲಕ ಇಷ್ಟವಾಗಿದೆ. ಅರುಗೌಡ ನಾಯಕನಾಗಿರೋ ಚಿತ್ರದ ನಿರ್ದೇಶಕ ಅನಂತ್ ಶೈನ್ ಕೂಡ ಹೊಸಬರೇ. ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಮತ್ತು ಐಶ್ವರ್ಯ ನಾಗ್ ನಾಯಕಿಯರಾಗಿದ್ದು, ಚಿತ್ರ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುತ್ತೆ.

  ವೃಷಭ್ರ ರಿಕ್ಕಿ

  ವೃಷಭ್ರ ರಿಕ್ಕಿ

  ಸಿಂಪಲ್ ಟೀಂನ ಮತ್ತೊಂದು ಪ್ರತಿಭೆ ವೃಷಭ್ ಶೆಟ್ಟಿ ಚೊಚ್ಚಲ ನಿರ್ದೇಶನದ 'ರಿಕ್ಕಿ' ನಕ್ಸಲಿಸಂ ಜೊತೆಗೊಂದು ನವಿರಾದ ಪ್ರೇಮಕಥೆಯ ಎಳೆಯೊಂದಿಗೆ ಆಗಸ್ಟ್ ತಿಂಗಳಲ್ಲಿ ಪ್ರೇಕ್ಷಕರ ಮುಂದಿರಲಿದೆ. ರಿಕ್ಕಿ ಬಗ್ಗೆ ಕೂಡ ಸ್ಯಾಂಡಲ್ವುಡ್ನಲ್ಲಿ ತುಂಬಾನೇ ನಿರೀಕ್ಷೆಯಿದೆ.

  ಹಾಫ್ ಮೆಂಟ್ಲು

  ಹಾಫ್ ಮೆಂಟ್ಲು

  ನವನಟ ಸಂದೀಪ್-ಸೋನು ಗೌಡ ಜೋಡಿಯಾಗಿರೋ ಚಿತ್ರದ ನಿರ್ದೇಶಕ ಲಕ್ಷ್ಮಿ ದಿನೇಶ್, ಚಿತ್ರದ ಟ್ರೈಲರ್ ನೋಡಿದ ಗಾಂಧಿನಗರ ಒಂದ್ಸಾರಿ ಸಿನಿಮಾ ನೋಡ್ಬೇಕು ಅಂತಿದೆ. ಇಲ್ಲಿ ಕೂಡ ಸಿಂಪಲ್ ಟೀಂನ ಸ್ನೇಹಿತರು ಮತ್ತು ತಂತ್ರಜ್ಞರು ಕೆಲಸ ಮಾಡಿದ್ದಾರೆ.

  ಸೂರಿ ಶಿಷ್ಯನ ಚಾರ್ಲಿ

  ಸೂರಿ ಶಿಷ್ಯನ ಚಾರ್ಲಿ

  'ಚಾರ್ಲಿ' ಅನ್ನೋ ಚಿತ್ರವನ್ನ ನಿರ್ದೇಶಿಸ್ತಾ ಇರೋ ಶಿವ ಕೂಡ ಮೊದಲ ಪ್ರಯತ್ನದ ನಿರ್ದೇಶಕ. ನಿರ್ದೇಶಕ ಸೂರಿ ಗರಡಿಯಲ್ಲಿ ಪಳಗಿರೋ ಶಿವ ಚಾರ್ಲಿ ಟ್ರೈಲರ್ನಲ್ಲಿ ಅಬ್ಬರಿಸೋ ಮೂಲಕ ಮಾಸ್ ಸಿನಿಮಾ ತೆರೆಗೆ ತರೋ ಭರವಸೆ ಮೂಡಿಸಿದ್ದಾರೆ.

  ನೀನಾಸಂ ರಾಕೇಟ್

  ನೀನಾಸಂ ರಾಕೇಟ್

  ಶಿವಶಸಿ ಅನ್ನೋ ಹೊಸ ನಿರ್ದೇಶಕರ ರಾಕೇಟ್ ಸಿನಿಮಾ ಭಟ್ರ ಶಿಷ್ಯರ ತಂಡದ ಮತ್ತೊಂದು ನಿರೀಕ್ಷೆಯ ಚಿತ್ರ. ರಾಕೇಟ್ ಚಿತ್ರ ಕೂಡ ವಿಭಿನ್ನವಾಗಿರುತ್ತೆ ಈ ವರ್ಷದಲ್ಲಿ ಮೋಡಿ ಮಾಡೋ ಚಿತ್ರವಾಗ್ಬಹುದು ಅನ್ನೋ ಲೆಕ್ಕಾಚಾರ ಚಂದನವನದ ಚಿಂತಕರ ಚಾವಡಿಯಲ್ಲಿ ನಡೀತಿದೆ.

   ಹೊಸಬರದ್ದೇ ಹವಾ

  ಹೊಸಬರದ್ದೇ ಹವಾ

  ಲೆಕ್ಕ ಹಾಕಿದ್ರೆ ಮತ್ತೊಂದಷ್ಟು ಹೊಸಬರ ಸಿನಿಮಾಗಳು ನಿರೀಕ್ಷೆ ಮೂಡಿಸ್ತಿವೆ. ಇಂತಹಾ ಸಿನಿಮಾಗಳ ಲಿಸ್ಟ್ ನಲ್ಲಿ ಮೂರ್ನಾಲ್ಕು ಸಿನಿಮಾಗಳು ಮೋಡಿ ಮಾಡಿದ್ರೂ ಮತ್ತೆ 2013ರ ಮ್ಯಾಜಿಕ್, ಯಶ್ ಮಾತು ಎಲ್ಲವೂ ಸತ್ಯ ಆಗುತ್ತೆ. ವಾಸ್ತವದಲ್ಲಿ ಕಾಣಿಸುತ್ತೆ.

  English summary
  New directors, new actors are shining in Kannada movie industry in 2015. Sandalwood is hoping to see the same magic which happened in 2013. Rocking Star Yash had told, if new director wins, many new directors get opportunity. So, when a movie tastes success.
  Thursday, July 9, 2015, 13:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X