»   » ನಿಧಿ ಸುಬ್ಬಯ್ಯ, 5G, 500 ರೂ. ನೋಟು: ಏನಿದು ಲಿಂಕ್?

ನಿಧಿ ಸುಬ್ಬಯ್ಯ, 5G, 500 ರೂ. ನೋಟು: ಏನಿದು ಲಿಂಕ್?

Posted By: Staff
Subscribe to Filmibeat Kannada

ದೇಶದಾದ್ಯಂತ ಇನ್ನೂ ಸಹ 4G ಹವಾ ಇರುವಾಗಲೇ, ಸ್ಯಾಂಡಲ್ ವುಡ್ ನಲ್ಲಿ 5G ಟ್ರೆಂಡ್ ಶುರುವಾಗಿದೆ. ಏನಿದು ಸ್ಯಾಂಡಲ್ ವುಡ್ ನಲ್ಲಿ 5G ನಾ? ಎಂಬ ಪ್ರಶ್ನೆ ಎಲ್ಲರಿಗೂ ಕಾಡದೇ ಇರದು. ಈ ಪ್ರಶ್ನೆಗೆ ನಾವು ಉತ್ತರ ನೀಡುತ್ತೇವೆ.[ಬಿಕಿನಿಗೆ ಶರಣು ಶರಣಯ್ಯ ಬೆಡಗಿ ನಿಧಿ ಸುಬ್ಬಯ್ಯ]

ಅಂದಹಾಗೆ ಸ್ಯಾಂಡಲ್ ವುಡ್ ನಲ್ಲಿ '5G' (5th Generation) ಎಂಬುದು ಅಪ್‌ ಕಮ್ಮಿಂಗ್ ಸಿನಿಮಾ ಹೆಸರು. ಈ ಚಿತ್ರದಲ್ಲಿ 500 ರೂಪಾಯಿಯೇ ನಾಯಕನಂತೆ. ಹೀಗೆ ಟೈಟಲ್ ನಿಂದಲೇ ಕುತೂಹಲ ಮೂಡಿಸಿರುವ ಈ ಸಿನಿಮಾ, ಈಗ ಸ್ಯಾಂಡಲ್ ವುಡ್ ನಲ್ಲಿ ಪ್ರಯೋಗಾತ್ಮಕ ಚಿತ್ರವಾಗಿ ಸೌಂಡ್ ಮಾಡುತ್ತಿದೆ.

'5G' (5th Generation) ಏನಿದು?

ಸ್ಯಾಂಡಲ್ ವುಡ್ ನಲ್ಲಿ ಈಗ ಟೈಟಲ್, ಹಾಡುಗಳ ಮೂಲಕ ಪ್ರೇಕ್ಷಕರ ಕುತೂಹಲ ಕೆರಳಿಸಿರುವ '5G' (5th Generation) ಸಿನಿಮಾ, ಐದು ತಲೆಮಾರಿನ ಕತೆಯನ್ನು ಒಳಗೊಂಡಿದೆಯಂತೆ. ಆದ್ದರಿಂದ ಈ ಚಿತ್ರಕ್ಕೆ '5G' (5th Generation) ಎಂದು ಹೆಸರಿಡಲಾಗಿದೆ ಎಂದು ಚಿತ್ರದ ನಿರ್ದೇಶಕ ಗುರುವೇಂದ್ರ ಶೆಟ್ಟಿ ಹೇಳಿದ್ದಾರೆ.

'5G' (5th Generation) ಚಿತ್ರದ ವಿಶೇಷತೆ ಏನು?

'5G' (5th Generation) ಸಿನಿಮಾ ಪ್ರಸ್ತುತ ಸೊಸೈಟಿಯ ಪರಿಸ್ಥಿತಿ, ಗಾಂಧೀಜಿಯ ಗ್ರಾಮರಾಜ್ಯ ಕನಸು ಹೇಗಾಗಿದೆ, ಈಗಿನ ಸಮಾಜದೊಳಗೆ ಗಾಂಧೀಜಿ ಬಂದರೆ ಅವರ ಸ್ಥಿತಿ ಏನಾಗಬಹುದು ಎಂಬ ಅಂಶಗಳನ್ನು ಒಳಗೊಂಡಿದೆಯಂತೆ. ಕೇಳಲು ಹೊಸ ಪ್ರಯೋಗಾತ್ಮಕ ಚಿತ್ರವಾದರೂ ಇದು ಪಕ್ಕಾ ಕಮರ್ಷಿಯಲ್ ಚಿತ್ರವಂತೆ.

ನಾಯಕ 500 ರೂಪಾಯಿ ನೋಟು

ಈ ಸಿನಿಮಾದಲ್ಲಿ ನಿಜವಾದ ಹೀರೋ 500 ರೂಪಾಯಿ ನೋಟು ಎಂದು ನಿರ್ದೇಶಕರು ಹೇಳಿದ್ದಾರೆ. ಅಲ್ಲದೇ ಸಿನಿಮಾದ ಕತೆ ನೋಟಿನ ಮೂಲಕ ಬಿಚ್ಚಿಕೊಳ್ಳುತ್ತಾ ಹೋಗುತ್ತದಂತೆ. ನೋಟು ಸಮಾಜದ ವ್ಯವಸ್ಥೆ ಹೇಗಿದೆ ಎಂದು ಹೇಳುತ್ತದಂತೆ. ಈ ರೀತಿಯ ಅಂಶಗಳನ್ನು ಕತೆ ಹೊಂದಿರುವುದರಿಂದ ಚಿತ್ರದ ಬಗ್ಗೆ ಕುತೂಹಲ ಕೊಂಚ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

'5G' (5th Generation) ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?

ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದು, 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಖ್ಯಾತಿಯ ಪ್ರವೀಣ್ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವಿನಾಶ್, ಸಾಧುಕೋಕಿಲ, 'ಎಡಕಲ್ಲು ಗುಡ್ಡ ಮೇಲೆ' ಚಂದ್ರಶೇಖರ್, ಕೀರ್ತಿಶ್ರೀ ಸ್ವಪ್ನರಾಜ್ ಇತರರು ತಾರಾಬಳಗದಲ್ಲಿದ್ದಾರೆ.[ಚಿತ್ರಗಳು: 5G ಚಿತ್ರದಲ್ಲಿ ನಿಧಿ ಸುಬ್ಬಯ್ಯ]

ಮೊದಲ ಬಾರಿಗೆ ಪತ್ರಕರ್ತೆಯಾಗಿ ನಿಧಿ ಸುಬ್ಬಯ್ಯ

ಪಂಚರಂಗಿ ಬೆಡಗಿ ನಿಧಿ ಸುಬ್ಬಯ್ಯ '5G' (5th Generation) ಸಿನಿಮಾದಲ್ಲಿ ಸ್ವಾತಂತ್ರ ಹೋರಾಟರಾರರ ಮೊಮ್ಮಗಳಾಗಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಪತ್ರಕರ್ತೆ ಆಗಿ ಬಣ್ಣ ಹಚ್ಚಿದಾರೆ.

ಚಿತ್ರದ ಇನ್ನೊಂದು ಸ್ಪೆಷಾಲಿಟಿ ಇದು..

ಈ ಚಿತ್ರದಲ್ಲಿ ಒಟ್ಟಾರೆ 60 ಪಾತ್ರಗಳಿವೆಯಂತೆ. ಆದರೂ ಸಹ ಚಿತ್ರದ ಕ್ಲೈಮ್ಯಾಕ್ಸ್ ವರೆಗೆ ನಾಯಕಿ-ನಾಯಕ ಹೊರತು ಪಡಿಸಿ ಇತರರು ಪ್ರಮುಖವಾಗಿ ಕಾಣಿಸುವುದಿಲ್ಲವಂತೆ.

ಚಿತ್ರ ರಿಲೀಸ್ ಯಾವಾಗ?

'5G' (5th Generation) ಚಿತ್ರದ ಟ್ರೈಲರ್ ಕಳೆದ ವರ್ಷದ ಅಂತ್ಯದಲ್ಲಷ್ಟೇ ಬಿಡುಗಡೆ ಆಗಿದ್ದು, ಚಿತ್ರ ರಿಲೀಸ್ ಯಾವಾಗ ಎಂಬ ಮಾಹಿತಿ ತಿಳಿದುಬಂದಿಲ್ಲ.

ಚಿತ್ರಕ್ಕೆ ಜಗದೀಶ್ ವೈ.ಆರ್ ಬಂಡವಾಳ ಹೂಡಿದ್ದು, ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆ, ಗುರು ಪ್ರಶಾಂತ್ ರೈ ಅವರ ಛಾಯಾಗ್ರಹಣವಿದೆ.

English summary
Nidhi Subbaiah's before marriage film is '5G'. In this movie Actor Praveen was sharing the screen with Nidhi. Here is specialty of '5G' film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada