»   » ಹೊಸ ಟೆಕ್ನಾಲಜಿಯಲ್ಲಿ ನಡೆಯಲಿದೆ ಸೀತಾರಾಮ ಕಲ್ಯಾಣ

ಹೊಸ ಟೆಕ್ನಾಲಜಿಯಲ್ಲಿ ನಡೆಯಲಿದೆ ಸೀತಾರಾಮ ಕಲ್ಯಾಣ

Posted By:
Subscribe to Filmibeat Kannada

ಜಾಗ್ವಾರ್ ಸಿನಿಮಾದ ನಂತರ ನಟ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ. ಸಿಂಪಲ್ ಆಗಿ ಮಹೂರ್ತ ಮುಗಿಸಿದ ಚಿತ್ರತಂಡ ಈಗಾಗಲೇ ಚಿತ್ರೀಕರಣ ಶುರು ಮಾಡಿದೆ. ಎ ಹರ್ಷ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ನಿಖಿಲ್ ಅಭಿನಯಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ನಿಖಿಲ್ ಅಭಿನಯದ ಈ ಹಿಂದಿನ ಚಿತ್ರವೂ ಕೂಡ ಟೆಕ್ನಿಕಲಿ ತುಂಬಾನೇ ಚೆನ್ನಾಗಿ ಮೂಡಿ ಬಂದಿತ್ತು. ಅಷ್ಟೇ ಅಲ್ಲದೆ ಮೇಕಿಂಗ್ ಬಗ್ಗೆ ಇಡೀ ಕನ್ನಡ ಸಿನಿಮಾರಂಗವೇ ಮಾತನಾಡಿತ್ತು. ಅದೇ ರೀತಿಯಲ್ಲಿ ಸೀತಾರಾ ಕಲ್ಯಾಣ ಸಿನಿಮಾ ಕೂಡ ಟೆಕ್ನಿಕಲಿ ಸದ್ದು ಮಾಡುವುದು ಖಚಿತವಾಗಿದೆ.

Nikhil Kumar starrer Seetharama Kalyana is being shot in the Alexa Sxtw camera

ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರವನ್ನ 'ಅಲೆಕ್ಸಾ sxtw' ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುತ್ತಿದೆ. ಕನ್ನಡ ಸಿನಿಮಾರಂಗದಲ್ಲಿ ಇದೇ ಮೊದಲಬಾರಿಗೆ ಈ ಕ್ಯಾಮೆರಾವನ್ನ ಬಳಸಲಾಗುತ್ತಿದೆ.

Nikhil Kumar starrer Seetharama Kalyana is being shot in the Alexa Sxtw camera

ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿ ರಚಿತಾ ರಾಮ್ ನಿಖಿಲ್ ಜೊತೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೂ ಮುನ್ನ ನಿಖಿಲ್ ಕುಮಾರ್ ಅಭಿನಯದ ಕುರುಕ್ಷೇತ್ರ ತೆರೆಗೆ ಬರಲಿದೆ. ಒಟ್ಟಾರೆ ನಿಖಿಲ್ ಅಭಿನಯಿಸಿದ ಮೂರು ಚಿತ್ರಗಳು ಸಾಕಷ್ಟು ವಿಶೇಷತೆಗಳಿಂದ ಕೂಡಿರುವುದು ಸಿನಿಮಾದ ಬಗ್ಗೆ ಮತ್ತಷ್ಟು ಕೂತುಹಲವನ್ನ ಮೂಡಿಸುತ್ತಿದೆ.

English summary
Kannada Actor Nikhil Kumar starrer Seetharama Kalyana is being shot in the Alexa Sxtw camera . This is the first time the Kannada film industry has been using the Alexa sxtw 'camera

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X