For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಎಲ್ಲಿದ್ದೀಯಪ್ಪಾ ಫಸ್ಟ್ ಲುಕ್ ಬಂತು, ಹೀರೋ ಯಾರು?

  |
  ನಿಖಿಲ್ ಎಲ್ಲಿದ್ದೀಯಪ್ಪಾ ಫಸ್ಟ್ ಲುಕ್ ಹೊರ ಬಿತ್ತು | ಹೀರೊ ಯಾರು? | FILMIBEAT KANNADA

  'ನಿಖಿಲ್ ಎಲ್ಲಿದ್ದೀಪ್ಪಾ' ಸಿನಿಮಾ ಆಗುತ್ತೆ, ಟೈಟಲ್ ಗಾಗಿ ನಿರ್ಮಾಪಕರು ಮುಗಿಬಿದ್ದಿದ್ದಾರೆ ಎಂದು ಹೇಳುತ್ತಿರುವಾಗಲೇ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಹೌದು, ಭಾರಿ ಸಂಚಲನ ಮೂಡಿಸಿದ 'ನಿಖಿಲ್ ಎಲ್ಲಿದ್ದೀಪ್ಪಾ' ಸಿನಿಮಾ ಆರಂಭವಾಗಿದೆ.

  ಡಬ್ಬಿಂಗ್ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೃಷ್ಣೇಗೌಡ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಅಶೋಕ್ ಕೆ ಕಡಬ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಿ.ಡಿ ರಾಜು ಅವರ ಛಾಯಾಗ್ರಹಣವಿದೆ.

  ಮಂಡ್ಯದಲ್ಲಿ ಮತ್ತೆ ಸದ್ದು ಮಾಡಿದ 'ನಿಖಿಲ್ ಎಲ್ಲಿದ್ದೀಯಪ್ಪ'

  ಈಗ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಚಿತ್ರದ ಟೈಟಲ್ ಮತ್ತು ಕೇಂದ್ರ ಸಂಸದೀಯ ಭವನದ ಫೋಟೋ ಇದೆ. ಅಲ್ಲಿಗೆ ಇದು ಪೊಲಿಟಿಕಲ್ ಡ್ರಾಮಾ ಎನ್ನುವುದು ಪಕ್ಕಾ. ಬಟ್, ಈ ಸಿನಿಮಾಗೆ ಹೀರೋ ಯಾರು ಎಂಬುದು ಸದ್ಯದ ಕುತೂಹಲ. ಸ್ಯಾಂಡಲ್ ವುಡ್ ನ ಯಾರಾದರೂ ಸ್ಟಾರ್ ಹೀರೋನಾ ಈ ಚಿತ್ರಕ್ಕಾಗಿ ಕರೆತರುತ್ತಾರಾ ಅಥವಾ ಕೃಷ್ಣೇಗೌಡ ಅವರೇ ಅಭಿನಯಿಸುತ್ತಾರಾ ಕುತೂಹಲ ಹುಟ್ಟುಹಾಕಿದೆ.

  ನಿಖಿಲ್ ಎಲ್ಲಿದ್ದೀಯಪ್ಪಾ ಅಂದಾಕ್ಷಣ ಮಂಡ್ಯ ಚುನಾವಣೆ ನೆನಪಾಗುವುದರಿಂದ, ಮಂಡ್ಯ ಎಲೆಕ್ಷನ್ ಗೆ ಸಂಬಂಧಪಟ್ಟಂತೆ ಚಿತ್ರಕಥೆ ಮಾಡಲಾಗುತ್ತಾ, ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಅವರ ವ್ಯಕ್ತಿತ್ವವನ್ನ ಈ ಚಿತ್ರಕ್ಕೆ ಲಿಂಕ್ ಮಾಡಿ ಸಿನಿಮಾ ಮಾಡಲಾಗುತ್ತಾ ಎಂಬುದು ಚರ್ಚೆಯಾಗಿದೆ.

  ಮೆಜೆಸ್ಟಿಕ್ ನಿರ್ಮಾಪಕನ ಪಾಲಾದ 'ಜೋಡೆತ್ತು' ಟೈಟಲ್: ಹೀರೋ ಯಾರು?

  ಇನ್ನೊಂದೆಡೆ ನಿರ್ಮಾಪಕ ಎ ಗಣೇಶ್ ಕೂಡ 'ಎಲ್ಲಿದ್ದೀಯಪ್ಪಾ' ಟೈಟಲ್ ನಲ್ಲಿ ಸಿನಿಮಾ ಮಾಡ್ತಿದ್ದು, ಟೈಟಲ್ ಅನಾವರಣಗೊಳಿಸಿದ್ದರು. ಮತ್ತೊಂದೆಡೆ ಮಂಡ್ಯ ಅಖಾಡದಲ್ಲಿ ಸದ್ದು ಮಾಡಿದ್ದ ಜೋಡೆತ್ತು ಪದ ಕೂಡ ಸಿನಿಮಾ ಟೈಟಲ್ ಆಗಿದ್ದು, ಮೆಜಿಸ್ಟಿಕ್ ನಿರ್ಮಾಪಕ ಎಂಜೆ ರಾಮಮೂರ್ತಿ ಈ ಶೀರ್ಷಿಕೆ ಪಡೆದುಕೊಂಡಿದ್ದಾರೆ. ದರ್ಶನ್ ಗಾಗಿ ಕಥೆ ಮಾಡ್ತಿದ್ದು, ಇದೇ ಟೈಟಲ್ ಬಳಸುವ ಚಿಂತನೆ ನಡೆಸಿದ್ದಾರೆ.

  ಒಟ್ನಲ್ಲಿ, ಸುಮಲತಾ, ನಿಖಿಲ್ ಹಾಗೂ ದರ್ಶನ್, ಯಶ್, ಅಭಿಷೇಕ್, ಕುಮಾರಸ್ವಾಮಿ ಈ ಎಲ್ಲರ ಪ್ರತಿಷ್ಠೆಯಾಗಿರುವ ಮಂಡ್ಯ ಫಲಿತಾಂಶ ಬಂದ್ಮೇಲೆ ಈ ಸಿನಿಮಾಗಳ ಕಥೆ ಮತ್ತಷ್ಟು ರೋಚಕವಾಗಬಹುದು.

  English summary
  Mandya sensational word Nikhil ellidiyappa now it's become movie title. here is the first look of Nikhil ellidiyappa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X