Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಜ್ ಮೊಮ್ಮಗಳ ಎಂಟ್ರಿಗೆ ಮತ್ತೆ ಅಡ್ಡಗಾಲು ಹಾಕಿದ ಕೋವಿಡ್
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಯಾಂಡಲ್‌ವುಡ್ ಚಿತ್ರಮಂದಿರಗಳಲ್ಲಿ ಜನಜಾತ್ರೆ ಸೇರಬೇಕಿತ್ತು. ಕನ್ನಡದ ಎರಡು ನಿರೀಕ್ಷೆಗಳು ಸಿನಿಮಾ ಥಿಯೇಟರ್ ಬರುವ ಹಾದಿಯಲ್ಲಿತ್ತು. ಆದ್ರೆ, ಕೋವಿಡ್ ಮೂರನೇ ಅಲೆಯ ಭೀತಿ ಚಿತ್ರಪ್ರೇಮಿಗಳ ಕಾತರತೆಗೆ ಮತ್ತೊಮ್ಮೆ ತಣ್ಣೀರೆರಚಿದೆ.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 20 ರಂದು ಧನ್ಯಾ ರಾಮ್ ಕುಮಾರ್ ಮತ್ತು ಸೂರಜ್ ಗೌಡ ನಟಿಸಿರುವ ನಿನ್ನ ಸನಿಹಕೆ ಸಿನಿಮಾ ತೆರೆಗೆ ಬರಬೇಕಿತ್ತು. ಈ ಹಿನ್ನೆಲೆ ಕಳೆದ ತಿಂಗಳಲ್ಲೇ ರಿಲೀಸ್ ದಿನಾಂಕ ಘೋಷಣೆ ಮಾಡಿ ಅದಕ್ಕಾಗಿ ತಯಾರಿ ನಡೆಸಿದ್ದರು. ಆದ್ರೀಗ, ಹೇಳಿದ ದಿನಾಂಕಕ್ಕೆ ಸಿನಿಮಾ ಬರ್ತಿಲ್ಲ ಎಂದು ಮಾಹಿತಿ ರವಾನಿಸಿದ್ದಾರೆ.
ಸದ್ಯಕ್ಕಿಲ್ಲ
100%
ಅವಕಾಶ:
ಅತಂತ್ರ
ಸ್ಥಿತಿಯಲ್ಲಿ
ಸ್ಟಾರ್
ನಟರ
ಚಿತ್ರಗಳು
''ನಮ್ಮ 'ನಿನ್ನ ಸನಿಹಕೆ' ಚಿತ್ರದ ಎಲ್ಲಾ ಹಾಡು ಮತ್ತು ಟ್ರೈಲರ್‌ನ್ನು ನೀವೆಲ್ಲರೂ ನೋಡಿ ಇಷ್ಟಪಟ್ಟು ಹರಸಿ ಹಾರೈಸಿದ್ದೀರಿ, ನಿಮ್ಮೆಲ್ಲರ ನಿರಂತರ ಬೆಂಬಲ ಹಾಗೂ ಚಿತ್ರದ ಮೇಲಿನ ನಿಮ್ಮ ಪ್ರೀತಿಗೆ ತಂಡದ ಪರವಾಗಿ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ಕೋವಿಡ್ 19ರ ಅಸಹಜ ಸ್ಥಿತಿಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಎಂಬ ನಿರ್ಬಂಧ ಇರುವ ಕಾರಣ, ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಬರುವ ನಮ್ಮ ಪ್ರೇಕ್ಷಕರ ಕಾಳಜಿಯನ್ನು ಪರಿಗಣಿಸಿ ಚಿತ್ರದ ಬಿಡುಗಡೆಯನ್ನು ಕೆಲ ದಿನಗಳ ಕಾಲ ಮುಂದೆ ಹಾಕಬೇಕಾದ ಕಠಿಣ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸುತ್ತಿರುವುದು ವಿಷಾದದ ಸಂಗತಿಯೇ ಸರಿ. ಆದರೆ ನಿಮ್ಮೆಲ್ಲರ ಸುರಕ್ಷೆ ನಮ್ಮ ಮೊದಲ ಆದ್ಯತೆ ಆಗಿರುವುದರಿಂದ ಹೆಚ್ಚು ದಿನ ತಡ ಮಾಡದೇ ಸದ್ಯದಲ್ಲೇ ಸುರಕ್ಷಿತವಾದ ದಿನಾಂಕದೊಂದಿಗೆ ಚಿತ್ರಮಂದಿರಕ್ಕೆ ಬರುತ್ತೇವೆ ಎಂದು ಈ ಮೂಲಕ ತಿಳಿಸುತ್ತೇವೆ- ಇಂತಿ ನಿನ್ನ ಸನಿಹಕೆ ಚಿತ್ರತಂಡ'' ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ಮುಂದೆ ಓದಿ....

ನೈಟ್ ಕರ್ಫ್ಯೂ-ವೀಕೆಂಡ್ ಕರ್ಫ್ಯೂ ಸಮಸ್ಯೆ
ಹೊಸ ಸಿನಿಮಾ ಬಿಡುಗಡೆಯಾದರೆ ಮೊದಲ ಮೂರು ದಿನಗಳ ಪ್ರಮುಖವಾಗಿರುತ್ತದೆ. ಈಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇರುವುದರಿಂದ ಚಿತ್ರದ ಓಪನಿಂಗ್‌ಗೆ ಸಮಸ್ಯೆಯಾಗುತ್ತದೆ. ಹಾಗು ರಾಜ್ಯದಾದ್ಯಂತ ರಾತ್ರಿ 9 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸಹಜವಾಗಿ ನೈಟ್ ಶೋ ನಡೆಯುವುದಿಲ್ಲ. ಇದು ಚಿತ್ರಗಳಿಗೆ ದೊಡ್ಡ ಹಿನ್ನಡೆ ತರುತ್ತದೆ. ಹಾಗಾಗಿ, ಹೊಸ ಸಿನಿಮಾಗಳು ಬಿಡುಗಡೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ.
ಗಾಯದ
ಮೇಲೆ
ಬರೆ
ಎಳೆದಂತಾಯಿತು
ಚಿತ್ರಮಂದಿರ
ಮಾಲೀಕರ
ಕಥೆ

50 ಪರ್ಸೆಂಟ್ ಅವಕಾಶ ಇರೋದು ಹಿನ್ನಡೆ
ಪ್ರಸ್ತುತ ರಾಜ್ಯದಲ್ಲಿ ಚಿತ್ರಮಂದಿರಗಳು ಕಾರ್ಯನಿರ್ವಹಿಸಲು ಅನುಮತಿ ಇದ್ದರೂ ಶೇಕಡಾ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಜುಲೈ 19 ರಿಂದ ಥಿಯೇಟರ್‌ಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು. ಬಹುಶಃ ಆಗಸ್ಟ್ ತಿಂಗಳಲ್ಲಿ 100 ಪರ್ಸೆಂಟ್ ಜಾರಿ ಮಾಡಬಹುದು ಎಂಬ ಲೆಕ್ಕಾಚಾರ ಇತ್ತು. ಆದರೆ, ಕೋವಿಡ್ ಮೂರನೇ ಅಲೆಯ ಭೀತಿ ಸದ್ಯಕ್ಕೆ 100 ಪರ್ಸೆಂಟ್ ಕೊಡಲು ಬಿಡುವುದಿಲ್ಲ ಎನ್ನುವುದು ತಿಳಿದಿದೆ.

'ಸಲಗ' ಚಿತ್ರವೂ ಮುಂದೂಡಿಕೆ?
ನಿನ್ನ ಸನಿಹಕೆ ಚಿತ್ರಕ್ಕೂ ಮೊದಲೇ ದುನಿಯಾ ವಿಜಯ್ ನಟನೆಯ ಸಲಗ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಮಾಡಿತ್ತು. ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 20 ರಂದು ರಿಲೀಸ್ ಮಾಡುವುದಾಗಿ ತಿಳಿಸಿತ್ತು. ಈಗಿನ ಪರಿಸ್ಥಿತಿಯಲ್ಲಿ ಸಲಗ ಚಿತ್ರವೂ ಅಂದುಕೊಂಡಿದ್ದ ದಿನಕ್ಕೆ ಬರುವುದು ಕಷ್ಟ. ಹಾಗಾಗಿ, ಸಲಗ ಸಿನಿಮಾವೂ ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಅಧಿಕೃತವಾಗಿ ಪ್ರಕಟಿಸಬೇಕು ಅಷ್ಟೇ. ಈ ಚಿತ್ರವನ್ನು ಸ್ವತಃ ವಿಜಯ್ ಅವರೇ ನಿರ್ದೇಶಿಸಿರುವುದರಿಂದ ಹೆಚ್ಚು ಕುತೂಹಲ ಮೂಡಿಸಿದೆ.

ಸಿಎಂ ಏನು ಹೇಳಿದ್ದರು?
ಕಳೆದ ವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ 100 ಪರ್ಸೆಂಟ್ ಅವಕಾಶ ಕೊಡಲು ಮನವಿ ಮಾಡಿದರು. ''ಕಳೆದ ಎರಡು ವರ್ಷಗಳಿಂದ ಚಿತ್ರರಂಗದ ಸಮಸ್ಯೆ ಎದುರಿಸುತ್ತಿದೆ. ಈಗ 50 ಪರ್ಸೆಂಟ್ ಇರುವುದರಿಂದ ಯಾವುದೇ ಹೊಸ ಸಿನಿಮಾ ಬರ್ತಿಲ್ಲ. ದೊಡ್ಡ ಬಜೆಟ್ ಚಿತ್ರಗಳ ಥಿಯೇಟರ್‌ಗೆ ಬಂದರೆ ಹೊಸಬರ ಸಿನಿಮಾಗಳಿಗೂ ಸಹಾಯವಾಗುತ್ತದೆ. ಹಾಗಾಗಿ, 100 ಪರ್ಸೆಂಟ್ ಅವಕಾಶ ಕೊಡಿ'' ಎಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ''ಕೋವಿಡ್ 3ನೇ ಅಲೆ ಭೀತಿಯಲ್ಲಿರುವ ಈ ಸಂದರ್ಭದಲ್ಲಿ ತಕ್ಷಣ ಏನು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ತಜ್ಞರ ಜೊತೆ ಚರ್ಚೆ ಮಾಡಿ ಆಮೇಲೆ ತೀರ್ಮಾನ ಮಾಡುತ್ತೇನೆ'' ಎಂದು ಹೇಳಿದ್ದರು.