Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮದುವೆ ಬಳಿಕ 'ಪಂಚರಂಗಿ' ಕಂಬ್ಯಾಕ್: ಸ್ಟಾರ್ ನಟನ ಚಿತ್ರದಲ್ಲಿ ನಿಧಿ.!
ಪಂಚರಂಗಿ, ಅಣ್ಣಾಬಾಂಡ್, ಕೃಷ್ಣನ್ ಮ್ಯಾರೇಜ್ ಸ್ಟೋರಿ ಅಂತಹ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಿಧಿ ಸುಬ್ಬಯ್ಯ ಮದುವೆ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ, ಮತ್ತೆ ಚಂದನವನದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ರೀ ಎಂಟ್ರಿಯಲ್ಲೇ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಶೂಟಿಂಗ್ ನಲ್ಲೂ ಕೂಡ ಭಾಗವಹಿಸಿರುವ ನಿಧಿ, ಕಂಬ್ಯಾಕ್ ಬಗ್ಗೆ ಖುಷಿಯಾಗಿದ್ದಾರೆ.
ನೂತನ
ಬಾಳಿಗೆ
ಕಾಲಿಟ್ಟ
ಕೊಡಗಿನ
ಬೆಡಗಿ
ನಿಧಿ
ಸುಬ್ಬಯ್ಯ
2017, ಫೆಬ್ರವರಿ ತಿಂಗಳಲ್ಲಿ ಲವೇಶ್ ಕುಮಾರ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇದೀಗ, ಮತ್ತೆ ಬಣ್ಣ ಹಚ್ಚಿ ನಟನೆಗೆ ವಾಪಸ್ ಆಗಿದ್ದಾರೆ. ಅಷ್ಟಕ್ಕೂ, ನಿಧಿ ಅಭಿನಯಿಸುತ್ತಿರುವ ಹೊಸ ಸಿನಿಮಾ ಯಾವುದು? ಯಾರು ಆ ಚಿತ್ರಕ್ಕೆ ನಾಯಕ? ಮುಂದೆ ಓದಿ......

ಶಿವಣ್ಣನ ಚಿತ್ರದಲ್ಲಿ ನಿಧಿ
ದ್ವಾರಕೀಶ್ ಬ್ಯಾನರ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸುತ್ತಿರುವ 'ಆನಂದ್' ಚಿತ್ರದ ಪ್ರಮುಖ ಪಾತ್ರಕ್ಕೆ ನಿಧಿ ಸುಬ್ಬಯ್ಯ ಆಯ್ಕೆಯಾಗಿದ್ದಾರೆ. ಪಿ ವಾಸು ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಿದೆ.
ನಿಧಿ
ಸುಬ್ಬಯ್ಯ
ಅವರದ್ದು
ಲವ್
ಮ್ಯಾರೇಜಾ..?
ಮದುವೆ
ಬಗ್ಗೆ
ಹೇಳಿದ್ದೇನು?

ರಚಿತಾ ರಾಮ್ ನಾಯಕಿ
ಅಂದ್ಹಾಗೆ, ಆನಂದ್ ಚಿತ್ರದಲ್ಲಿ ಇಬ್ಬರು ನಾಯಕಿಯರು. ಈಗಾಗಲೇ ಶಿವಣ್ಣನಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಆಯ್ಕೆಯಾಗಿದ್ದಾರೆ. ಈಗ ಇನ್ನೊಬ್ಬ ನಟಿಯಾಗಿ ನಿಧಿ ಎಂಟ್ರಿಯಾಗಿದೆ. ಚಿತ್ರದ ಬಹುಮುಖ್ಯ ಪಾತ್ರದಲ್ಲಿ ನಿಧಿ ಕಾಣಿಸಿಕೊಳ್ಳಲಿದ್ದಾರಂತೆ.

'ಮನಮೋಹಕ' ಮಾಡಬೇಕಿತ್ತು
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಸಿಂಪಲ್ ಸುನಿ ನಿರ್ದೇಶನದಲ್ಲಿ 'ಮನಮೋಹಕ' ಸಿನಿಮಾದಲ್ಲಿ ಶಿವಣ್ಣ ಜತೆಗೆ ನಟಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಈಗ ಇನ್ನೊಂದು ಅವಕಾಶ ಸಿಕ್ಕಿದ್ದು, ಆನಂದ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ನಿಧಿ.

5G ಕೊನೆಯ ಚಿತ್ರ
ನಿಧಿ ಸುಬ್ಬಯ್ಯ ಅಭಿನಯಿಸಿದ್ದ 5G ಸಿನಿಮಾ ಕೊನೆಯದಾಗಿ ಬಿಡುಗಡೆಯಾಗಿತ್ತು. ಅದಾದ ಮೇಲೆ ರೆಬ್ತಾ ಹಿಂದಿ ಸಿನಿಮಾದಲ್ಲಿ ನಿಧಿ ನಟಿಸಿದ್ದರು. ಬಳಿಕ ಮದುವೆ ಆದ ನಿಧಿ ಖಾಸಗಿ ಜೀವನದಲ್ಲಿ ಬ್ಯುಸಿಯಾದರು. ಇದೀಗ, ಸಣ್ಣದೊಂದು ಬ್ರೇಕ್ ನ ನಂತರ ನಿಧಿ ಬೆಳ್ಳಿತೆರೆಗೆ ವಾಪಸ್ ಆಗಿದ್ದಾರೆ.