»   » 'ಜಾಗ್ವಾರ್' ನಟ ನಿಖಿಲ್ ಕುಮಾರ್ ಬಹಳ ದೈವಭಕ್ತರು

'ಜಾಗ್ವಾರ್' ನಟ ನಿಖಿಲ್ ಕುಮಾರ್ ಬಹಳ ದೈವಭಕ್ತರು

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಕುಮಾರ್, 'ಜಾಗ್ವಾರ್' ಚಿತ್ರದ ನಂತರ ಎರಡನೇ ಚಿತ್ರಕ್ಕೆ ಸಿದ್ದವಾಗಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೊತ್ತಿಗಾಗಲೇ ನಿಖಿಲ್ ಎರಡನೇ ಸಿನಿಮಾ ಸೆಟ್ಟೇರಬೇಕಿತ್ತು. ಆದ್ರೆ, ನಿರ್ದೇಶಕರ ಸಮಸ್ಯೆಯಿಂದ ಸಿನಿಮಾ ಮತ್ತಷ್ಟು ಮುಂದಕ್ಕೆ ಹೋಗಿದೆ.

ಈ ಮಧ್ಯೆ ನಟ ನಿಖಿಲ್ ಕುಮಾರ್ ಸ್ವಲ್ಪ ರಿಲೀಫ್ ಆಗಲು ಪುಣ್ಯಕ್ಷೇತ್ರಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಹೌದು, ರಾಜ್ಯದ ಕೆಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ನಿಖಿಲ್ ತಮ್ಮನ್ನ ತೀರ್ಥಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರಂತೆ. ಶ್ರೀ ಕೊಲ್ಲೂರು ಮೂಕಾಂಬಿಕೆ, ಕುಕ್ಕೆ ಸುಬ್ರಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರಂತೆ. ಈ ಹಿಂದೆ ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಫೋಟೋವನ್ನ ನಿಖಿಲ್ ಕುಮಾರ್ ಅವರೇ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ನಿಖಿಲ್ ಕುಮಾರ್ ಎರಡನೇ ಸಿನಿಮಾದಿಂದ ನಿರ್ದೇಶಕ ಚೇತನ್ ಔಟ್!

Nikhil Kumar is on a Pilgrimage Tour

ಅಂದ್ಹಾಗೆ, ನಿಖಿಲ್ ಕುಮಾರ್ ಅವರ ಎರಡನೇ ಚಿತ್ರವನ್ನ ಯಾರು ನಿರ್ದೇಶನ ಮಾಡಲಿದ್ದಾರೆ ಎಂಬುದು ಅಧಿಕೃತವಾಗಿ ಹೊರಬಿದ್ದಿಲ್ಲ. ಈ ಮೊದಲು 'ಬಹುದ್ದೂರ್' ಖ್ಯಾತಿಯ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಬೇಕಿತ್ತು. ಆದ್ರೆ, 'ಭರ್ಜರಿ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರಣದಿಂದ ಚೇತನ್, ನಿಖಿಲ್ ಸಿನಿಮಾದಿಂದ ಹಿಂದೆ ಸರಿದಿದ್ದಾರಂತೆ. ಈಗ ಚೇತನ್ ಜಾಗಕ್ಕೆ ಹೊಸ ನಿರ್ದೇಶಕನ ಹುಡುಕಾಟದಲ್ಲಿರುವ ಚಿತ್ರತಂಡಕ್ಕೆ ಮಹೇಶ್ ರಾವ್ ಸಿಕ್ಕಿದ್ದಾರೆ ಎನ್ನಲಾಗಿದೆ. ಇನ್ನು ಈ ಚಿತ್ರಕ್ಕೆ ರಿಯಾ ನಲವಾಡೆ ನಾಯಕಿ ಆಗಿ ಆಯ್ಕೆ ಆಗಿದ್ದು, ಫೋಟೋಶೂಟ್ ಕೂಡ ನೆರವೇರಿದೆ.

ಚೇತನ್ ಜಾಗಕ್ಕೆ ಬಂದ್ರು ಹೊಸ ಡೈರೆಕ್ಟರ್, ನಿಖಿಲ್ 2ನೇ ಚಿತ್ರ ಶುರು.!

English summary
From last few days, actor Nikhil Kumaraswamy is on a pilgrimage tour. He has visited Kollur Mookambika Temple, Sri Dharmasthala Manjunatha Temple and Kukke Subramanya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada