»   » ರಾಯಣ್ಣನ ನಂತರ ಮತ್ತೆ ದರ್ಶನ್ ನಿಖಿತಾ ಜೋಡಿ?

ರಾಯಣ್ಣನ ನಂತರ ಮತ್ತೆ ದರ್ಶನ್ ನಿಖಿತಾ ಜೋಡಿ?

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ನ ಚಾಲೆಂಜಿಂಗ್ಸ್ಟಾರ್ ದರ್ಶನ್ಗೆ ನಿಖಿತಾ ಕೊನೆಯ ಬಾರಿಗೆ ಜೋಡಿಯಾಗಿದ್ದು 2012ರಲ್ಲಿ ಬಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ. ಆ ಚಿತ್ರದಲ್ಲಿ ಹಾಡಿನ ದೃಶ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದರೂ ಅವರಿಬ್ಬರ ಜೋಡಿ ಸುದ್ದಿ ಮಾಡಿತ್ತು. ನಿಖಿತಾ ದರ್ಶನ್ ಜೋಡಿಯಾಗ್ತಾರೆ ಅಂದ್ರೆ ಸ್ಯಾಂಡಲ್ವುಡ್ನ ಕಿವಿಗಳೆಲ್ಲ ನೆಟ್ಟಗಾಗ್ತವೆ.

ದರ್ಶನ್ ಕುಟುಂಬದಲ್ಲಿ ವಿವಾದದ ಬಿರುಕು ಮೂಡಿಸಿದ್ದೇ ನಿಖಿತಾ ಅಂತ ಗಾಳಿಸುದ್ದಿ ಹಬ್ಬಿತ್ತು. ಆದ್ರೆ ಅದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಮತ್ತೆ ಅದನ್ನ ಕೆದಕೋದು ಯಾಕೆ? ಆದ್ರೆ ನಿಖಿತಾ ಮಾತ್ರ 'ಸಾಫ್ಟ್ ವೇರ್ ಗಂಡ' ಚಿತ್ರದ ನಂತ್ರ 'ತಲೆ ಬಾಚ್ಕೊಳ್ಳಿ ಪೌಡ್ರು ಹಾಕ್ಕೊಳ್ಳಿ' ಅನ್ನೋ ವಿಚಿತ್ರ ಶೀರ್ಷಿಕೆಯ ಮತ್ತೊಂದು ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

Nikita Thukral and Darshan to pair up again

ಈ ಚಿತ್ರದ ಮುಹೂರ್ತದ ವೇಳೆ ಯಾಕೆ ಸಣ್ಣ ಸಣ್ಣ ಸಿನಿಮಾದಲ್ಲಿ ನಟಿಸ್ತಿದ್ದೀರಾ? ಅಂದಿದ್ದಕ್ಕೆ ಬಿಂಕದಿಂದ ನಿಖಿತಾ ತುಕ್ರಾಲ್ ಹೇಳಿದ್ರಂತೆ. ಇದು ಹೊಸಬರ ಚಿತ್ರವಾದ್ರೂ ಪಾತ್ರ ಇಷ್ಟವಾಗಿ ಒಪ್ಪಿಕೊಂಡೆ. ಒಪ್ಪಬೇಕು ಇವರ ವೃತ್ತಿಪರತೆಯನ್ನು. ದರ್ಶನ್ರ ಐವತ್ತನೇ ಚಿತ್ರ ಸರ್ವಾಂತರ್ಯಾಮಿಯಲ್ಲಿ ಕಾಣಿಸಿಕೊಳ್ತೀನಿ ಅಂತನೂ ಇದೇ ಸಮಯದಲ್ಲಿ ಹೇಳಿ ಕಿವಿ ನಿಮಿರುವಂತೆ ಮಾಡಿದ್ದಾರೆ.

ಅಂತೆ ಕಂತೆ ವಿಚಾರದ ಸತ್ಯ ಗೊತ್ತಾಗೋಕೆ 2016 ಬರಬೇಕು. ಯಾಕಂದ್ರೆ ಸರ್ವಾಂತರ್ಯಾಮಿ ಸೆಟ್ಟೇರೋದು ಮುಂದಿನ ವರ್ಷ.

English summary
Nikita Thukral and Darshan to pair up again in Sarvantaryami Kannada movie after a long gap. Both appeared in Krantiveera Sangolli Rayanna before this movie. In Rayanna Nikita appeared in one song sequence. Sarvantaryami will go on floor in 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada