For Quick Alerts
  ALLOW NOTIFICATIONS  
  For Daily Alerts

  ಜೂನ್ 5 ರಿಂದ ನಿಖಿಲ್ ಕುಮಾರ್ 2ನೇ ಸಿನಿಮಾ ಚಿತ್ರೀಕರಣ ಆರಂಭ

  By Suneel
  |

  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ, 'ಬಹದ್ದೂರ್' ಚೇತನ್ ಕುಮಾರ್ ನಿರ್ದೇಶನದ ಸಿನಿಮಾ ಚಿತ್ರೀಕರಣ ಆರಂಭವಾಗಲು ದಿನಗಣನೆ ಶುರುವಾಗಿದೆ. ಇತ್ತೀಚೆಗಷ್ಟೆ ಚಿತ್ರದ ನಾಯಕಿಯನ್ನು ಅನೌನ್ಸ್ ಮಾಡಿದ್ದ ಚಿತ್ರತಂಡ ಈಗ ಚಿತ್ರೀಕರಣ ಆರಂಭ ದಿನವನ್ನು ತಿಳಿಸಿದೆ.['ಜಾಗ್ವಾರ್' ನಾಯಕನಿಗಾಗಿ ಬಂದ್ಲು ಬೆಳಗಾವಿ ಸುಂದರಿ!]

  ಎಚ್.ಡಿ.ಕುಮಾರಸ್ಟಾಮಿ ರವರು ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ, ಇನ್ನೂ ಹೆಸರಿಡದ ನಿಖಿಲ್ ಕುಮಾರ್ ಎರಡನೇ ಸಿನಿಮಾದ ಚಿತ್ರೀಕರಣ ಜೂನ್ 5 ರಿಂದ ಆರಂಭವಾಗಲಿದೆ. ಈ ಬಗ್ಗೆ ನಿಖಿಲ್ ಕುಮಾರ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಡೇಟ್ ಮಾಡಿದ್ದಾರೆ. ಅಲ್ಲದೇ ಶೀಘ್ರದಲ್ಲಿ ಸಿನಿಮಾ ಟೈಟಲ್ ಅನ್ನು ತಿಳಿಸುವ ಬಗ್ಗೆಯೂ ತಿಳಿಸಿದ್ದಾರೆ.

  ಅಂದಹಾಗೆ ನಿಖಿಲ್ ಕುಮಾರ್ ಎರಡನೇ ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ಬೆಳಗಾವಿ ಮೂಲದ ಸುಂದರಿ ಹಾಗೂ ರೂಪದರ್ಶಿ ರಿಯಾ ನಲವಾಡೆ ಅಭಿನಯಿಸಲಿದ್ದಾರೆ. ರಿಯಾ ನಲವಾಡೆ ಪ್ರಸ್ತುತ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದಾರೆ. 2017 ರ ಮಾರ್ಚ್ ನಲ್ಲಿ ನಡೆದ, 'ಟ್ಯಾಲೆಂಟ್ ಹಂಟ್ ನ್ಯಾಷನಲ್ ಫ್ರೆಶ್ ಫೇಸ್' ಸ್ಪರ್ಧೆಯ ಫಿನಾಲೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಿ ವಿಜೇತರಾಗಿದ್ದರು.

  'ಬಹದ್ದೂರ್' ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ನಿಖಿಲ್ ಕುಮಾರ್ ಎರಡನೇ ಸಿನಿಮಾಗೆ ವಿ.ಹರಿಕೃಷ್ಣ ರವರು ಸಂಗೀತ ಸಂಯೋಜನೆ ನೀಡಲಿದ್ದಾರೆ. ಚಿತ್ರದಲ್ಲಿ ಅಭಿನಯಿಸಲಿರುವ ಇತರೆ ತಾರಾಬಳಗದ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

  English summary
  'Bahaddhur' Fame Chetan Kumar directorial 'Jaguar' star Nikhil Kumar upcoming Movie shoot commencing from june 5th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X