For Quick Alerts
  ALLOW NOTIFICATIONS  
  For Daily Alerts

  ತಾಕತ್ತಿದ್ದರೆ ಕ್ಯಾಸೆಟ್ ಬಿಡುಗಡೆ ಮಾಡಲಿ: ಗುಡುಗಿದ ನಿಖಿಲ್ ಕುಮಾರಸ್ವಾಮಿ.!

  By Harshitha
  |
  ಏನಿದು ನಿಖಿಲ್ ಕುಮಾರಸ್ವಾಮಿ ಕ್ಯಾಸೆಟ್ ಪುರಾಣ ? | Filmibeat Kannada

  ಸ್ಯಾಂಡಲ್ ವುಡ್ ನಲ್ಲಿ 'ಜಾಗ್ವಾರ್' ಆಗಿ ಮಿಂಚಿದ್ಮೇಲೆ, 'ಕುರುಕ್ಷೇತ್ರ'ದಲ್ಲಿ ನಿಖಿಲ್ ಕುಮಾರಸ್ವಾಮಿ 'ಅಭಿಮನ್ಯು' ಆಗಿ ಅಬ್ಬರಿಸುವುದು ಇನ್ನೂ ಬಾಕಿ ಇದೆ. ಅಷ್ಟರಲ್ಲಾಗಲೇ 'ಸೀತಾ ರಾಮ ಕಲ್ಯಾಣ' ಚಿತ್ರದಲ್ಲಿ ಬಿಜಿಯಾಗಿದ್ದರೂ, ಚುನಾವಣಾ ಪ್ರಚಾರದಲ್ಲಿ ನಿಖಿಲ್ ತೊಡಗಿಸಿಕೊಂಡಿದ್ದಾರೆ.

  ಜಾತ್ಯಾತೀತ ಜನತಾದಳದ ಸ್ಟಾರ್ ಪ್ರಚಾರಕ ಆಗಿ ನಿಖಿಲ್ ಕುಮಾರಸ್ವಾಮಿ, ರಾಮನಗರ ಜಿಲ್ಲೆಯ ಬೀದಿ ಬೀದಿಯಲ್ಲೂ ತಮ್ಮ ತಂದೆ ಎಚ್.ಡಿ.ಕುಮಾರಸ್ವಾಮಿ ಪರವಾಗಿ, ಜೆ.ಡಿ.ಎಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

  ಹೀಗಿರುವಾಗಲೇ, 'ಕ್ಯಾಸೆಟ್' ಮ್ಯಾಟರ್ ನಿಖಿಲ್ ಕುಮಾರಸ್ವಾಮಿ ಸುತ್ತ ಸುತ್ತಿಕೊಂಡಿದೆ. ''ಎಚ್.ಡಿ.ದೇವೇಗೌಡ ಮೊಮ್ಮಗ ನಿಖಿಲ್ ತಮ್ಮ ವಿರುದ್ಧ ಏನಾದರೂ ಮಾತನಾಡಿದರೆ, ಅವರ ಕ್ಯಾಸೆಟ್ ಬಿಡುಗಡೆ ಮಾಡುವೆ'' ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

  ವೈರಲ್ ಆಯ್ತು ಬಾಲಕೃಷ್ಣ-ನಿಖಿಲ್ ಕುಮಾರಸ್ವಾಮಿಯ ವಾಕ್ಸಮರ

  ಎಚ್.ಸಿ.ಬಾಲಕೃಷ್ಣ ಸಿಡಿಸಿದ ಬಾಂಬ್ ಗೆ ಬೆದರದ ನಿಖಿಲ್ ಥೇಟ್ ಸಿನಿಮಾ ಸ್ಟೈಲ್ ನಲ್ಲೇ, ''ತಾಕತ್ತಿದ್ದರೆ, ಕ್ಯಾಸೆಟ್ ಬಿಡುಗಡೆ ಮಾಡಲಿ'' ಅಂತ ಗುಡುಗಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ...

  ಎಚ್.ಸಿ.ಬಾಲಕೃಷ್ಣ ವರ್ಸಸ್ ಎಚ್.ಡಿ.ಕುಮಾರಸ್ವಾಮಿ

  ಎಚ್.ಸಿ.ಬಾಲಕೃಷ್ಣ ವರ್ಸಸ್ ಎಚ್.ಡಿ.ಕುಮಾರಸ್ವಾಮಿ

  ಒಂದು ಕಾಲದಲ್ಲಿ ಎಚ್.ಡಿ.ದೇವೇಗೌಡ ಪಾಳಯದಲ್ಲಿ ಗುರುತಿಸಿಕೊಂಡು ಮಾಗಡಿಯಿಂದ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದ ಎಚ್.ಸಿ.ಬಾಲಕೃಷ್ಣ ಇದೀಗ ಎಚ್.ಡಿ.ಕುಮಾರಸ್ವಾಮಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಸದ್ಯ ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಚ್.ಸಿ.ಬಾಲಕೃಷ್ಣ, ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧವೇ ಯುದ್ಧ ಸಾರಿದ್ದಾರೆ.

  ಪಣ ತೊಟ್ಟಿರುವ ಎಚ್.ಡಿ.ಕುಮಾರಸ್ವಾಮಿ

  ಪಣ ತೊಟ್ಟಿರುವ ಎಚ್.ಡಿ.ಕುಮಾರಸ್ವಾಮಿ

  ತಮ್ಮ ಪಕ್ಷದಲ್ಲಿದ್ದುಕೊಂಡು, ತಮ್ಮ ವಿರುದ್ಧವೇ ಬಂಡಾಯ ಎದ್ದಿರುವ ಎಚ್.ಸಿ.ಬಾಲಕೃಷ್ಣ ರವರನ್ನ ಈ ಬಾರಿ ಸೋಲಿಸಲೇ ಬೇಕೆಂದು ಎಚ್.ಡಿ.ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ.

  ನಿಖಿಲ್ ಕ್ಯಾಸೆಟ್ ಮ್ಯಾಟರ್

  ನಿಖಿಲ್ ಕ್ಯಾಸೆಟ್ ಮ್ಯಾಟರ್

  ಈ ನಡುವೆ ತಮ್ಮ ತಂದೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಪರವಾಗಿ ನಟ ನಿಖಿಲ್ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಎಚ್.ಸಿ.ಬಾಲಕೃಷ್ಣ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನ ಅರಿತ ಎಚ್.ಸಿ.ಬಾಲಕೃಷ್ಣ, ''ನಿಖಿಲ್ ಅವರ ಅಪ್ಪನ ಪರ ಮತ ಕೇಳಿಕೊಂಡು ಹೋಗಲಿ, ಅದನ್ನ ಬಿಟ್ಟು ನನ್ನ ಬಗ್ಗೆ ಮಾತನಾಡಿದರೆ, ಅವರ ಕ್ಯಾಸೆಟ್ ಗಳು ನನ್ನ ಬಳಿ ಇವೆ. ಅದನ್ನ ಬಿಡುಗಡೆ ಮಾಡುವೆ'' ಎಂದು ಎಚ್ಚರಿಕೆ ನೀಡಿದ್ದರು.

  ತಾಕತ್ತಿದ್ದರೆ ಬಿಡುಗಡೆ ಮಾಡಲಿ

  ತಾಕತ್ತಿದ್ದರೆ ಬಿಡುಗಡೆ ಮಾಡಲಿ

  ಎಚ್.ಸಿ.ಬಾಲಕೃಷ್ಣ ಕೊಟ್ಟ ಹೇಳಿಕೆ ಕೇಳಿ, ''ತಾಕತ್ತಿದ್ದರೆ ನನ್ನ ಬಗ್ಗೆ ಯಾವ ಕ್ಯಾಸೆಟ್ ಬಿಡುಗಡೆ ಮಾಡುತ್ತಾನೋ, ಮಾಡಿ ತೋರಿಸಲಿ. ನಾನು ಯಾವನಿಗೂ ಹೆದರುವುದಿಲ್ಲ'' ಎಂದು ನಿಖಿಲ್ ಏಕವಚನದಲ್ಲಿ ಸವಾಲು ಹಾಕಿದ್ದಾರೆ.

  ಕ್ಯಾಸೆಟ್ ನಲ್ಲಿ ಏನಿದೆ.?

  ಕ್ಯಾಸೆಟ್ ನಲ್ಲಿ ಏನಿದೆ.?

  ಎಚ್.ಸಿ.ಬಾಲಕೃಷ್ಣ 'ನಿಖಿಲ್ ಕುಮಾರ್ ಕ್ಯಾಸೆಟ್' ಅಂತ ಹೇಳಿದ್ದಾರೆ ಹೊರತು ಆ ಕ್ಯಾಸೆಟ್ ಯಾವುದು.? ಅದರಲ್ಲಿ ಏನಿದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

  English summary
  Kannada Actor, JDS Leader HD Kumaraswamy son Nikhil Kumar lashes out against HC Balakrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X