»   » ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!

ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!

Posted By:
Subscribe to Filmibeat Kannada

'ಜಾಗ್ವಾರ್' ಚಿತ್ರದ ಮೂಲಕ ಕನ್ನಡ ಮತ್ತು ತೆಲುಗು ಸಿನಿ ಅಂಗಳಕ್ಕೆ ಕಾಲಿಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಈಗ ಬೇಡದ ವಿಷ್ಯಕ್ಕೆ ಸದ್ದು ಮಾಡುತ್ತಿದ್ದಾರೆ.

ನಿನ್ನೆಯಷ್ಟೇ (ಸೆಪ್ಟೆಂಬರ್ 2) 'ಜಾಗ್ವಾರ್' ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಿತು. [ಟ್ರೈಲರ್: 'ಜಾಗ್ವಾರ್'...ದಿ ಕಿಲ್ಲರ್ ಅಬ್ಬರ ಬೊಂಬಾಟ್ ಗುರು]


'ಜಾಗ್ವಾರ್' ಚಿತ್ರದ ಟ್ರೈಲರ್ ಮತ್ತು ಹಾಡುಗಳಿಗಿಂತ, ಅದರಲ್ಲಿ ಇರುವ 'ಲಿಪ್ ಲಾಕ್' ಸೀನ್ ಹೆಚ್ಚು ಸೆನ್ಸೇಷನಲ್ ಆಗಿದೆ. ಮುಂದೆ ಓದಿ.....


ಟ್ರೈಲರ್ ನಲ್ಲಿದೆ ಲಿಪ್ ಲಾಕ್ ದೃಶ್ಯ

ಮಲೆಯಾಳಂ ಬೆಡಗಿ ದೀಪ್ತಿ ಸತಿ ಜೊತೆ ನಿಖಿಲ್ ಕುಮಾರ್ ಲಿಪ್ ಲಾಕ್ ಮಾಡಿರುವ ದೃಶ್ಯ ಟ್ರೈಲರ್ ನಲ್ಲಿದೆ.


ಚೊಚ್ಚಲ ಚಿತ್ರದಲ್ಲೇ ಲಿಪ್ ಲಾಕ್

ಚೊಚ್ಚಲ ಸಿನಿಮಾದಲ್ಲೇ ನಿಖಿಲ್ ಕುಮಾರ್ ಗೆ ಲಿಪ್ ಲಾಕ್ ಭಾಗ್ಯ ಸಿಕ್ಕಿದೆ ಅಂತ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
(ಚಿತ್ರಕೃಪೆ: ಟ್ರೋಲ್ ಅಡ್ಡ)


ಯಾರು ಈ ಬೋಲ್ಡ್ ನಟಿ ದೀಪ್ತಿ?

ಕೇರಳಾದ ಕೊಚ್ಚಿ ಮೂಲದ ದೀಪ್ತಿ ಸತಿ ಬೆಳೆದದ್ದು ಮಾತ್ರ ಮುಂಬೈನಲ್ಲಿ. 2012 ರಲ್ಲಿ 'ಮಿಸ್ ಕೇರಳಾ' ಕಿರೀಟ ಮುಡಿಗೇರಿಸಿಕೊಂಡವರು ಇದೇ ದೀಪ್ತಿ. ಮಾಡೆಲಿಂಗ್ ಕ್ಷೇತ್ರದ ಕೋಲ್ಮಿಂಚು ಆಗಿರುವ ದೀಪ್ತಿ ಸತಿ ಫೆಮಿನಾ ಮಿಸ್ ಇಂಡಿಯಾ 2014 ನಲ್ಲೂ ಭಾಗವಹಿಸಿದ್ದರು.


ಪ್ರತಿಭಾನ್ವಿತೆ

ನಟಿ ದೀಪ್ತಿ ಸತಿ ಕಥಕ್ ಮತ್ತು ಭರತನಾಟ್ಯಂ ನೃತ್ಯ ಕಲಾವಿದೆ. ಕರ್ನಾಟಿಕ್ ಮತ್ತು ಹಿಂದುಸ್ತಾನಿ ಸಂಗೀತವನ್ನೂ ದೀಪ್ತಿ ಕಲಿಯುತ್ತಿದ್ದಾರೆ.


'ಜಾಗ್ವಾರ್' ಈಕೆಗೆ ಎರಡನೇ ಚಿತ್ರ

ಮಲೆಯಾಳಂನ 'ನೀ-ನಾ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ದೀಪ್ತಿ ಸತಿ ಇದೀಗ ಸ್ಯಾಂಡಲ್ ವುಡ್ ಗೆ 'ಜಾಗ್ವಾರ್' ಮೂಲಕ ಕಾಲಿಟ್ಟಿದ್ದಾರೆ.


ಎರಡನೇ ಚಿತ್ರದಲ್ಲಿ ಲಿಪ್ ಲಾಕ್

ತಮ್ಮ ಎರಡನೇ ಸಿನಿಮಾ 'ಜಾಗ್ವಾರ್'ನಲ್ಲಿ ನಿಖಿಲ್ ಕುಮಾರ್ ರನ್ನ ಚುಂಬಿಸಿ ದೀಪ್ತಿ ಸತಿ ಸದ್ದು ಮಾಡಿದ್ದಾರೆ.


ಎಚ್.ಡಿ.ಕುಮಾರಸ್ವಾಮಿ ಏನಂತಾರೋ?

ಸದಭಿರುಚಿಯ ಚಿತ್ರಗಳನ್ನ ನಿರ್ಮಿಸಿರುವ ಎಚ್.ಡಿ.ಕುಮಾರಸ್ವಾಮಿ ಈ 'ಲಿಪ್ ಲಾಕ್' ಸನ್ನಿವೇಶದ ಬಗ್ಗೆ ಏನಂತಾರೋ, ಕಾದು ನೋಡ್ಬೇಕು.


ಟ್ರೈಲರ್ ನೋಡಿ

'ಜಾಗ್ವಾರ್' ಚಿತ್ರದ ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....


English summary
Nikhil Kumar, son of EX CM H.D.Kumaraswamy and Actress Deepti Sati lip lock scene in 'Jaguar' has become sensational and getting trolled in Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada