»   » ಗಾಸಿಪ್ ಪಂಡಿತರ ಬಾಯಿಗೆ ಬೀಗ ಹಾಕಿದ ನಿಖಿಲ್ ಗೌಡ

ಗಾಸಿಪ್ ಪಂಡಿತರ ಬಾಯಿಗೆ ಬೀಗ ಹಾಕಿದ ನಿಖಿಲ್ ಗೌಡ

By: ಹರಾ
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. 'ಜಾಗ್ವಾರ್' ಚಿತ್ರದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಡುತ್ತಿರುವ ನಿಖಿಲ್ ಗೌಡಗೆ ರಾಜಮೌಳಿ ಶಿಷ್ಯ ಮಹದೇವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮಗನ ಚೊಚ್ಚಲ ಚಿತ್ರಕ್ಕೆ ಖುದ್ದು ತಂದೆ ಎಚ್.ಡಿ.ಕುಮಾರಸ್ವಾಮಿ ಬಂಡವಾಳ ಹಾಕುತ್ತಿದ್ದಾರೆ. ಇದರ ನಡುವೆ 'ಬಾಹುಬಲಿ' ಚಿತ್ರದ ವಿತರಣಾ ಹಕ್ಕುಗಳ ಬಗ್ಗೆಯೂ ಎಚ್.ಡಿ.ಕೆ ಗಮನ ಹರಿಸಿ, ಕರ್ನಾಟಕ ವಲಯಕ್ಕೆ ಬರೋಬ್ಬರಿ 150 ಕೋಟಿ ರೂಪಾಯಿ ನೀಡಿದ್ದಾರೆ ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು.

Nikhil Gowda clears the air on HDK buying Distribution rights of 'Baahubali'

ನಿಖಿಲ್ ಗೌಡ ಮುಂದಿನ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಲಿ ಅಂತ ಎಚ್.ಡಿ.ಕೆ ದುಬಾರಿ ಮೊತ್ತ ಕೊಟ್ಟು 'ಬಾಹುಬಲಿ' ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದಿದ್ದಾರೆ ಅಂತ ಬ್ರೇಕಿಂಗ್ ನ್ಯೂಸ್ ಆಗಿತ್ತು. ಆದ್ರೆ, ಈ ಸುದ್ದಿಯನ್ನ ನಿಖಿಲ್ ಗೌಡ ಅಲ್ಲಗೆಳೆದಿದ್ದಾರೆ. ['ಬಾಹುಬಲಿ' ವಿತರಣಾ ಹಕ್ಕು ; ಎಚ್.ಡಿ.ಕೆ ಹೊಸ ಡೀಲ್.?]

''ಖಂಡಿತ ಇಲ್ಲ. ಡಿಸ್ಟ್ರಿಬ್ಯೂಷನ್ ರೈಟ್ಸ್ ಬಗ್ಗೆ ಗೊತ್ತಿಲ್ಲ. ಅಷ್ಟು ದುಬಾರಿ ಮೊತ್ತ ಅಲ್ಲವೇ ಅಲ್ಲ. ಎರಡನೇ ಅಥವಾ ಮೂರನೇ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡುವ ಸಾಧ್ಯತೆ ಇದೆ'' ಅಂತ ನಿಖಿಲ್ ಗೌಡ ಸ್ಪಷ್ಟನೆ ನೀಡಿದ್ದಾರೆ. [ಪುರಿ ಜಗನ್ನಾಥ್ ಅಲ್ಲ..! ನಿಖಿಲ್ ಚಿತ್ರಕ್ಕೆ ಹೊಸಬರು ಬಂದ್ರಲ್ಲ!]

ಅಲ್ಲಿಗೆ, ರಾಜಮೌಳಿ ನಿರ್ದೇಶನದ 'ಬಾಹುಬಲಿ' ವಿತರಣಾ ಹಕ್ಕು ಎಚ್.ಡಿ.ಕೆ ಪಾಲಾಗಿದ್ಯೋ, ಇಲ್ವೋ ಗೊತ್ತಿಲ್ಲ. ಆದ್ರೆ ದೊಡ್ಡ ಅಮೌಂಟ್ ಅಲ್ಲ ಅಂತ ನಿಖಿಲ್ ಗೌಡ ಸ್ಪಷ್ಟ ಪಡಿಸಿದ್ದಾರೆ. ಅದೇನೇಯಿರಲಿ, ನಿಖಿಲ್ ಗೌಡಗೆ ರಾಜಮೌಳಿ ನಿರ್ದೇಶನ ಮಾಡುವುದು ಬಹುತೇಕ ಖಚಿತ ಅನ್ನೋದಕ್ಕೆ ಅವರ ಮಾತುಗಳೇ ಸಾಕ್ಷಿ.

English summary
Finally, Nikhil Gowda has cleared the air on H.D.Kumaraswamy buying 'Baahubali' distribution rights of Karnataka for Rs.150 crore. Nikhil Gowda stated that there is no such deal and Telugu Director Rajamouli will direct his second or third movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada