ಮದುವೆಯ ನಂತರ ಮತ್ತೆ ಚಿತ್ರರಂಗಕ್ಕೆ ನಿಧಿ ಕಮ್ ಬ್ಯಾಕ್

ನಟಿ ನಿಧಿ ಸುಬ್ಬಯ್ಯ ಕೆಲವು ಸಿನಿಮಾಗಳ ನಟನೆಯಿಂದ ಗಮನ ಸೆಳೆದ ನಾಯಕಿ. ಎರಡು ವರ್ಷಗಳಿಂದ ಬೆಳ್ಳೆ ಪರದೆ ಮೇಲೆ ಕಾಣಿಸಿಕೊಳ್ಳದ ಈ ನಟಿ ಈಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.

ಶಿವರಾಜ್ ಕುಮಾರ್ ನಟನೆಯ 'ಆಯುಷ್ಮಾನ್ ಭವ' ಸಿನಿಮಾದಲ್ಲಿ ನಿಧಿ ಸುಬ್ಬಯ್ಯ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಚಿತಾ ರಾಮ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿಧಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

2017 ರಲ್ಲಿ '5G' ಎಂಬ ಕನ್ನಡ ಸಿನಿಮಾ ಮಾಡಿದ್ದ ನಿಧಿ ಅದೇ ವರ್ಷ ಒಂದು ಹಿಂದಿ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿದ್ದರು. ಆ ಬಳಿಕ ಮದುವೆಯಾದ ನಿಧಿ ಎರಡು ವರ್ಷ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದರು. ಇದೀಗ ಪಿ ವಾಸು ನಿರ್ದೇಶನದ, ದ್ವಾರಕೀಶ್ ನಿರ್ಮಾಣದ 'ಆಯುಷ್ಮಾನ್ ಭವ' ಸಿನಿಮಾ ಮೂಲಕ ನಿಧಿ ಮತ್ತೆ ಸಿನಿಮಾ ಮಾಡುತ್ತಿದ್ದಾರೆ.

Nidhi Subbaiah Playing Important Character In Ayushman Bhava Movie

'ಅಭಿಮಾನಿ' ಎಂಬ ಸಿನಿಮಾದ ಮೂಲಕ 2009ರಲ್ಲಿ ಚಿತ್ರರಂಗಕ್ಕೆ ಬಂದ ನಿಧಿ ಸುಬ್ಬಯ್ಯ, ಆ ನಂತರ 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಪಂಚರಂಗಿ', 'ಅಣ್ಣ ಬಾಂಡ್', 'ವೀರಾ ಬಾಹು' ಸೇರಿದಂತೆ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಹಾಗೂ 'ಅಣ್ಣ ಬಾಂಡ್' ಚಿತ್ರಗಳ ನಟನೆಗಾಗಿ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

'ಆಯುಷ್ಮಾನ್ ಭವ' ಸಿನಿಮಾದಲ್ಲಿ ನಿಧಿ ಸುಬ್ಬಯ್ಯ ಚುಕ್ಕಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

More from Filmibeat

English summary
Actress Nidhi Subbaiah playing important character in 'Ayushman Bhava' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X