For Quick Alerts
  ALLOW NOTIFICATIONS  
  For Daily Alerts

  ಬಿಕಿನಿಗೆ ಶರಣು ಶರಣಯ್ಯ ಬೆಡಗಿ ನಿಧಿ ಸುಬ್ಬಯ್ಯ

  By Rajendra
  |

  ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರ ಗರಡಿಯಿಂದ ಬಂದಂತಹ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಬಾಲಿವುಡ್ ಗೆ ಜಂಪ್ ಆಗಿರುವುದು ಗೊತ್ತೇ ಇದೆ. ಬಾಲಿವುಡ್ ನಲ್ಲಿ ನಿಧಿ ಅಭಿನಯದ ಎರಡು ಚಿತ್ರಗಳಲ್ಲಿ ಒಂದು ಬಿಡುಗಡೆಯಾಗಿದ್ದು ಇನ್ನೊಂದು ರಿಲೀಸ್ ಗೆ ಸಿದ್ಧವಾಗಿದೆ.

  ಆಕೆ ಅಭಿನಯದ 'ಓ ಮೈ ಗಾಡ್' ಎಂಬ ಚಿತ್ರದಲ್ಲಿ ಸಣ್ಣ ಪಾತ್ರವೊಂದನ್ನು ಪೋಷಿಸಿದ್ದರು. ಆದರೆ ಆ ಪಾತ್ರ ಅಷ್ಟಾಗಿ ಯಾರ ಗಮನವನ್ನೂ ಸೆಳೆದಿರಲಿಲ್ಲ. ಈಗ ಬಿಕಿನಿ ತೊಡುವ ಮೂಲಕ ಎಲ್ಲರ ಗಮನವನ್ನೂ ತನ್ನತ್ತ ಸೆಳೆದಿದ್ದಾರೆ.

  'ಅಜಬ್ ಗಝಬ್ ಲವ್' ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಮೂಲಕ ನಿಧಿ ಪೂರ್ಣ ಪ್ರಮಾಣದ ನಾಯಕಿಯಾಗಿ ತಮ್ಮ ವೃತ್ತಿಜೀವನಕ್ಕೆ ಹೊಸ ತಿರುವು ನೀಡುತ್ತಿದ್ದಾರೆ. ಈ ಚಿತ್ರದ ಹಾಟ್ ಪೋಸ್ಟರ್ ಗಳಲ್ಲಿ ನಿಧಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

  ಊರಿಗೆ ಬಂದವಳು ನೀರಿಗೆ ಬಾರದಿರುತ್ತಾಳೆಯೇ ಎಂಬಂತೆ ಬಾಲಿವುಡ್ ಗೆ ಅಡಿಯಿಟ್ಟವಳು ಬಿಕಿನಿಗೆ ಶರಣಾಗದಿರುತ್ತಾಳೆಯೇ ಎಂಬಂತಾಗಿದೆ. 'ಅಣ್ಣಾ ಬಾಂಡ್' ಚಿತ್ರದ ಬಳಿಕ ನಿಧಿ ಯಾವುದೇ ಕನ್ನಡ ಚಿತ್ರಕ್ಕೆ ಸಹಿಹಾಕಿಲ್ಲ.

  ನಿಧಿ ಸುಬ್ಬಯ್ಯ ಬಿಕಿನಿ ತೊಡುತ್ತಿರುವುದು ಇದೇ ಮೊದಲಲ್ಲ ಬಿಡಿ. ಈ ಹಿಂದೆ ಸಿಸಿಎಲ್ ಕ್ಯಾಲೆಂಡರನಲ್ಲೂ ಇದಕ್ಕಿಂತಲೂ ಸೊಗಸಾಗಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಆಕೆಗೆ ಐಂದ್ರಿತಾ ರೇ ಸಹ ಸಾಥ್ ನೀಡಿದ್ದರು.

  'ಅಜಬ್ ಗಝಬ್' ಚಿತ್ರದಲ್ಲಿ ಇಬ್ಬರು ಹೀರೋಗಳು. ಒಬ್ಬರು ಜಕ್ಕಿ ಭಗನಾನಿ ಇನ್ನೊಬ್ಬರು ಅರ್ಜುನ್ ರಾಂಪಾಲ್. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಸಂಜಯ್ ಗದ್ವಿ. ಇದೊಂದು ರೊಮಾನ್ಸ್ ಕಾಮಿಡಿ ಚಿತ್ರವಾಗಿದ್ದು ಅಕ್ಟೋಬರ್ 24ರಂದು ಬಿಡುಗಡೆಯಾಗುತ್ತಿದೆ. (ಒನ್ಇಂಡಿಯಾ ಕನ್ನಡ)

  English summary
  Kannada actress Nidhi Subbaiah appers in bikini for her upcoming film Ajab Gazabb Love. The movie is all set to release on 24th October. romance comedy film directed by Sanjay Gadhvi and produced by Vashu Bhagnani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X