For Quick Alerts
  ALLOW NOTIFICATIONS  
  For Daily Alerts

  'ಜಾಗ್ವಾರ್' ಚಿತ್ರಕ್ಕೆ ಸೆನ್ಸಾರ್ ಆಯ್ತು: ಬಿಡುಗಡೆ ದಿನಾಂಕ ನಿಗದಿ ಆಯ್ತು.!

  By Harshitha
  |

  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರ್ ಅಭಿನಯಿಸಿರುವ ಚೊಚ್ಚಲ ಸಿನಿಮಾ 'ಜಾಗ್ವಾರ್' ಗೆ ಸೆನ್ಸಾರ್ ಸರ್ಟಿಫಿಕೇಟ್ ಲಭ್ಯವಾಗಿದೆ.

  ಅಪ್ಪಟ ಆಕ್ಷನ್ ಎಂಟರ್ ಟೇನರ್ ಆಗಿರುವ 'ಜಾಗ್ವಾರ್' ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'U/A' ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಮುಂದೆ ಓದಿ....

  'ಜಾಗ್ವಾರ್' ಚಿತ್ರದ ಬಿಡುಗಡೆ ದಿನಾಂಕ ನಿಗದಿ

  'ಜಾಗ್ವಾರ್' ಚಿತ್ರದ ಬಿಡುಗಡೆ ದಿನಾಂಕ ನಿಗದಿ

  ಸೆನ್ಸಾರ್ ಮಂಡಳಿಯಿಂದ ಕ್ಲಿಯರೆನ್ಸ್ ಸಿಕ್ಕ ಕೂಡಲೇ 'ಜಾಗ್ವಾರ್' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಅಕ್ಟೋಬರ್ 6 ರಂದು 'ಜಾಗ್ವಾರ್' ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. [ಚೊಚ್ಚಲ ಚಿತ್ರದಲ್ಲೇ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಲಿಪ್ ಲಾಕ್ ಭಾಗ್ಯ!]

  ಬೆಂಗಳೂರಿನಲ್ಲಿ ಮೇನ್ ಥಿಯೇಟರ್ ಯಾವುದು?

  ಬೆಂಗಳೂರಿನಲ್ಲಿ ಮೇನ್ ಥಿಯೇಟರ್ ಯಾವುದು?

  ಬೆಂಗಳೂರಿನ ಕೆ.ಜಿ.ರೋಡ್ ನಲ್ಲಿರುವ ಪ್ರಸಿದ್ಧ ಸಂತೋಷ್ ಚಿತ್ರಮಂದಿರದಲ್ಲಿ 'ಜಾಗ್ವಾರ್' ಪ್ರದರ್ಶನವಾಗಲಿದೆ. ['ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗಾಗಿ ತಮನ್ನಾ ಪಡೆದ ಸಂಭಾವನೆ ಎಷ್ಟು?]

  'ಕೋಟಿಗೊಬ್ಬ-2' ಔಟ್: 'ಜಾಗ್ವಾರ್' ಇನ್.!

  'ಕೋಟಿಗೊಬ್ಬ-2' ಔಟ್: 'ಜಾಗ್ವಾರ್' ಇನ್.!

  'ಜಾಗ್ವಾರ್' ಚಿತ್ರಕ್ಕೆ ಬೆಂಗಳೂರಿನ ಕೆ.ಜಿ.ರೋಡ್ ನಲ್ಲಿ ಇರುವ ಸಂತೋಷ್ ಮುಖ್ಯ ಚಿತ್ರಮಂದಿರವಾಗಿ ಸಿಕ್ಕಿರುವ ಕಾರಣ, ಸಂತೋಷ್ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿರುವ 'ಕೋಟಿಗೊಬ್ಬ-2' ಚಿತ್ರಕ್ಕೆ ಕೊಕ್ ನೀಡಲಾಗುವುದು. [ನಿಖಿಲ್ 'ಜಾಗ್ವಾರ್' ಬಗ್ಗೆ ಜನ ಹೀಗೂ ಯೋಚನೆ ಮಾಡ್ತಿದ್ದಾರೆ ಸ್ವಾಮಿ!]

  50 ದಿನ ಪೂರೈಸಲಿದೆ 'ಕೋಟಿಗೊಬ್ಬ-2'

  50 ದಿನ ಪೂರೈಸಲಿದೆ 'ಕೋಟಿಗೊಬ್ಬ-2'

  'ಕೋಟಿಗೊಬ್ಬ-2' ಚಿತ್ರ 50 ದಿನಗಳನ್ನ ಪೂರೈಸುವ ಹೊಸ್ತಿಲಲ್ಲಿ ಇರುವ ಕಾರಣ 'ಜಾಗ್ವಾರ್' ಚಿತ್ರಕ್ಕೆ ವಿತರಕರು/ಪ್ರದರ್ಶಕರು ದಾರಿ ಮಾಡಿಕೊಟ್ಟಿದ್ದಾರೆ.

  ವಿಶ್ವದಾದ್ಯಂತ ಸಾವಿರ ಸ್ಕ್ರೀನ್ ಗಳಲ್ಲಿ 'ಜಾಗ್ವಾರ್' ಪ್ರದರ್ಶನ?

  ವಿಶ್ವದಾದ್ಯಂತ ಸಾವಿರ ಸ್ಕ್ರೀನ್ ಗಳಲ್ಲಿ 'ಜಾಗ್ವಾರ್' ಪ್ರದರ್ಶನ?

  ವಿಶ್ವದಾದ್ಯಂತ ಬರೋಬ್ಬರಿ 1000 ಸ್ಕ್ರೀನ್ ಗಳಲ್ಲಿ 'ಜಾಗ್ವಾರ್' ಚಿತ್ರ ಪ್ರದರ್ಶನಗೊಳ್ಳಲಿದೆ.

  'ಜಾಗ್ವಾರ್' ಬಗ್ಗೆ....

  'ಜಾಗ್ವಾರ್' ಬಗ್ಗೆ....

  ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿರುವ, ಮಹಾದೇವ್ ಆಕ್ಷನ್ ಕಟ್ ಹೇಳಿರುವ 'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್, ದೀಪ್ತಿ ಸತಿ, ರಮ್ಯಾ ಕೃಷ್ಣ, ಜಗಪತಿ ಬಾಬು, ಸಾಧು ಕೋಕಿಲ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಥಮನ್ ಸಂಗೀತವಿದೆ.

  English summary
  Nikhil Kumar starrer Kannada Movie 'Jaguar' is all set to release on October 6th, 2016. 'Jaguar' Movie is directed by Mahadev, Produced by Anita Kumaraswamy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X