»   » ಬಾಲಿವುಡ್ ಪಂಚಾಂಗ ಓದುತ್ತಿರುವ ಪಂಚರಂಗಿ ಬೆಡಗಿ

ಬಾಲಿವುಡ್ ಪಂಚಾಂಗ ಓದುತ್ತಿರುವ ಪಂಚರಂಗಿ ಬೆಡಗಿ

Posted By:
Subscribe to Filmibeat Kannada
ಕನ್ನಡದ ಪಂಚರಂಗಿ ಬೆಡಗಿ ನಿಧಿ ಸುಬ್ಬಯ್ಯ, ಬಾಲಿವುಡ್ ನಲ್ಲಿ ಚಿತ್ರ ಚಿತ್ತಾರ ಬಿಡಿಸಿಯಾಗಿದೆ. ಅವರು ನಟಿಸಿರುವ ಮೊಟ್ಟಮೊದಲ ಬಾಲಿವುಡ್ ಚಿತ್ರ 'ಅಜಬ್ ಗಜಬ್ ಲವ್' ಚಿತ್ರೀಕರಣ ಪೂರ್ಣಗೊಳಿಸಿದೆ. ಒಂದಷ್ಟು ಟ್ರೈಲರ್ ಗಳೂ ಕೂಡ ಬಿಡುಗಡೆಯಾಗಿದ್ದು ನಿಧಿ ಸುಬ್ಬಯ್ಯ ಎಂಬ ಕನ್ನಡದ ಹುಡುಗಿಗೆ ನಿಧಿ ಸಿಕ್ಕಂತಾಗಿದೆ. ಇದೀಗ ಬಾಲಿವುಡ್ ಚಿತ್ರಗಳ ಲೆಕ್ಕಾಚಾರದಲ್ಲಿ ಬಿಜಿಯಾಗಿದ್ದಾರೆ ನಿಧಿ.

ಈ ಮೂಲಕ ಕನ್ನಡದ ಈ ಪಂಚರಂಗಿ ಬೆಡಗಿ ಈಗ ಬಾಲಿವುಡ್ ಪಂಚಾಂಗ ಓದುತ್ತಿದ್ದಾರೆ. ಕನ್ನಡದಲ್ಲಿ ಯೋಗರಾಜ್ ಭಟ್ಟರ 'ಪಂಚರಂಗಿ' ಚಿತ್ರದಲ್ಲಿ ಮಿಂಚಿದ್ದ ಈ ಕೊಡಗಿನ ಬೆಡಗಿ, ನಂತರವೂ ಭಟ್ಟರದೇ ಚಿತ್ರ 'ಅಣ್ಣಾಬಾಂಡ್' ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಕಿಂಗ್ ಫಿಶರ್ ಕ್ಯಾಲೆಂಡರಿನಲ್ಲಿ ಮುಖ ತೋರಿಸಿ ಮಡಿವಂತರಿಂದ ಮಂಗಳಾರತಿ ಮಾಡಿಸಿಕೊಂಡಿದ್ದ ನಿಧಿ, ಸ್ವಲ್ಪ ಕಾಲದಲ್ಲೇ ಬಾಲಿವುಡ್ ಕಡೆ ಹಾರಿದ್ದರು.

ಅದಕ್ಕೂ ಮೊದಲು ಅದೆಷ್ಟೂ ನಟಿಯರು ಬಾಲಿವುಡ್ ಕಡೆ ಹೋಗಿ ಮುಖ ತೋರಿಸಿ ಮರಳಿದ ಉದಾಹರಣೆ ನೋಡಿದ್ದ ಗಾಂಧಿನಗರ ನಿಧಿಯೂ ಅದೇ ಸಾಲಿಗೆ ಸೇರಬಹುದು ಎಂದೇ ಮಾತನಾಡಿಕೊಂಡಿತ್ತು. ಆದರೆ, ಈ ಪಂಚರಂಗಿ ಬೆಡಗಿಗೆ ಪ್ರತಿಭೆ ಜೊತೆ ಅದೃಷ್ಟವೂ ಸಾಥ್ ನೀಡಿತು ಎಂಬಂತೆ ಬಾಲಿವುಡ್ ಬಾಗಿಲು ತೆರೆದಿದೆ. ಚಿತ್ರವನ್ನು ಬೇಟೆಯಾಡಿ ಚಿತ್ರೀಕರಣವನ್ನೂ ಮುಗಿಸಿ ಹಾಯಾಗಿದ್ದಾರೆ.

ಇಷ್ಟೇ ಆಗಿದ್ದರೆ ಅಷ್ಟೊಂದು ಆಶ್ಚರ್ಯ ಯಾರಿಗೂ ಆಗುತ್ತಿರಲಿಲ್ಲ. ಇದೀಗ ಈ ಅಪೂರ್ವ ನಿಧಿ ಬಾಲಿವುಡ್ ನಲ್ಲೇ ಸೆಟ್ಲ್ ಆಗುವ ಲಕ್ಷಣ ಕಾಣಿಸುತ್ತಿದೆ. ನಿಧಿ ಕೈಯಲ್ಲಿ ಕೇವಲ ಒಂದೇ ಒಂದು ಚಿತ್ರವಿದೆ ಎಂದು ಅಂದುಕೊಂಡವರಿಗೆ ಸಡನ್ ಶಾಕ್ ಕಾದಿದೆ. ಅವರು ಸದ್ಯದಲ್ಲೇ ಇನ್ನೂ ಮೂರು ಬಾಲಿವುಡ್ ಚಿತ್ರಗಳಿಗೆ ಒಡತಿಯಾಗಲಿದ್ದಾರೆ. ಅಕ್ಷಯ್ ಕುಮಾರ್ ನಾಯಕತ್ವದ 'ಓಹ್ ಮೈ ಗಾಡ್' ಅದರಲ್ಲೊಂದಾದರೆ ಮೂರು ಚಿತ್ರಗಳ ದೊಡ್ಡ ಬ್ಯಾನರ್ ಜೊತೆಗಿನ ಡೀಲ್ ಇನ್ನೊಂದು!

ಹಾಗಾದರೆ, ಇನ್ಮುಂದೆ ಕನ್ನಡ ಚಿತ್ರಗಳಲ್ಲಿ ನಿಧಿ ನಟಿಸುವುದಿಲ್ಲವೇ ಎಂಬ ಪ್ರಶ್ನೆ ಸಹಜ. ಅದನ್ನೇ ನಿಧಿಗೆ ಕೇಳಲಾಗಿ "ಕನ್ನಡ ಚಿತ್ರಗಳಲ್ಲೂ ನಟಿಸುತ್ತೇನೆ. ಆದರೆ ಸಿಕ್ಕ ಸಿಕ್ಕ ಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತುಂಬಾ ಚೂಸಿಯಾಗುತ್ತೇನೆ. ಆದರೆ ಯೋಗರಾಜ್ ಭಟ್ಟರಂತ ನಿರ್ದೇಶಕರ ಚಿತ್ರ ಸಿಕ್ಕರೆ ತಕ್ಷಣವೇ ಒಪ್ಪಿಕೊಂಡುಬಿಡುವೆ" ಎಂದಿದ್ದಾರೆ. ಒಟ್ಟಿನಲ್ಲಿ ಕನ್ನಡದ ಹುಡುಗಿಯೊಬ್ಬರು ಬಾಲಿವುಡ್ ಪಾಲಾಗಲಿದ್ದಾರೆ ಎನ್ನಬಹುದೇನೋ! (ಒನ್ ಇಂಡಿಯಾ ಕನ್ನಡ)

English summary
Kannada actress Nidhi Subbaiah is now busy in Bollywood as everyone knows. Her first Bollywood movie 'Ajab Gajab Love' is completed its shooting. She also has 3 to 4 movies in her account. She will act in Kannada movies in future, if it is Yogaraj Bhat movie. 
 
Please Wait while comments are loading...