»   » ಅಂತೂ ಇಂತೂ ನಿರಂಜನ್ ದೇಶಪಾಂಡೆಗೆ ಖುಲಾಯಿಸಿತು ಅದೃಷ್ಟ.!

ಅಂತೂ ಇಂತೂ ನಿರಂಜನ್ ದೇಶಪಾಂಡೆಗೆ ಖುಲಾಯಿಸಿತು ಅದೃಷ್ಟ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಭಾಗವಹಿಸಿದ್ಮೇಲೆ ಆರ್.ಜೆ.ನಿರಂಜನ್ ದೇಶಪಾಂಡೆ ಅದೃಷ್ಟ ನಿಜಕ್ಕೂ ಖುಲಾಯಿಸಿಬಿಟ್ಟಿದೆ.

'ಬಿಗ್ ಬಾಸ್' ರಿಯಾಲಿಟಿ ಶೋ ಮುಗಿದ ಕೂಡಲೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಭಾರತ' ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿರುವ ನಿರಂಜನ್ ದೇಶಪಾಂಡೆಗೆ ಒಂದು ಬಂಪರ್ ಆಫರ್ ಹುಡುಕ್ಕೊಂಡ್ ಬಂದಿದೆ.[ನೀವೆಲ್ಲರೂ ಬಾಯ್ಮೇಲೆ ಬೆರಳಿಡುವ ಹಾಗೆ ಮದ್ವೆ ಆಗಲಿದ್ದಾರೆ 'ಬಿಗ್ ಬಾಸ್' ನಿರಂಜನ್!]

ಸಿನಿಮಾ ಹೀರೋ ಆಗಬೇಕು ಎಂಬ ನಿರಂಜನ್ ದೇಶಪಾಂಡೆ ಕನಸು ಈಗ ನನಸು ಆಗುವ ಸಮಯ ಬಂದಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ಓದಿರಿ....

'ಹೀರೋ' ನಿರಂಜನ್ ದೇಶಪಾಂಡೆ

ಆರ್.ಜೆ. ನಿರಂಜನ್ ದೇಶಪಾಂಡೆ ನಾಯಕ ನಟನಾಗಿ ಅಭಿನಯಿಸಲು ಒಪ್ಪಿಕೊಂಡಿರುವ ಸಿನಿಮಾ 'ನನ್ನ ಪ್ರೇಮಿ'.

'ಲವ್ವರ್ ಬಾಯ್' ನಿರಂಜನ್

ನಿಜ ಜೀವನದಲ್ಲಿ ನಿರಂಜನ್ ಲವ್ ಮಾಡುತ್ತಿರುವ ವಿಚಾರ ನಿಮಗೆಲ್ಲ ಗೊತ್ತೇಯಿದೆ. ತೆರೆ ಮೇಲೂ ನಿರಂಜನ್ 'ನನ್ನ ಪ್ರೇಮಿ' ಚಿತ್ರದಲ್ಲಿ ಲವ್ವರ್ ಬಾಯ್ ಆಗಿ ನಟಿಸಲಿದ್ದಾರೆ. ಹಾಗಂತ ಇದು ಖಾಲಿ ಪೋಲಿ ಲವ್ ಸ್ಟೋರಿ ಎಂದುಕೊಳ್ಳಬೇಡಿ. ಯಾಕಂದ್ರೆ...

ಅರಿಷಡ್ವರ್ಗಗಳ ಪ್ರೀತಿ

ಅರಿಷಡ್ವರ್ಗಗಳ ಕುರಿತು ವಿಶಿಷ್ಟವಾಗಿ ರಚಿಸಿರುವ ಚಿತ್ರಕಥೆ 'ನನ್ನ ಪ್ರೇಮಿ' ಸಿನಿಮಾ ಹೊಂದಿದೆ. ಅರಿಷಡ್ವರ್ಗಗಳನ್ನ ಪ್ರತಿನಿಧಿಸಲು ಸಿನಿಮಾದಲ್ಲಿ ಆರು ಜನ ನಾಯಕಿಯರು ಇರಲಿದ್ದಾರಂತೆ.

ವಿಭಿನ್ನ ಕಥೆಗೆ ಮನಸೋತ ನಿರಂಜನ್

ಸಾಮಾನ್ಯ ಲವ್ ಸ್ಟೋರಿ ಅಲ್ಲದ, ವಿಭಿನ್ನ ಚಿತ್ರಕಥೆ ಹೊಂದಿರುವ ಕಾರಣಕ್ಕೆ 'ನನ್ನ ಪ್ರೇಮಿ' ಚಿತ್ರಕ್ಕೆ ನಿರಂಜನ್ ದೇಶಪಾಂಡೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

ನಿರಂಜನ್ ಗೆ ನಾಯಕಿಯರು ಯಾರು.?

ಆರು ಜನ ನಾಯಕಿಯರ ಪೈಕಿ 'ಬಿಗ್ ಬಾಸ್' ಖ್ಯಾತಿಯ ಸಂಜನಾ ಒಬ್ಬರು. ಇವರ ಜೊತೆಗೆ ಮುಂಬೈ ಬೆಡಗಿ ಪೂಜಾ ಝವೇರಿ ಕೂಡ ಇರಲಿದ್ದಾರೆ. ಉಳಿದ ನಟಿಯರ ಆಯ್ಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ.

ನಿರ್ದೇಶಕ ಯಾರು.?

ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಣಾ 'ನನ್ನ ಪ್ರೇಮಿ' ಚಿತ್ರಕ್ಕೆ ಅಕ್ಷನ್ ಕಟ್ ಹೇಳಲಿದ್ದಾರೆ.

ಇದು ಹೊಸದೇನಲ್ಲ.!

ಹಾಗ್ನೋಡಿದ್ರೆ, ಆರ್.ಜೆ ನಿರಂಜನ್ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 'ಬಾಂಬೆ ಮಿಠಾಯಿ' ಎಂಬ ಚಿತ್ರದಲ್ಲಿ ನಿರಂಜನ್ ಅಭಿನಯಿಸಿದ್ದರು. ಈಗ 'ನನ್ನ ಪ್ರೇಮಿ' ಚಿತ್ರಕ್ಕೆ ಅವಕಾಶ ಸಿಕ್ಕಿದೆ.

ಶುಭ ಸಮಯ

ಮೇ ತಿಂಗಳಿನಲ್ಲಿ 'ನನ್ನ ಪ್ರೇಮಿ' ಚಿತ್ರ ಸೆಟ್ಟೇರಲಿದೆ. ಜೊತೆಗೆ ಮೇ ತಿಂಗಳಿನಲ್ಲಿಯೇ ಯಶಸ್ವಿನಿಯವರೊಂದಿಗೆ ನಿರಂಜನ್ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕೂಡ ಇದೆ.

English summary
RJ Niranjan Deshpande of 'Bigg Boss Kannada 4' fame is all set to star in Kannada Movie 'Nanna Premi' along with Sanjana.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada