For Quick Alerts
  ALLOW NOTIFICATIONS  
  For Daily Alerts

  ನಿಖಿಲ್ - ರೇವತಿ ಪ್ರೇಮ ಪತ್ರ: ನೆಟ್ಟಿಗರಿಗೆ ಕೊರೆಯುತ್ತಿರುವ ನೂರೆಂಟು ಪ್ರಶ್ನೆಗಳು!

  |
  Nikhil and Revathi's love letter has created lot of confusion | Filmibeat Kannada

  ನಟ ನಿಖಿಲ್ ಕುಮಾರ್ ಹಾಗೂ ರೇವತಿ ನಿಶ್ಚಿತಾರ್ಥ ಇತ್ತೀಚಿಗಷ್ಟೆ ನಡೆದಿದೆ. ಎಂಗೇಜ್ ಮೆಂಟ್ ಆದ ಮೇಲೆ ಪ್ರೇಮ ಪಕ್ಷಿಗಳಾಗಿ ಈ ಜೋಡಿ ಜೊತೆಯಲ್ಲಿ ಓಡಾತ್ತಿದ್ದಾರೆ. ದೇವಸ್ಥಾನಗಳನ್ನು ಸುತ್ತಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.

  ಇದೆಲ್ಲದರ ನಡುವೆ ನಿಖಿಲ್ ಹಾಗೂ ರೇವತಿ ಜೋಡಿಯ ಬಗ್ಗೆ ಕೆಲವರಿಗೆ ಅನುಮಾನವೊಂದು ಮೂಡಿದೆ. ಅದಕ್ಕೆ ಕಾರಣ ಆಗಿರುವುದು ನಿಖಿಲ್ ಕುಮಾರ್ ರವರ ಲೇಟೆಸ್ಟ್ ಇನ್ಸ್ಟಾಗ್ರಾಮ್ ಪೋಸ್ಟ್. ನಿಖಿಲ್ ನಿನ್ನೆ (ಫೆಬ್ರವರಿ 16) ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಭಾವಿ ಪತ್ನಿ ರೇವತಿ ಬಗ್ಗೆ ತಮಗಿರುವ ಪ್ರೀತಿಯನ್ನ ಹಂಚಿಕೊಂಡಿದ್ದರು. ಇದನ್ನ ನೋಡಿ ನೆಟ್ಟಿಗರ ತಲೆಯಲ್ಲಿ ನೊರೆಂಟು ಪ್ರಶ್ನೆಗಳು ಕೊರೆಯುತ್ತಿವೆ.

  ಭಾವಿ ಪತ್ನಿ ರೇವತಿ ಜೊತೆಗೆ ರೊಮ್ಯಾಂಟಿಕ್ ಮೂಡ್ ನಲ್ಲಿ ನಿಖಿಲ್.!

  ನಿಖಿಲ್ ಬರೆದಿರುವ ಪ್ರೇಮ ಪತ್ರ ಮತ್ತು ಹಂಚಿಕೊಂಡಿರುವ ಒಂದು ಫೋಟೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನುಮಾನ ಮೂಡಿಸುವ ಕಾಮೆಂಟ್ ಗಳು ಜಾಸ್ತಿಯಾಗಿವೆ.

  ದಿನಾಂಕವನ್ನು ಒಮ್ಮೆ ಗಮನಿಸಿ

  ದಿನಾಂಕವನ್ನು ಒಮ್ಮೆ ಗಮನಿಸಿ

  ರೇವತಿಗೆ ಬರೆದ ಪ್ರೇಮ ಪತ್ರದ ಜೊತೆಗೆ ನಿಖಿಲ್ ಒಂದು ಫೋಟೋವನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿರುವ ಪುಸ್ತಕದ ದಿನಾಂಕವನ್ನು ಒಮ್ಮೆ ಗಮನಿಸಿ. ಅದರ ಮೇಲೆ 26 ಜನವರಿ 2018 ಎಂದು ಬರೆಯಲಾಗಿದೆ. ಇದನ್ನು ನೋಡಿದ ಅನೇಕರಿಗೆ ಗೊಂದಲ ಉಂಟಾಗಿದೆ. ನಿಖಿಲ್ ಹಾಗೂ ರೇವತಿ ಜೋಡಿಗೆ 2018ರಲ್ಲಿಯೇ ಪರಿಚಯ ಇತ್ತೇ? ಎನ್ನುವ ಅನುಮಾನವನ್ನು ಹೊರಹಾಕುತ್ತಿದ್ದಾರೆ. ಪುಸ್ತಕದ ಮೇಲಿರುವ ಡೇಟ್ ದೊಡ್ಡ ಚರ್ಚೆಗೆ ಕಾರಣವಾಗಿದೆ.

  ಹಳೆ ಬರಹ

  ಹಳೆ ಬರಹ

  ಅಸಲಿಗೆ, ಜನಪ್ರಿಯ ಫ್ರೆಂಚ್ ನಾಟಕದ ಇಂಗ್ಲೀಷ್ ಅನುವಾದದ ಸಾಲುಗಳನ್ನು ರೇವತಿ ಈ ಹಿಂದೆಯೇ ತಮ್ಮ ಕೈಬರಹದಲ್ಲಿ ಬರೆದಿದ್ದರು. ಅವರು ಅದನ್ನು ಬರೆದ ದಿನ 26 ಜನವರಿ 2018 ಆಗಿದೆ. ಹೀಗಾಗಿ ಅಲ್ಲಿ ಅದೇ ದಿನಾಂಕ ಕಾಣುತ್ತಿದೆ.

  'ಈ' ಉದ್ಯೋಗಕ್ಕೆ ಸೇರಲು ಮುಂದಾಗಿದ್ದ ನಿಖಿಲ್ ಭಾವಿ ಪತ್ನಿ ರೇವತಿ.!

  ಉಂಗುರ, ಮೆಹಂದಿ ಗಮನಿಸಿ

  ಉಂಗುರ, ಮೆಹಂದಿ ಗಮನಿಸಿ

  ಪುಸ್ತಕದ ಮೇಲಿನ ದಿನಾಂಕ ನೋಡಿದ ಕೂಡಲೇ ಹಲವರಿಗೆ ಹಲವು ರೀತಿಯ ಅನುಮಾನ ಬರುವುದು ಸಹಜ. ಆದರೆ, ಫೋಟೋದಲ್ಲಿ ಇತರೆ ಅಂಶಗಳನ್ನು ಸಹ ಗಮನಿಸಬೇಕಾಗುತ್ತದೆ. ರೇವತಿ ಕೈ ಮೇಲೆ ಇರುವ ಮೆಹಂದಿ ಗುರುತು, ಬೆರಳಿನಲ್ಲಿ ಇರುವ ವಜ್ರದುಂಗುರ ಎಲ್ಲವೂ ನಿಶ್ಚಿತಾರ್ಥದ ಬಳಿಕ ತೆಗೆದ ಫೋಟೋ ಎಂಬುದಕ್ಕೆ ಸಾಕ್ಷಿಯಾಗಿದೆ.

  ಈಗ ಓದುತ್ತಿದ್ದಾರೆ ಅಷ್ಟೇ

  ಈಗ ಓದುತ್ತಿದ್ದಾರೆ ಅಷ್ಟೇ

  ಅಂದ್ಹಾಗೆ, ಪುಸ್ತಕದಲ್ಲಿ ಇರುವುದು ಫ್ರೆಂಚ್ ಭಾಷೆಯ ರೊಮ್ಯಾಂಟಿಕ್ ನಾಟಕದ ಇಂಗ್ಲೀಷ್ ಅನುವಾದದ ಸಾಲುಗಳು. ಅದನ್ನು ಈಗ ಓದುತ್ತಿದ್ದಾರೆ ಅಷ್ಟೇ. ಆ ಸುಂದರ ಕ್ಷಣವನ್ನು ನಿಖಿಲ್ ಹಂಚಿಕೊಂಡಿದ್ದಾರೆ. ''ನನ್ನ ಯುವರಾಣಿ.. ನಿನ್ನನ್ನ ತುಂಬಾ ಪ್ರೀತಿಸುತ್ತೇನೆ. ಸಮಯ ಕಳೆದ ಹಾಗೆ ಸೌಂದರ್ಯ ಮಾಸಬಹುದು. ಆದ್ರೆ, ಒಳ್ಳೆಯ ಗುಣ ಯಾವಾಗಲೂ ನಮ್ಮ ಜೊತೆ ಇರುತ್ತದೆ. ನಿನ್ನ ವ್ಯಕ್ತಿತ್ವವನ್ನು ನಾನು ಇಷ್ಟ ಪಡುತ್ತೇನೆ'' ಎಂದು ನಿಖಿಲ್,ಭಾವಿ ಪತ್ನಿ ರೇವತಿಗೆ ಪ್ರೇಮ ಪತ್ರ ಬರೆದಿದ್ದಾರೆ.

  ತೆಲುಗು ನಟ ಕಾಮೆಂಟ್

  ತೆಲುಗು ನಟ ಕಾಮೆಂಟ್

  ತೆಲುಗು ನಟ ಅಲ್ಲು ಸಿರೀಶ್ ಫೋಟೋ ನೋಡಿ ಕಾಮೆಂಟ್ ಮಾಡಿದ್ದಾರೆ. ಪತ್ರದಲ್ಲಿ ಅಕ್ಷರಗಳು ತುಂಬ ಸುಂದರವಾಗಿದೆ. ಅದನ್ನು ಯಾರು ಬರೆದಿದ್ದು ಎಂದು ಕೇಳಿದ್ದಾರೆ. ಅದಕ್ಕೆ ನಿಖಿಲ್ ನಾನಂತು ಅಲ್ಲ ಎಂದಿದ್ದಾರೆ. ಹೀಗೆ ನಿಖಿಲ್ ಹಾಗು ರೇವತಿ ಫೋಟೋ ಸಾಕಷ್ಟು ಪ್ರಶ್ನೆಗಳನ್ನು ಸೃಷ್ಟಿ ಮಾಡಿದೆ. ಆದರೆ, ಅದಕ್ಕೆಲ್ಲ ಉತ್ತರ ಈ ಮೂಲಕ ಸಿಕ್ಕಿರಬಹುದು.

  English summary
  Actor Nikhil Kumar and Revathi love latter created confusion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X