For Quick Alerts
  ALLOW NOTIFICATIONS  
  For Daily Alerts

  'ಸೀತಾರಾಮ ಕಲ್ಯಾಣೋತ್ಸವಕ್ಕೆ ಸಿದ್ಧವಾಯ್ತು ರಾಮನಗರ

  By ರಾಮನಗರ ಪ್ರತಿನಿಧಿ
  |
  ಸೀತಾರಾಮ ಕಲ್ಯಾಣೋತ್ಸವಕ್ಕೆ ಭರ್ಜರಿ ಸಿದ್ಧತೆ..! | Filmmibeat Kannada

  ರೇಷ್ಮೆ ನಗರಿ ರಾಮನಗರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿನಯದ 'ಸೀತರಾಮ ಕಲ್ಯಾಣ' ಚಿತ್ರದ ಟೀಸರ್ ಇಂದು ರಿಲೀಸ್ ಮಾಡಲಾಗುತ್ತಿದೆ.

  ರಾಮನಗರದ ಇತಿಹಾಸ ಪ್ರಸಿದ್ಧ ಚಾಮುಂಡೇಶ್ವರಿ ದೇವರ ಕರಗ ಉತ್ಸವದ ಪ್ರಯುಕ್ತ ಸಿಎಂ ಕರ್ಮಭೂಮಿ ರಾಮನಗರದಲ್ಲೇ ತಮ್ಮ ಪುತ್ರನ ನಟನೆಯ ಚಿತ್ರದ ಟೀಸರ್ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಜಿಲ್ಲಾ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಸುಮಾರು 30 ಸಾವಿರ ಆಸನದ ವ್ಯವಸ್ಥೆ ಕೂಡ ಮಾಡಲಾಗಿದೆ. ರಾತ್ರಿ 8 ಗಂಟೆಗೆ ಚಿತ್ರದ ಮೊದಲ ಟೀಸರ್ ಬಿಡುಗಡೆಗೊಳ್ಳಲಿದೆ.

   ನಟ ನಿಖಿಲ್ ಕುಮಾರ್ ಬಗ್ಗೆ ರವಿಶಂಕರ್ ಮಾತು ನಟ ನಿಖಿಲ್ ಕುಮಾರ್ ಬಗ್ಗೆ ರವಿಶಂಕರ್ ಮಾತು

  ಸಿ.ಎಂ. ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ನಟಿ ರಚಿತಾ ರಾಮ್ ಸೇರಿದಂತೆ ಚಿತ್ರರಂಗದ ಹಲವು ನಟ ನಟಿಯರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಸಂಗೀತ ನಿದೇರ್ಶಕ ಅರ್ಜುನ್ ಜನ್ಯ ಅವರ ತಂಡದಿಂದ ಲೈವ್ ಮ್ಯೂಸಿಕಲ್ ರಸ ಸಂಜೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ.

  'ಸೀತರಾಮ ಕಲ್ಯಾಣ' ನಿಖಿಲ್ ನಟನೆಯ 2ನೇ ಚಿತ್ರವಾಗಿದೆ. ಫ್ಯಾಮಿಲಿ ಸಬ್ಜೆಕ್ಟ್ ಆಗಿರುವ ಈ ಚಿತ್ರಕ್ಕೆ ಎ.ಹರ್ಷ ನಿರ್ದೆಶನ ಮಾಡಿದ್ದಾರೆ. ಅಂದಹಾಗೆ, ಕಳೆದ ವರ್ಷ ಕೂಡ ಇದೇ ಚಾಮುಂಡೇಶ್ವರಿ ದೇವರ ಕರಗ ಉತ್ಸವದ ದಿನದಂದು ನಿಖಿಲ್ ಅಭಿನಯದ ಮೊದಲ ಚಿತ್ರ 'ಜಾಗ್ವಾರ್' ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು.

  English summary
  CM HD Kumaraswamy son Nikhil Kumaraswamy Starrer 'Seetharam Kalyana' Teaser is being released today in Ramanagara. A grand platform is already being prepared at the Ramanagara district stadium to teaser release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X