For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಎಲೆಕ್ಷನ್ ಸೋತ ನಿಖಿಲ್ ಮುಂದಿನ ಸಿನಿಮಾ ಇದೇ ಆಗಬಹುದು.!

  |
  ಮತ್ತೆ ಸಿನೆಮಾ ಮಾಡ್ತಾರಾ ನಿಖಿಲ್?

  ನಿಖಿಲ್ ಕುಮಾರ್ ಆಗಿನ್ನು ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾಗಿರಲಿಲ್ಲ. ಆಗಷ್ಟೆ 'ಸೀತಾರಾಮ ಕಲ್ಯಾಣ' ಸಿನಿಮಾ ತೆರೆಕಂಡಿತ್ತು. ಆ ಚಿತ್ರದ ಬಳಿಕ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ನಿಖಿಲ್ ಗೆ ಎದುರಾಗಿತ್ತು. ಆ ಸಮಯದಲ್ಲಿ ಎರಡು ದೊಡ್ಡ ಪ್ರಾಜೆಕ್ಟ್ ಬಗ್ಗೆ ಸುಳಿವು ನೀಡಿದ್ದರು.

  ಆ ನಂತರ ನಡೆದ ಬೆಳವಣಿಗೆಗಳಲ್ಲಿ ನಿಖಿಲ್ ಕುಮಾರ್ ಮಂಡ್ಯದ ಮೈತ್ರಿ ಅಭ್ಯರ್ಥಿಯಾಗಿ ಲೋಕ ಅಖಾಡಕ್ಕೆ ಧುಮುಕಿದರು. ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ 'ನಿಖಿಲ್ ನೀವು ಮುಂದೆ ಸಿನಿಮಾ ಮಾಡ್ತೀರಾ' ಎಂದಿದ್ದಕ್ಕೆ, ಸದ್ಯಕ್ಕೆ ರಾಜಕೀಯ ಆಮೇಲೆ ಸಿನಿಮಾ ಅಂದಿದ್ದರು.

  ಸುಮಲತಾ ವೋಟ್ ಕಸಿದ್ರಾ ಮೂವರು ಸುಮಲತಾಗಳು?

  ಈಗ ಮಂಡ್ಯ ಚುನಾವಣೆಯಲ್ಲಿ ಸಿಎಂ ಪುತ್ರ ಸೋತಿದ್ದಾರೆ. ರಾಜಕೀಯ ಭವಿಷ್ಯಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ. ಈಗ ನಿಖಿಲ್ ಅವರ ಮುಂದಿನ ನಡೆ ಏನು? ಮತ್ತೆ ಸಿನಿಮಾ ಮಾಡ್ತಾರಾ? ಒಂದು ವೇಳೆ ಸಿನಿಮಾ ಮಾಡುವುದಾದರೂ ಯಾವ ಚಿತ್ರ ಆರಂಭಿಸುತ್ತಾರೆ? ಎಲೆಕ್ಷನ್ ಗೂ ಮುಂಚೆ ನಿಖಿಲ್ ಹೇಳಿದ್ದ ಆ ಪ್ರಾಜೆಕ್ಟ್ ಗಳು ಯಾವುದು? ಮುಂದೆ ಓದಿ....

  ರಾಜಕೀಯನಾ ಸಿನಿಮಾನಾ?

  ರಾಜಕೀಯನಾ ಸಿನಿಮಾನಾ?

  ಜಾಗ್ವಾರ್, ಸೀತಾರಾಮ ಕಲ್ಯಾಣ ಹಾಗೂ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿದ ನಂತರ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ನಿಖಿಲ್, ಮೊದಲ ಹೆಜ್ಜೆಯಲ್ಲೇ ಸೋಲು ಕಂಡಿದ್ದಾರೆ. ಮುಂದಿನ ನಡೆ ರಾಜಕೀಯನಾ ಅಥವಾ ಸಿನಿಮಾನಾ ಎಂಬುದು ಸ್ವತಃ ಅವರಿಗೆ ಗೊಂದಲವಾಗಿರಬಹುದು. ಮುಂದಿನ ಚುನಾವಣೆ ಬರುವವರೆಗೂ ನಿಖಿಲ್ ಏನು ಮಾಡಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ?

  ಎಲ್ಲಿದ್ದೀಯಪ್ಪಾ vs ನಿಖಿಲ್ ಎಲ್ಲಿದ್ದೀಯಪ್ಪಾ: ಸಿನಿಮಾ ಆಗೋದು ಪಕ್ಕಾ.!

  ಲೈಕಾ ಪ್ರೊಡಕ್ಷನ್ ಸಿನಿಮಾ.!

  ಲೈಕಾ ಪ್ರೊಡಕ್ಷನ್ ಸಿನಿಮಾ.!

  ಸೀತಾರಾಮ ಕಲ್ಯಾಣ ಸುದ್ದಿಗೋಷ್ಠಿಯಲ್ಲಿ ಸ್ವತಘ ನಿಖಿಲ್ ಕುಮಾರ್ ಮತ್ತು ಅವರ ಆಪ್ತರು ಹೇಳಿದಂತೆ ಲೈಕಾ ಪ್ರೊಡಕ್ಷನ್ ಜೊತೆ ಮುಂದಿನ ಸಿನಿಮಾ ಮಾತುಕತೆ ನಡೆಯುತ್ತಿದೆ. ಅಂತಿಮವಾದ ತಕ್ಷಣ ಸಿನಿಮಾ ಆರಂಭಿಸುತ್ತೇವೆ ಎಂದಿದ್ದರು. ಆದ್ರೆ, ಸಡನ್ ಆಗಿ ಮಂಡ್ಯ ಚುನಾವಣೆಯಲ್ಲಿ ಭಾಗಿಯಾದ ನಿಖಿಲ್ ಈಗ ಮತ್ತೆ ಲೈಕಾ ಪ್ರೊಡಕ್ಷನ್ ಜೊತೆ ಕೈಜೋಡಿಸಬಹುದು.!

  ಚುನಾವಣೆ ಅಖಾಡಕ್ಕೆ ಧುಮುಕಿರುವ ನಿಖಿಲ್ ಮುಂದಿನ ಸಿನಿಮಾ ಯಾವುದು?

  ದೊಡ್ಡ ಬ್ಯಾನರ್ ಇದು

  ದೊಡ್ಡ ಬ್ಯಾನರ್ ಇದು

  ಲೈಕಾ ಪ್ರೊಡಕ್ಷನ್ ಅಂದ್ರೆ ಸಾಮಾನ್ಯ ಸಂಸ್ಥೆಯಲ್ಲಿ. ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ನಿರ್ಮಾಣ ಸಂಸ್ಥೆ. ಇತ್ತೀಚಿಗಷ್ಟೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ 2.0 ಚಿತ್ರ ನಿರ್ಮಿಸಿದ್ದು ಇದೇ ಸಂಸ್ಥೆ. ಇಂತಹ ಬ್ಯಾನರ್ ನಿಖಿಲ್ ಗೆ ಆಫರ್ ಮಾಡಿತ್ತು. ಈಗ ಆ ಮಾತುಕತೆ ಜೀವಂತವಾಗಿದ್ಯಾ ಅಥವಾ ಜೀವ ಕಳೆದುಕೊಂಡಿದ್ಯಾ ಗೊತ್ತಿಲ್ಲ.

  '2.0' ಚಿತ್ರದ ನಿರ್ಮಾಪಕನ ಜೊತೆ ನಿಖಿಲ್ ಮುಂದಿನ ಸಿನಿಮಾ

  ಜಯಣ್ಣ ಜೊತೆ ಸಿನಿಮಾ

  ಜಯಣ್ಣ ಜೊತೆ ಸಿನಿಮಾ

  ಲೈಕಾ ಪ್ರೊಡಕ್ಷನ್ ಸಂಸ್ಥೆಯ ಜೊತೆ ಜೊತೆಗೆ ಕನ್ನಡದ ಸ್ಟಾರ್ ನಿರ್ಮಾಪಕ ಜಯಣ್ಣ ಕಂಬೈನ್ಸ್ ಕೂಡ ನಿಖಿಲ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದರು ಎಂದು ಅದೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈಗಲೂ ಜಯಣ್ಣ ಬ್ಯಾನರ್ ಆ ಚಿತ್ರದ ಬಗ್ಗೆ ಮಾತುಕತೆ ಮುಂದುವರಿಸಲಿದ್ಯಾ ಎಂಬುದು ಸದ್ಯದ ಕುತೂಹಲವಾಗಿದೆ.

  ನಿಖಿಲ್-ಅಭಿ ಇಬ್ಬರಲ್ಲಿ ಯಾರು ಇಷ್ಟ ಎಂದು ಕೇಳಿದ್ದಕ್ಕೆ ರಚಿತಾ ಆಯ್ಕೆ ಏನಾಗಿತ್ತು?

  ಕುರುಕ್ಷೇತ್ರದ ಕಥೆ ಏನು?

  ಕುರುಕ್ಷೇತ್ರದ ಕಥೆ ಏನು?

  ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್ ಅಭಿಮನ್ಯು ಪಾತ್ರ ಮಾಡಿದ್ದಾರೆ. ಇದೇ ಚಿತ್ರದಲ್ಲಿ ದರ್ಶನ್ ದುರ್ಯೋಧನನ ಪಾತ್ರ ನಿರ್ವಿಸಿದ್ದಾರೆ. ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ ಅವರು ನಿಖಿಲ್ ಗೆಲುವಿನ ಬಗ್ಗೆ ಕನಸು ಕಂಡಿದ್ದರು. ಈಗ ಆ ಕನಸು ಭಗ್ನವಾಗಿದೆ. ಕುರುಕ್ಷೇತ್ರ ಪ್ರಚಾರದಲ್ಲಿ ನಿಖಿಲ್ ಭಾಗವಹಿಸುತ್ತಾರಾ ಅಥವಾ ದರ್ಶನ್ ಇದ್ದಾರೆ ಎಂಬ ಕಾರಣಕ್ಕೂ ಈ ಸಿನಿಮಾದಿಂದ ದೂರ ಉಳಿಯಲಿದ್ದಾರಾ?

  'ಕುರುಕ್ಷೇತ್ರ' ಚಿತ್ರಕ್ಕೆ ನಿಖಿಲ್ ಕುಮಾರ್ ಡಬ್ಬಿಂಗ್ ಮಾಡಿದ್ರಾ ಇಲ್ವಾ?

  English summary
  After losing mandya election what is the next plan of Nikhil kumar. he want to do movie again or he want to continue in political?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X