For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕ್ರಿಕೆಟಿಗ ಕೆ.ಎಲ್.ರಾಹುಲ್ ಜೊತೆಗೆ ಡೇಟ್ ಮಾಡುತ್ತಿರುವ ನಟಿ ಯಾರು.?

  By Harshitha
  |

  ಕರ್ನಾಟಕದ ಪ್ರತಿಭಾನ್ವಿತ ಬ್ಯಾಟ್ಸ್ ಮ್ಯಾನ್, ಮಂಗಳೂರು ಮೂಲದ ಕೆ.ಎಲ್.ರಾಹುಲ್ ಇದೀಗ ಗಾಸಿಪ್ ಕಾಲಂಗಳಿಗೆ ಆಹಾರವಾಗಿದ್ದಾರೆ. ಇಷ್ಟು ದಿನ ಮೈದಾನದಲ್ಲಿ ಬೌಂಡರಿ-ಸಿಕ್ಸರ್ ಬಾರಿಸಿ, ಬೌಲರ್ ಗಳ ಬೆವರಳಿಸಿ ಸದ್ದು ಮಾಡುತ್ತಿದ್ದ ಕೆ.ಎಲ್.ರಾಹುಲ್ ಇದೀಗ ನಟಿಯೊಂದಿಗೆ ಊಟ ಮಾಡಿ ಸುದ್ದಿ ಆಗಿದ್ದಾರೆ.

  ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿರುವ ಕರಾವಳಿಯ ಈ ಕುವರ ಇದೀಗ ಬಾಲಿವುಡ್ ನಟಿಯೊಬ್ಬರನ್ನ ಡೇಟಿಂಗ್ ಮಾಡುತ್ತಿದ್ದಾರಂತೆ.

  ಸದ್ಯ ಐಪಿಎಲ್ ನಲ್ಲಿ ಕಿಂಗ್ ಇಲೆವನ್ ಪಂಜಾಬ್ ಪರ ಬ್ಯಾಟ್ ಬೀಸಿದ್ದ ಕೆ.ಎಲ್.ರಾಹುಲ್ ಈಗ ಗಾಸಿಪ್ ಪಂಡಿತರ ನಾಲಿಗೆ ಮೇಲೆ ನುಲಿದಾಡಲು ಕಾರಣ 'ಆ' ನಟಿ. ಯಾರು ಆಕೆ.? ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಈಕೆಯೇ 'ಆ' ನಟಿ

  ಈಕೆಯೇ 'ಆ' ನಟಿ

  ಟೈಗರ್ ಶ್ರಾಫ್ ಅಭಿನಯದ 'ಮುನ್ನ ಮೈಕೇಲ್' ಚಿತ್ರದ ಮೂಲಕ ಬಾಲಿವುಡ್ ಲೋಕಕ್ಕೆ ಪದಾರ್ಪಣೆ ಮಾಡಿದ ಚೆಲುವೆ ನಿಧಿ ಅಗರ್ವಾಲ್. ಅಂದು ಟೈಗರ್ ಶ್ರಾಫ್ ಜೊತೆಗೆ ಕುಣಿದು ಕುಪ್ಪಳಿಸಿದ್ದ ನಿಧಿ ಇದೀಗ ಕೆ.ಎಲ್.ರಾಹುಲ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರಂತೆ.

  ಕ್ರಿಕೆಟರ್ ಯಜುವೇಂದ್ರ ಚಾಹಲ್ ಮುಂದೆ ಕ್ಲೀನ್ ಬೌಲ್ಡ್ ಆದ ಕನ್ನಡ ನಟಿ!ಕ್ರಿಕೆಟರ್ ಯಜುವೇಂದ್ರ ಚಾಹಲ್ ಮುಂದೆ ಕ್ಲೀನ್ ಬೌಲ್ಡ್ ಆದ ಕನ್ನಡ ನಟಿ!

  ಒಟ್ಟಿಗೆ ಕಾಣಿಸಿಕೊಂಡ ಜೋಡಿ

  ಒಟ್ಟಿಗೆ ಕಾಣಿಸಿಕೊಂಡ ಜೋಡಿ

  'ಸವ್ಯಸಾಚಿ' ಎಂಬ ತೆಲುಗು ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಿದ್ದರೂ, ಮುಂಬೈನ ಹೋಟೆಲ್ ಒಂದರಲ್ಲಿ ಕೆ.ಎಲ್.ರಾಹುಲ್ ಜೊತೆಗೆ ಡಿನ್ನರ್ ಮಾಡಿದ್ದಾರೆ ನಿಧಿ ಅಗರ್ವಾಲ್. ಇಬ್ಬರ ಡಿನ್ನರ್ ಡೇಟ್ ಈಗ ಗಾಸಿಪ್ ಗೆ ಕಾರಣವಾಗಿದೆ.

  ಬೆಂಗಳೂರು ಕನೆಕ್ಷನ್

  ಬೆಂಗಳೂರು ಕನೆಕ್ಷನ್

  ಕೆ.ಎಲ್.ರಾಹುಲ್ ಮೂಲತಃ ಮಂಗಳೂರಿನವರಾದರೂ, ಉನ್ನತ ಶಿಕ್ಷಣ ಪೂರೈಸಿದ್ದು ಬೆಂಗಳೂರಿನಲ್ಲಿ. ಇನ್ನೂ ನಿಧಿ ಅಗರ್ವಾಲ್ ಕೂಡ ಬೆಂಗಳೂರಿನವರೇ. 'ಬೆಂಗಳೂರಿನ ಕನೆಕ್ಷನ್' ಇಬ್ಬರನ್ನೂ ಹತ್ತಿರ ತಂದಿದೆ.

  ನಿಧಿ ಏನಂತಾರೆ.?

  ನಿಧಿ ಏನಂತಾರೆ.?

  ''ರಾಹುಲ್ ನನ್ನ ಆತ್ಮೀಯ ಸ್ನೇಹಿತ. ಅವರೊಂದಿಗೆ ನಾನು ಊಟ ಮಾಡಿದ್ದು ನಿಜ. ನಾನು ಹಾಗೂ ರಾಹುಲ್ ಹಲವು ವರ್ಷಗಳಿಂದ ಸ್ನೇಹಿತರು. ರಾಹುಲ್ ಕ್ರಿಕೆಟರ್ ಆಗುವ ಮುಂಚಿನಿಂದಲೂ ನನಗೆ ಪರಿಚಯ. ಬೆಂಗಳೂರಿನಲ್ಲಿ ಒಂದೇ ಕಾಲೇಜಿನಲ್ಲಿ ನಾವು ಓದಿಲ್ಲ. ಆದರೂ, ನಾವಿಬ್ಬರು ಒಳ್ಳೆಯ ಸ್ನೇಹಿತರು'' ಎಂದು ಸ್ಪಾಟ್ ಬಾಯ್ ಸಂದರ್ಶನದಲ್ಲಿ ನಿಧಿ ಅಗರ್ವಾಲ್ ಹೇಳಿದ್ದಾರೆ.

  English summary
  Bollywood Actress Nidhi Agerwal spotted on a dinner date with Cricketer KL Rahul. Take a look at the pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X