»   » 'ಕುರುಕ್ಷೇತ್ರ'ದ ಒಂದು ಹಾಡಿಗೆ ಒಂದು ಕೋಟಿ ಸುರಿದ ನಿರ್ಮಾಪಕ ಮುನಿರತ್ನ!

'ಕುರುಕ್ಷೇತ್ರ'ದ ಒಂದು ಹಾಡಿಗೆ ಒಂದು ಕೋಟಿ ಸುರಿದ ನಿರ್ಮಾಪಕ ಮುನಿರತ್ನ!

Posted By:
Subscribe to Filmibeat Kannada
ಕುರುಕ್ಷೇತ್ರ'ದ ಒಂದು ಹಾಡಿಗೆ ಒಂದು ಕೋಟಿ ಸುರಿದ ನಿರ್ಮಾಪಕ ಮುನಿರತ್ನ!

'ದಿ ವಿಲನ್' ಸಿನಿಮಾದ ಒಂದು ಹಾಡಿಗೆ ಎರಡು ಕೊಟಿ ಖರ್ಚು ಮಾಡುತ್ತಿರುವ ಸುದ್ದಿ ಇತ್ತೀಚಿಗಷ್ಟೆ ಕೇಳಿ ಬಂದಿತ್ತು. ಆದರೆ ಈಗ ಅದೇ ರೀತಿ ಮತ್ತೊಂದು ಅದ್ದೂರಿ ಹಾಡನ್ನು 'ಕುರುಕ್ಷೇತ್ರ' ಸಿನಿಮಾದಲ್ಲಿಯೂ ಮಾಡಲಾಗುತ್ತಿದೆ.

'ಕುರುಕ್ಷೇತ್ರ' ಸಿನಿಮಾದ ಒಂದು ಹಾಡಿಗೆ ಒಂದು ಕೋಟಿ ರೂಪಾಯಿಯನ್ನು ನಿರ್ಮಾಪಕ ಮುನಿರತ್ನ ಸುರಿದಿದ್ದಾರೆ. ಅಭಿಮನ್ಯು ಮತ್ತು ಉತ್ತರೆ ನಡುವೆ ನಡೆಯುವ ಈ ಹಾಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹಾಡಿನಲ್ಲಿ ನಿಖಿಲ್ ಕುಮಾರ್ ಮತ್ತು ನಟಿ ಅದಿತಿ ಆರ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ನಾಲ್ಕು ಬೇರೆ ಬೇರೆ ರೀತಿಯ ಸೆಟ್ ಹಾಕಿ, ಆರು ಕ್ಯಾಮರಾಗಳಲ್ಲಿ ಈ ಹಾಡನ್ನು ಸೆರೆಯಿಡಿಯಲಾಗುತ್ತಿದೆ.

Nikhil Kumar’s song for 'Kurukshetra' Movie to cost Rs 1 crore.

ತೆಲುಗಿನ ಕೋರಿಯೊಗ್ರಾಫರ್ ಶೇಖರ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಎರಡು ದಿನಗಳ ಕಾಲ ಈ ಹಾಡಿನ ಚಿತ್ರೀಕರಣವನ್ನು ನಡೆಸಲಾಗುವುದಂತೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಡನ್ನು ಶೂಟ್ ಮಾಡಲಾಗುತ್ತಿದೆ.

English summary
Nikhil Kumar’s song for 'Kurukshetra' Movie to cost Rs 1 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X