»   » 'ಕರುನಾಡ ಕಲಾರತ್ನ'ನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

'ಕರುನಾಡ ಕಲಾರತ್ನ'ನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

'ಮೆಜೆಸ್ಟಿಕ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ದರ್ಶನ್. ಅಲ್ಲಿಂದ ಅಭಿಮಾನಿಗಳ ಪ್ರೀತಿಯ 'ದಾಸ'ನಾಗಿ, ಬೇರೆಲ್ಲಾ ನಟರ ಮುಂದೆ 'ಚಾಲೆಂಜಿಂಗ್ ಸ್ಟಾರ್' ಆಗಿ ಬೆಳೆದ ದರ್ಶನ್ ಗೆ ಇದೀಗ ಹೊಸ ನಾಮಕರಣವಾಗಿದೆ.

ತಮ್ಮ ಹೆಸರನ್ನ ದರ್ಶನ್ ಬದಲಾಯಿಸಿಕೊಂಡಿದ್ದಾರಾ? ಅಂತ ಅಚ್ಚರಿ ಪಡಬೇಡಿ. ಹೊಸ ನಾಮಕರಣ ಅಂದ್ರೆ, ಅಭಿಮಾನಿ ಬಳಗ ದರ್ಶನ್ ಗೆ ಹೊಸ ಬಿರುದು ಕೊಟ್ಟಿದ್ದಾರೆ. ಅದು 'ಕರುನಾಡ ಕಲಾರತ್ನ' ಅಂತ.

New title for Challenging Star Darshan-Karunada Kalaratna

ಹೌದು, ಕರುನಾಡಿನ ಹೊಸ ಕಲಾರತ್ನ ಈಗ 'ಚಾಲೆಂಜಿಂಗ್ ಸ್ಟಾರ್' ದರ್ಶನ್. ಕೆಲ ವರ್ಷಗಳ ಹಿಂದೆಯಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಅಭಿಮಾನಿಗಳೆಲ್ಲಾ ಸೇರಿ 'ಕರುನಾಡ ಚಕ್ರವರ್ತಿ' ಅಂತ ಬಿರುದು ಕೊಟ್ಟಿದ್ದರು.

'ಭಜರಂಗಿ' ಚಿತ್ರದ ಎಲ್ಲಾ ಪೋಸ್ಟರ್ ಗಳಲ್ಲೂ ಶಿವಣ್ಣ 'ಕರುನಾಡ ಚಕ್ರವರ್ತಿ'ಯಾಗಿ ಮಿಂಚಿದ್ದರು. ಇದೀಗ ಅದಕ್ಕೆ ಚಾಲೆಂಜ್ ಮಾಡಿರುವ ದರ್ಶನ್ ಫ್ಯಾನ್ಸ್, ಎಲ್ಲೇ ಹೋದರೂ ದರ್ಶನ್ ಗೆ 'ಕರುನಾಡ ಕಲಾರತ್ನ' ಅಂತ ಜೈಕಾರ ಹಾಕುತ್ತಿದ್ದಾರೆ. ['ಫೇಸ್ ಬುಕ್'ನಲ್ಲಿ ಅಪ್ಪು-ದಚ್ಚು ಅಭಿಮಾನಿಗಳ ಅಚ್ಚು-ರಚ್ಚು]

ದರ್ಶನ್ ಹುಟ್ಟುಹಬ್ಬದ ದಿನವೂ ಕೂಡ, ಚಾಲೆಂಜಿಂಗ್ ಸ್ಟಾರ್ ಮನೆ ಮುಂದೆ 'ಕರುನಾಡ ಕಲಾರತ್ನ' ಅನ್ನುವ ಜಯಘೋಷ ಕೇಳಿಬಂದಿತ್ತು. ಇದೀಗ ಅದು ಅಧಿಕೃತವಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
Fans Association of Challenging Star Darshan have given a new title for the Actor called 'Karunada Kalaratna'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada