For Quick Alerts
  ALLOW NOTIFICATIONS  
  For Daily Alerts

  ಒಟ್ಟಿಗೆ ಚಿತ್ರಮಂದಿರಕ್ಕೆ ಬರ್ತಾರೆ ಸಮೀರ, ಪ್ರವೀಣ

  By Naveen
  |

  ಕನ್ನಡದಲ್ಲಿ ಸದ್ಯ ತಮ್ಮ ವಿಭಿನ್ನ ಟ್ರೇಲರ್ ಹಾಗೂ ಹಾಡುಗಳ ಮೂಲಕ ಎರಡು ಚಿತ್ರಗಳು ಗಮನ ಸೆಳೆದಿವೆ. 'ಒಂದಲ್ಲಾ ಎರಡಲ್ಲಾ' ಹಾಗೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಈ ಎರಡು ಚಿತ್ರಗಳು ಸಹ ಹೊಸತನವನ್ನು ಇಟ್ಟುಕೊಂಡಿವೆ. ವಿಶೇಷ ಅಂದರೆ, ಈ ಎರಡು ಒಳ್ಳೆಯ ಪ್ರಯತ್ನದ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗುತ್ತಿವೆ.

  'ಒಂದಲ್ಲಾ ಎರಡಲ್ಲಾ' ಸಾವಿರಾರು ಜನರ ಮೆಚ್ಚುಗೆ ಪಡೆದ ಟ್ರೇಲರ್ 'ಒಂದಲ್ಲಾ ಎರಡಲ್ಲಾ' ಸಾವಿರಾರು ಜನರ ಮೆಚ್ಚುಗೆ ಪಡೆದ ಟ್ರೇಲರ್

  'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಮುಂದಿನ ಗುರುವಾರ ಹಾಗೂ 'ಒಂದಲ್ಲಾ ಎರಡಲ್ಲಾ' ಚಿತ್ರ ಮುಂದಿನ ಶುಕ್ರವಾರ ಬಿಡುಗಡೆಯಾಗುತ್ತಿವೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದಲ್ಲಿ ಪ್ರವೀಣ ಎಲ್ಲರ ಗಮನ ಸೆಳೆದಿದ್ದರೆ, ಇತ್ತ ಸಮೀರ 'ಒಂದಲ್ಲಾ ಎರಡಲ್ಲಾ' ಟ್ರೇಲರ್ ನೋಡಿದ ಕೂಡಲೇ ಇಷ್ಟ ಆಗುತ್ತಾನೆ.

  ಕಾಡುತ್ತಿವೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಹಾಡುಗಳು ಕಾಡುತ್ತಿವೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಹಾಡುಗಳು

  ಅಂದಹಾಗೆ, ಕಮರ್ಷಿಯಲ್ ಗಡಿಯನ್ನು ದಾಟಿ ಈ ಎರಡು ಚಿತ್ರಗಳನ್ನು ಮಾಡಲಾಗಿದೆ. 'ಒಂದಲ್ಲಾ ಎರಡಲ್ಲಾ' ಸಿನಿಮಾವನ್ನು 'ರಾಮಾ ರಾಮಾ ರೇ' ಖ್ಯಾತಿಯ ಡಿ.ಸತ್ಯ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮುಗ್ಧತೆಯ ಮೇಲೆ ಇರುವ ಚಿತ್ರವಾಗಿದೆ. ಸಿನಿಮಾದಲ್ಲಿ ಒಂದು ಒಳ್ಳೆಯ ವಿಷಯ ಇರುವುದು ಟ್ರೇಲರ್ ನಲ್ಲಿಯೇ ತಿಳಿಯುತ್ತಿದೆ.

  ಇನ್ನು 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಪ್ರತಿ ಹಾಡುಗಳು ಸಹ ಸೂಪರ್ ಹಿಟ್ ಆಗಿವೆ. ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಕಾಸರಗೋಡಿನ ಸರ್ಕಾರಿ ಶಾಲೆಯ ಬಗ್ಗೆ ಚಿತ್ರದ ಕಥೆ ಇದೆ. ರಿಷಬ್ ಶೆಟ್ಟಿ ಚಿತ್ರದ ನಿರ್ದೇಶನ ಮಾಡಿದ್ದಾರೆ.

  English summary
  'Sarkari Hiriya Prathamika Shale' and 'Ondalla Eradalla' kannada movie will releasing on next week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X