»   » ತ್ರಿಭಾಷಾ ಚಿತ್ರ 'ಜಾಗ್ವಾರ್'ನಲ್ಲಿ ಎಚ್ಡಿಕೆ ಪುತ್ರ ನಿಖಿಲ್!

ತ್ರಿಭಾಷಾ ಚಿತ್ರ 'ಜಾಗ್ವಾರ್'ನಲ್ಲಿ ಎಚ್ಡಿಕೆ ಪುತ್ರ ನಿಖಿಲ್!

Posted By:
Subscribe to Filmibeat Kannada

ಎಚ್.ಡಿ.ಕುಮಾರ ಸ್ವಾಮಿ ಪುತ್ರ ನಿಖಿಲ್ ಗೌಡ ಬಣ್ಣ ಹಚ್ಚುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. ನಿಖಿಲ್ ಗೌಡ ಆರಂಗೇಟ್ರಂಗೆ ಟಾಲಿವುಡ್ ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿರುವ ಸುದ್ದಿ ಕೂಡ ಹಳೆಯದ್ದೆ.

ಈಗ ಎಚ್ಡಿಕೆ ಆಪ್ತ ವಲಯದಿಂದ ಬಂದಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ನಿಖಿಲ್ ಗೌಡ ಅಭಿನಯದ ಸಿನಿಮಾ ಆಗಸ್ಟ್ ನಲ್ಲಿ ಸೆಟ್ಟೇರಲಿದೆ. 'ಜ್ಯೋತಿ ಲಕ್ಷ್ಮಿ' ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿರುವ ಕಾರಣ, ಆಗಸ್ಟ್ ನಲ್ಲಿ ನಿಖಿಲ್ ಗೌಡರನ್ನ ಲಾಂಚ್ ಮಾಡುವ ಬಗ್ಗೆ ಯೋಚಿಸಿದ್ದಾರಂತೆ. [ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್]

nikhil-gowda-s-debut-trilingual-movie-titled-as-jaguar

ಅಂದ್ಹಾಗೆ, ನಿಖಿಲ್ ಗೌಡ ಗ್ರ್ಯಾಂಡ್ ಎಂಟ್ರಿ ನೀಡಲಿರುವ ಸಿನಿಮಾದ ಹೆಸರೇನು ಗೊತ್ತಾ? ಚಿತ್ರದ ಹೆಸರು 'ಜಾಗ್ವಾರ್' ಅಂತ. ಟೈಟಲ್ ಕೇಳ್ತಿದ್ದ ಹಾಗೆ, ಇದು ಆಕ್ಷನ್ ಓರಿಯೆಂಟೆಡ್ ಸಿನಿಮಾ ಅಂತ ಅನಿಸೋದು ಸಹಜ. ಪಕ್ಕಾ ಮಾಸ್ ಎಂಟರ್ಟೇನಿಂಗ್ ಆಗಿರುವ ಈ ಚಿತ್ರಕ್ಕೆ ಬೇಕಾದ ಸಕಲ ತಯಾರಿಯನ್ನೂ ನಿಖಿಲ್ ಗೌಡ ಮಾಡಿಕೊಂಡಿದ್ದಾರೆ. [ರಾಜಮೌಳಿ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್?]

nikhil-gowda-s-debut-trilingual-movie-titled-as-jaguar

ಬಿಗ್ ಬಜೆಟ್ ನಲ್ಲಿ ರೆಡಿಯಾಗುವ ಈ ಚಿತ್ರದ ತಾರಾಗಣದಲ್ಲಿ ಯಾರ್ಯಾರು ಇರಲಿದ್ದಾರೆ ಅನ್ನೋದು ಪಕ್ಕಾ ಆಗಿಲ್ಲ. ಆದ್ರೆ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ 'ಜಾಗ್ವಾರ್' ರೆಡಿಯಾಗಲಿದೆ. ಅಲ್ಲಿಗೆ, ಕಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಏಕಕಾಲಕ್ಕೆ ಎಚ್ಡಿಕೆ ಪುತ್ರನ ರೆಡ್ ಕಾರ್ಪೆಟ್ ಎಂಟ್ರಿಯಾಗಲಿದೆ. (ಏಜೆನ್ಸೀಸ್)

English summary
H.D.Kumaraswamy's son Nikhil Gowda is all set to enter Sandalwood. According to the reports, Puri Jagganath directorial Nikhil Gowda's trilingual debut movie is titled as 'Jaguar'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada