Just In
Don't Miss!
- News
ಕರ್ನಾಟಕದಲ್ಲಿ 573 ಕೊರೊನಾ ಸೋಂಕಿತರು ಪತ್ತೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಖಿಲ್ ಕುಮಾರ್ ಗೆ ಹೊಸ ಜವಾಬ್ದಾರಿ: ಸಿನಿವೃತ್ತಿಗೆ ಗುಡ್ ಬೈ.!
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ನಿಖಿಲ್ ಕುಮಾರ್ ಮುಂದೆ ಸಿನಿಮಾ ಮಾಡ್ತಾರಾ ಅಥವಾ ರಾಜಕೀಯದಲ್ಲೇ ಮುಂದುವರಿಯುತ್ತಾರಾ ಎಂಬ ಕುತೂಹಲ, ಚರ್ಚೆ ನಡೆಯುತ್ತಿತ್ತು. ಈ ನಡುವೆ ಸಿನಿಮಾನೂ ಮಾಡ್ತೀನಿ, ರಾಜಕೀಯನೂ ಮಾಡ್ತೀನಿ ಎಂದು ಸ್ಪಷ್ಟಪಡಿಸಿದ್ದರು.
ಚುನಾವಣೆ ಮುಗಿದ ತಿಂಗಳುಗಳು ಕಳೆದರೂ ಮುಂದಿನ ಚಿತ್ರದ ಬಗ್ಗೆ ಎಲ್ಲಿಯೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ನಿಖಿಲ್ ಮುಂದಿನ ಸಿನಿಮಾ ಯಾವುದು, ಯಾವುದು ಎಂದು ಹುಡುಕುತ್ತಿರುವಾಗ, ಅಚ್ಚರಿ ನಿರ್ಧಾರವೊಂದನ್ನ ಜೆಡಿಎಸ್ ಪಕ್ಷ ಘೋಷಿಸಿದೆ.
ಜೆಡಿಎಸ್ ರಾಧ್ಯಾಕ್ಷರಾಗಿ ದೇವೇಗೌಡ ಆಪ್ತ ಎಚ್.ಕೆ.ಕುಮಾರಸ್ವಾಮಿ ನೇಮಕ
ಜೆಡಿಎಸ್ ಪಕ್ಷದ ಯುವ ಘಟಕದ ನೂತನ ಅಧ್ಯಕ್ಷರಾಗಿ ನಿಖಿಲ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಸಿಎಂ ಪುತ್ರನಿಗೆ ಈ ಅಧಿಕಾರ ಸಿಕ್ಕಿದ ಬಳಿಕ, ಚಿತ್ರರಂಗದಲ್ಲೊಂದು ಚರ್ಚೆ ಆರಂಭವಾಗಿದೆ. ಏನದು? ಮುಂದೆ ಓದಿ....

ಚಿತ್ರರಂಗದಿಂದ ನಿಖಿಲ್ ದೂರ.!
ರಾಜ್ಯ ಜೆಡಿಎಸ್ ಘಟಕದ ನೂತನ ಅಧ್ಯಕ್ಷರಾಗಿ ನಿಖಿಲ್ ಕುಮಾರ್ ಆಯ್ಕೆಯಾಗಿದ್ದು, ಈಗ ಜವಾಬ್ದಾರಿ ಹೆಚ್ಚಿದೆ. ರಾಜ್ಯಾದ್ಯಂತ ಪಕ್ಷವನ್ನ ಸಂಘಟನೆ ಮಾಡುವ ಹೊಣೆ ನಿಖಿಲ್ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರ್ ಸಿನಿಮಾರಂಗಕ್ಕೆ ಎಷ್ಟು ಸಮಯ ಮೀಸಲಿಡುತ್ತಾರೆ ಎಂಬುದು ಈಗ ಚರ್ಚೆಯಾಗುತ್ತಿದೆ. ಹಾಗ್ನೋಡಿದ್ರೆ, ಯುವ ಘಟಕದ ಚುಕ್ಕಾಣಿ ಹಿಡಿದಿರುವ ನಿಖಿಲ್ ಸಿನಿಮಾ ಮಾಡೋದು ಅಪರೂಪವಾಗಬಹುದು. ಈ ಹಿಂದೆ ಇದ್ದ ರೀತಿ ಇರಲು ಸಾಧ್ಯವಾಗುವುದಿಲ್ಲ. ಸಿನಿಮಾರಂಗದಿಂದ ಅಂತರ ಕಾಯ್ದುಕೊಳ್ಳಬಹುದು.
ಆಂಧ್ರ ಸಿಎಂ ಜಗನ್ ಭೇಟಿ ಮಾಡಿದ ನಿಖಿಲ್ ಕುಮಾರ್: ಕಾರಣವೇನು?

ರಾಜ್ಯದ ಮೂಲೆ ಮೂಲೆಗಗೂ ಹೋಗಬೇಕಿದೆ
ಈ ಹಿಂದೆ ನಿಖಿಲ್ ಹೇಳಿದಂತೆ ನಾನೊಬ್ಬ ಜೆಡಿಎಸ್ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡುತ್ತೇನೆ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದಿದ್ದರು. ಸೋ ಈಗ ಜೆಡಿಎಸ್ ಪಕ್ಷದ ಯುವ ಘಟಕ ಚುಕ್ಕಾಣಿ ಹಿಡಿದಿದ್ದಾರೆ. ಪಕ್ಷ ಸಂಘಟನೆಗಾಗಿ ಪ್ರವಾಸ, ಸಭೆ, ಅದೂ ಇದೂ ಅಂತ ಸುತ್ತಾಡಬೇಕಾಗಿರುವ ನಿಖಿಲ್, ಸಿನಿಮಾ ಮಾಡಲು ಬಿಡುವು ಮಾಡಿಕೊಳ್ಳುತ್ತಾರಾ?
ನಿಖಿಲ್ ಕುಮಾರ್ ಮುಂದಿನ ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ದೇಶಕ.!

ಎರಡು ಬ್ಯಾಲೆನ್ಸ್ ಮಾಡಬಹುದು
ಜೆಡಿಎಸ್ ಪಕ್ಷದಲ್ಲಿ ನಿಖಿಲ್ ಕುಮಾರ್ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಸಿನಿಮಾ ಮಾಡೋದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸಿನಿಮಾ ಮಾಡಿದ್ರು ಬಹಳ ಅಪರೂಪ ಆಗಬಹುದು. ಬಿಡುವು ಇದ್ದಾಗ ಸಿನಿಮಾ ಮಾಡಬಹುದು. ರೆಗ್ಯುಲರ್ ಆಗಿ ಒಂದು ಚಿತ್ರ ಆಗಿದ್ದ ತಕ್ಷಣ ಇನ್ನೊಂದು ಸಿನಿಮಾ ಮಾಡೋದು ಕಷ್ಟ ಆಗಬಹುದು. ಗ್ಯಾಪ್ ತಗೊಂಡು ಅಲ್ಲೊಂದು ಇಲ್ಲೊಂದು ಚಿತ್ರ ಮಾಡಬಹುದು.
ಮಂಡ್ಯದಲ್ಲಿ ನಿಖಿಲ್ ಅವರನ್ನ ಸೋಲಿನ ಸುಳಿಗೆ ನೂಕಿದ್ದೇ ಈ '7' ಹೇಳಿಕೆಗಳು

ಮುಂದಿನ ಸಿನಿಮಾ ಯಾವುದು?
ರಜನಿಕಾಂತ್ ಅವರ 2.0 ಚಿತ್ರವನ್ನ ನಿರ್ಮಾಣ ಮಾಡಿದ್ದ ಲೈಕಾ ಪ್ರೊಡಕ್ಷನ್ ಜೊತೆ ನಿಖಿಲ್ ಕುಮಾರ್ ತಮ್ಮ ಮುಂದಿನ ಸಿನಿಮಾ ಮಾಡ್ತಾರೆ ಎನ್ನಲಾಗಿದೆ. ಈ ಸಂಬಂಧ ಲೈಕಾ ಪ್ರೊಡಕ್ಷನ್ ಜೊತೆ ಕೂಡ ಮಾತುಕತೆ ಮುಗಿದಿದೆ. ತೆಲುಗಿನ ಖ್ಯಾತ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆಯಂತೆ.