For Quick Alerts
  ALLOW NOTIFICATIONS  
  For Daily Alerts

  ಪತ್ನಿ ಜೊತೆ ಆರ್ ಎಕ್ಸ್ 100 ಬೈಕ್ ಏರಿ ಜಾಲಿ ರೈಡ್ ಹೊರಟ ನಿಖಿಲ್ ಕುಮಾರ್

  |

  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರ್ ಪತ್ನಿ ರೇವತಿ ಜೊತೆ ಜಾಲಿ ಬೈಕ್ ರೈಡ್ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಖಿಲ್ ಮತ್ತು ರೇವತಿ ದಂಪತಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಬೈಕ್ ರೈಡ್ ಹೋಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

  ಪತ್ನಿಜೊತೆ RX 100 ನಲ್ಲಿ ರೈಡ್ ಹೊರಟ ರೈಡರ್ ನಿಖಿಲ್ | Filmibeat Kannada

  ಜಾಗ್ವಾರ್, ಬಿಎಂಡ್ಬ್ಯೂ, ಲ್ಯಾಂಬೋರ್ಗಿನಿ ಅಂತ ದುಬಾರಿ ಕಾರುಗಳಲ್ಲಿ ಓಡಾಡುವ ನಿಖಿಲ್ ಈಗ ಆರ್ ಎಕ್ಸ್ 100 ಏರಿ ಹೊರಟಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ವಿಶೇಷ ಎಂದರೆ ಜೊತೆಯಲ್ಲಿ ಪತ್ನಿಯನ್ನು ಕೂರಿಸಿಕೊಂಡು ನಿಖಿಲ್ ರೌಂಡ್ ಹೊಡೆದಿದ್ದಾರೆ.

  ವಿಡಿಯೋ: ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್‌ಔಟ್

  ಅಂದಹಾಗೆ ನಿಖಿಲ್ ಬೈಕ್ ರೈಡ್ ಮಾಡಿದ್ದು, ರಾಮನಗರ ಬಿಡದಿಯ ಕೇತಿಗಾನ ಹಳ್ಳಿ ಬಳಿ ಇರುವ ತೋಟದ ಮನೆಯಲ್ಲಿ. ನಿಖಿಲ್ ಗೆ ಆರ್ ಎಕ್ಸ್ 100 ಎಂದರೆ ತುಂಬಾ ಇಷ್ಟವಂತೆ. ಹಾಗಾಗಿ ಆರ್ ಎಕ್ಸ್ 100 ರೈಡ್ ಮಾಡಿ, ತೋಟದ ಮನೆಯನ್ನು ಸುತ್ತಾಡಿ ತುಂಬಾ ಸಂತಸ ಪಟ್ಟಿದ್ದಾರೆ.

  ನಿಖಿಲ್ ಮತ್ತು ರೇವತಿ ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಹಸೆಮಣೆ ಏರಿದ್ದಾರೆ. ವಿಶೇಷ ಇದೇ ತೋಟದ ಮನೆಯಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಕೆಲವೇ ಕೆಲವು ರಾಜಕೀಯ ಗಣ್ಯರು ಮಾತ್ರ ಭಾಗಿಯಾಗಿ ನಿಖಿಲ್ ದಂಪತಿಗೆ ಶುಭಹಾರೈಸಿದ್ದರು.

  ಇನ್ನು ನಿಖಿಲ್ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರೈಡರ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಸಹ ರಿಲೀಸ್ ಆಗಿದ್ದು, ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕುರುಕ್ಷೇತ್ರ ಸಿನಿಮಾ ಬಳಿಕ ನಿಖಿಲ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದರು, ಸ್ವಲ್ಪ ಗ್ಯಾಪ್ ನ ಬಳಿಕ ನಿಖಿಲ್ ರೈಡರ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  English summary
  Actor Nikhil Kumaraswamy Jolly ride on RX 100 bike with his wife.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X