ಭಾವಿ ಪತ್ನಿಯ ಜೊತೆಗೆ ಮೊದಲ ಫೋಟೋ ಹಂಚಿಕೊಂಡ ನಿಖಿಲ್
ನಟ ನಿಖಿಲ್ ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಭಾವಿ ಪತ್ನಿ ರೇವತಿ ಜೊತೆಗೆ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.
''ನನ್ನ ಸಂಗಾತಿಯಾಗುವವರ ಜೊತೆಗಿನ ಮೊದಲ ಫೋಟೊವನ್ನ ಶೇರ್ ಮಾಡ್ಕೊಳೋಕೆ ಖುಷಿ ಆಗ್ತಿದೆ. ಎಂದಿನಂತೆ ನನ್ನ ಮೇಲಿನ ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲೂ ಇರಲಿ ಎಂದು ಕೇಳಿಕೊಳ್ಳುತ್ತೇನೆ.'' ಎಂದು ಬರೆದುಕೊಂಡಿದ್ದಾರೆ.
ರೇವತಿ ಜೊತೆಗೆ ನಿಖಿಲ್ ಕಲ್ಯಾಣ ಆಗುತ್ತಿದ್ದಾರೆ ಎನ್ನುವ ಸುದ್ದಿ ಬಂದಾಗ ಅವರ ಕೆಲವು ಫೋಟೋಗಳು ರಿವೀಲ್ ಆಗಿತ್ತು. ಆದರೆ, ಇದೇ ಮೊದಲ ಬಾರಿಗೆ ಭಾವಿ ಪತ್ನಿಯ ಜೊತೆಗಿನ ಫೋಟೋವನ್ನು ನಿಖಿಲ್ ಹಂಚಿಕೊಂಡಿದ್ದಾರೆ.

ನಿಖಿಲ್ ಕುಮಾರ್ ಹಾಗೂ ರೇವತಿ ನಿಶ್ಚಿತಾರ್ಥ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 10 ರಂದು ಈ ಜೋಡಿಯ ಎಂಗೇಜ್ ಮೆಂಟ್ ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ನಡೆಯಲಿದೆ.
ಮದುವೆ ದಿನಾಂಕ ಸದ್ಯಕ್ಕೆ ನಿರ್ಧಾರ ಆಗಿಲ್ಲ. ಆದರೆ, ನಿಖಿಲ್ ಮದುವೆಯನ್ನು ರಾಮನಗರ ಹಾಗೂ ಚನ್ನಪಟ್ಟಣದ ಮಧ್ಯೆ ಮಾಡುವ ಆಸೆಯನ್ನು ತಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜಕೀಯವಾಗಿ ತಮಗೆ ಜನ್ಮ ನೀಡಿದ ಈ ಸ್ಥಳದಲ್ಲಿಯೇ ಮಗನ ಮದುವೆ ಮಾಡುವ ಇಂಗಿತ ಕುಮಾರಸ್ವಾಮಿಯವರದ್ದಾಗಿದೆ.


Click it and Unblock the Notifications











