For Quick Alerts
  ALLOW NOTIFICATIONS  
  For Daily Alerts

  ಕಣ್ಣಿಲ್ಲದಿದ್ದರೂ ಅಪೂರ್ವವಾದ ಪ್ರತಿಭೆ: ಪಿಯಾನೋ ವಿಶ್ವನಾಥ್ ಗೆ ನಿಖಿಲ್ ಫಿದಾ

  |

  ನಟ ನಿಖಿಲ್ ಕುಮಾರ್ ಸ್ವಾಮಿ ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕೃಷಿ ಚಟುವಟಿಕೆ ಪ್ರಾರಂಭಿಸಿರುವ ನಿಖಿಲ್ ಪತ್ನಿ ಜೊತೆ ತೋಟದ ಮನೆಯಲ್ಲೇ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಿಖಿಲ್ ಆಗಾಗ ಪತ್ನಿ ರೇವತಿ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಫೋಟೋ ಹಂಚಿಕೊಳ್ಳುತಿದ್ದಂತೆ ನಿಖಿಲ್ ದಂಪತಿಯ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ.

  ಇದೀಗ ನಿಖಿಲ್ ಇನ್ಸ್ಟಾಗ್ರಾಮ್ ನಲ್ಲಿ ನಿಖಿಲ್ ಸುಂದರ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಪಿಯಾನೋ ವಿಶ್ವನಾಥ್ ಟ್ಯೂನ್ ಗೆ ಫಿದಾ ಆಗಿರುವ ವಿಡಿಯೋ ಇದಾಗಿದೆ. ಎರಡು ಕಣ್ಣು ಕಾಣದ ವಿಶ್ವನಾಥ್ ಅದ್ಭುತವಾಗಿ ಪಿಯಾನೋ ನುಡಿಸುತ್ತಾರೆ. ನಿಖಿಲ್ ಗೆ ಆಕಸ್ಮಿಕವಾಗಿ ಸಿಕ್ಕ ವಿಶ್ವನಾಥ್ ಅವರು ನಿಖಿಲ್ ಗಾಗಿ ಪಿಯಾನೋ ನುಡಿಸಿದ್ದಾರೆ. ಮುಂದೆ ಓದಿ...

  ಪತ್ನಿ ರೇವತಿಯನ್ನು ಹೊಗಳಿ ಕಾಲೆಳೆದ ನಿಖಿಲ್ ಕುಮಾರಸ್ವಾಮಿಪತ್ನಿ ರೇವತಿಯನ್ನು ಹೊಗಳಿ ಕಾಲೆಳೆದ ನಿಖಿಲ್ ಕುಮಾರಸ್ವಾಮಿ

  ಪಿಯಾನೋ ನುಡಿಸಿದ ವಿಶ್ವನಾಥ್

  ವಿಡಿಯೋವನ್ನು ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋ ಜೊತೆಗೆ ನಿಖಿಲ್, "ಕಣ್ಣಿಲ್ಲದಿದ್ದರೂ ಅಪೂರ್ವವಾದ ಪ್ರತಿಭೆಯಾಗಿರುವ ವಿಶ್ವನಾಥ್ ಅವರು ಹಾಸನದ ಈಜಿಪುರದವರಂತೆ. ಇಂದು ಆಕಸ್ಮಿಕವಾಗಿ ಇವರ ಭೇಟಿಯಾಯಿತು. ಇವರು ಇಂಪಾಗಿ ಪಿಯಾನೋ ನುಡಿಸುವುದನ್ನು ಕೇಳಿ ಸಂತೋಷವಾಯಿತು. ದೈಹಿಕ ನ್ಯೂನತೆಗಳಿದ್ದರೂ ಸಾಧಿಸುವ ಛಲವಿರುವವರಿಗೆ ಯಾವುದು ಅಡ್ಡಿಯಾಗುವುದಿಲ್ಲ. ಇವರ ಸಾಧನೆ ವಿಕಲಚೇತನರಿಗೆ ಮಾತ್ರ ಅಲ್ಲ ಎಲ್ಲರಿಗೂ ಸ್ಫೂರ್ತಿಯಾಗುವಂತದ್ದು" ಎಂದು ಬರೆದುಕೊಂಡಿದ್ದಾರೆ.

  ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿಖಿಲ್

  ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿಖಿಲ್

  ಬಹುದಿನಗಳ ಬಳಿಕ ನಿಖಿಲ್ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಕೊನೆಯದಾಗಿ ನಿಖಿಲ್ 'ಸೀತಾರಾಮ ಕಲ್ಯಾಣ' ಚಿತ್ರದ ಮೂಲಕ ತೆರೆಮೇಲೆ ಮಿಂಚಿದ್ದರು. ಲೋಕಸಭೆ ಚುನಾವಣೆ ಸ್ಪರ್ಧೆ, ಪ್ರಚಾರ, ಸೋಲು ಅದರ ಬಳಿಕ ಕೊರೊನಾ ಲಾಕ್‌ಡೌನ್, ಮದುವೆ ಎಲ್ಲವೂ ಮುಗಿಸಿ ಈಗ ಮತ್ತೆ ಸಿನಿವೃತ್ತಿಯ ಬಗ್ಗೆ ಗಮನ ವಹಿಸಿದ್ದಾರೆ.

  ಅಂಬಾರಿ ಹೊರುವ 'ಅರ್ಜುನ'ನನ್ನು ಭೇಟಿ ಮಾಡಿದ ನಿಖಿಲ್ ಕುಮಾರ್ ದಂಪತಿಅಂಬಾರಿ ಹೊರುವ 'ಅರ್ಜುನ'ನನ್ನು ಭೇಟಿ ಮಾಡಿದ ನಿಖಿಲ್ ಕುಮಾರ್ ದಂಪತಿ

  'ರೈಡರ್' ಆಗಿ ಬರ್ತಿದ್ದಾರೆ ನಿಖಿಲ್

  'ರೈಡರ್' ಆಗಿ ಬರ್ತಿದ್ದಾರೆ ನಿಖಿಲ್

  ನಿಖಿಲ್ ಇದೀಗ 'ರೈಡರ್' ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಪೋಸ್ಟರ್ ಸಹ ರಿಲೀಸ್ ಆಗಿದ್ದು, ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  RCB ಮೇಲೆ ಯಾಕಿಷ್ಟು ಕೋಪ ಗುರು | Filmibeat Kannada
  ನಿಖಿಲ್ ಅಭಿನಯದ 4ನೇ ಸಿನಿಮಾ

  ನಿಖಿಲ್ ಅಭಿನಯದ 4ನೇ ಸಿನಿಮಾ

  ನಿರ್ದೇಶಕ ವಿಜಯ್ ಕುಮಾರ್ ಕೊಂಡಗೆ ಇದು ಮೊದಲ ಕನ್ನಡ ಸಿನಿಮಾ. ಲಾಕ್‌ಡೌನ್ ಅವಧಿಯಲ್ಲಿ ಕಥೆ ಕೇಳಿದ್ದ ನಿಖಿಲ್ ಸಿನಿಮಾಕ್ಕೆ ಓಕೆ ಎಂದಿದ್ದರು. ನಿಖಿಲ್ ನಟಿಸುತ್ತಿರುವ ನಾಲ್ಕನೇ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ಬಗ್ಗೆ ಚಿತ್ರತಂಡ ಹೆಚ್ಚೇನು ಬಿಟ್ಟುಕೊಟ್ಟಿಲ್ಲ. ಇನ್ನೂ ನಿಖಿಲ್ ಜೊತೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Nikhil Kumar shares Blind Piano Player Vishwanath's Video in Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X