»   » ನಿಧಿ ಸುಬ್ಬಯ್ಯ 'ಪ್ರೇಮಕಥೆ' ತಿಳಿಯುವ ಆಸೆ ಇದ್ಯಾ.?

ನಿಧಿ ಸುಬ್ಬಯ್ಯ 'ಪ್ರೇಮಕಥೆ' ತಿಳಿಯುವ ಆಸೆ ಇದ್ಯಾ.?

Posted By:
Subscribe to Filmibeat Kannada

ಅದು ಸುಮಧುರ ಪ್ರೇಮ ಕಾವ್ಯ. ಇಂದಿನ ಪೀಳಿಗೆ ಹಾಗೆ ಖಾಲಿ ಪೋಲಿ ಪ್ರೀತಿ ಪುರಾಣ ಅಲ್ಲ. ಟೈಮ್ ಪಾಸ್ ಲವ್ ಸ್ಟೋರಿ ಅಂತೂ ಅಲ್ಲವೇ ಅಲ್ಲ. ಶ್ರೀಮಂತ ಹುಡುಗಿ ಹಾಗೂ ಆರ್ಕೇಸ್ಟ್ರಾದಲ್ಲಿ ಹಾಡುವ ಸಾಮಾನ್ಯ ಹುಡುಗನ ನಡುವಿನ ಪ್ರಣಯ ರಾಗ.

ಇನಿಯನಿಗಾಗಿ ತನ್ನ ಹೆಸರನ್ನೇ ಬದಲಾಯಿಸಿಕೊಳ್ಳುವ ಹುಡುಗಿ, ಪ್ರೀತಿ ಉಳಿಸಿಕೊಳ್ಳಲು ಹೋರಾಡುವ ದಿಟ್ಟ ಕಥೆ. ಅಂದ್ಹಾಗೆ, ಇದು ನಿಧಿ ಸುಬ್ಬಯ್ಯ ಜೀವನದಲ್ಲಿ ನಡೆದಿರುವ ಪ್ರೇಮ ಅಧ್ಯಾಯ ಅಲ್ಲ. ಬದಲಾಗಿ, ಅವರು ಅಭಿನಯಿಸುತ್ತಿರುವ ಹೊಚ್ಚ ಹೊಸ 'ನನ್ನ ನಿನ್ನ ಪ್ರೇಮಕಥೆ' ಚಿತ್ರದ ಕಥಾಹಂದರ. ['ನನ್ನ ನಿನ್ನ ಪ್ರೇಮಕಥೆ'ಗೆ ಪ್ರೇಮ ಪತ್ರ ಬರೆಯಿರಿ ಲಕ್ಷ ಬಹುಮಾನ ಗೆಲ್ಲಿ]


Nidhi Subbaiah speaks about 'Nanna Ninna Prema Kathe'

ಬಾಲಿವುಡ್ ನಲ್ಲಿ ನೆಲೆಯೂರಿದ್ದ ಕೊಡಗಿನ ಕುವರಿ ನಿಧಿ ಸುಬ್ಬಯ್ಯ, ಸ್ಯಾಂಡಲ್ ವುಡ್ ಕಡೆ ಮರಳಿ ಮುಖ ಮಾಡುತ್ತಿರುವುದು 'ನನ್ನ ನಿನ್ನ ಪ್ರೇಮಕಥೆ' ಚಿತ್ರದ ಮೂಲಕ. ['ನನ್ನ ನಿನ್ನ ಪ್ರೇಮಕಥೆ'ಯಲ್ಲಿ ಉಪ್ಪಿ ಮತ್ತು ಪುನೀತ್ ರ ಕಮಾಲ್]


'ನನ್ನ ನಿನ್ನ ಪ್ರೇಮಕಥೆ' ಚಿತ್ರದಲ್ಲಿ ಅಂತಹ ವಿಶೇಷ ಏನಿದೆ ಅಂತ ಕೇಳಿದ್ರೆ, ''ಚಿತ್ರದ ಕಥೆಯೇ ಸ್ಪೆಷಲ್. ಈ ಮನಮಿಡಿಯುವ ಕಥೆ ಕೇಳಿದ ಕೂಡಲೆ ಒಪ್ಪಿಕೊಂಡೆ. ಅಷ್ಟು ಇಷ್ಟ ಆಯ್ತು'' ಎನ್ನುತ್ತಾರೆ ನಿಧಿ ಸುಬ್ಬಯ್ಯ. ['ಪ್ರೇಮ್ ಕಹಾನಿ' ಹೇಳಲು ಬಂದ್ರು ನಿಧಿ ಸುಬ್ಬಯ್ಯ]


ಇದುವರೆಗೂ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಿಧಿ ಸುಬ್ಬಯ್ಯ, 'ನನ್ನ ನಿನ್ನ ಪ್ರೇಮಕಥೆ' ಚಿತ್ರದಲ್ಲಿ ಉತ್ತರ ಕರ್ನಾಟಕದ ಬೆಡಗಿಯಾಗಿ ಸಂಪ್ರದಾಯಸ್ಥ ಹೆಣ್ಣು ಮಗಳಾಗಿ ಸೀರೆ-ಸಲ್ವಾರ್ ನಲ್ಲಿ ಮಿಂಚಲಿದ್ದಾರೆ.


ನಿಧಿ ಸುಬ್ಬಯ್ಯ ಹೃದಯಕ್ಕೆ ಪ್ರೇಮ ಬಾಣ ಬಿಡುವ ಹುಡುಗನಾಗಿ ವಿಜಯ್ ರಾಘವೇಂದ್ರ ಅಭಿನಯಿಸಿದ್ದಾರೆ. ಶಿವು ಜಮಖಂಡಿ ಚೊಚ್ಚಲ ಬಾರಿ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ತಿಂಗಳು 'ನನ್ನ ನಿನ್ನ ಪ್ರೇಮಕಥೆ' ತೆರೆಗೆ ಬರಲಿದೆ.


-
-
-
-
-
-
ನಿಧಿ ಸುಬ್ಬಯ್ಯ 'ಪ್ರೇಮಕಥೆ' ತಿಳಿಯುವ ಆಸೆ ಇದ್ಯಾ.?

ನಿಧಿ ಸುಬ್ಬಯ್ಯ 'ಪ್ರೇಮಕಥೆ' ತಿಳಿಯುವ ಆಸೆ ಇದ್ಯಾ.?

-
-
-
-
English summary
Kannada Actress Nidhi Subbaiah is back to Kannada Films through 'Nanna Ninna Prem Kathe'. But what made Nidhi Subbaiah to accept this project? Here is an answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada