For Quick Alerts
  ALLOW NOTIFICATIONS  
  For Daily Alerts

  4 ವರ್ಷದ ಸಂಭ್ರಮದಲ್ಲಿ 'ರಂಗಿತರಂಗ' ಚಿತ್ರ

  |

  ರಂಗಿತರಂಗ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನು ಮೂಡಿಸಿದ ಸಿನಿಮಾ. ಹೊಸ ತಂಡವೊಂದು ಗೆದ್ದು ಬೀಗಿದ ಪರಿಗೆ ಇಡೀ ಚಿತ್ರರಂಗ ಒಮ್ಮೆ ದಂಗ್ ಆಗಿತ್ತು. ರಿಲೀಸ್ ಆದ ಹೊಸತರಲ್ಲಿ ಚಿತ್ರಮಂದಿರಕ್ಕಾಗಿ ಪ್ರತಿಭಟಿಸುತ್ತಿದ್ದ ತಂಡಕ್ಕೆ, ಸಿನಿಮಾ ಯಶಸ್ಸು ಕಾಣುತ್ತಿದ್ದಂತೆ ರಂಗಿತರಂಗ ಚಿತ್ರದ ಚಿತ್ರಣವೆ ಬೇರೆ ಆಗಿ ಹೋಗಿತ್ತು.

  ಒಂದು ಅದ್ಭುತ ಸಿನಿಮಾವನ್ನು ಪ್ರೇಕ್ಷಕರು ಕೈ ಬಿಡಿವುದಿಲ್ಲ ಎನ್ನುವುದುಕ್ಕೆ ರಂಗಿತರಂಗ ದೊಡ್ಡ ಉದಾಹರಣೆ ಆಗಿದೆ. ಈಗ್ಯಾಕೆ ಈ ಬಗ್ಗೆ ಮಾತು ಅಂತೀರಾ. ರಂಗಿತರಂಗ ರಿಲೀಸ್ ಆಗಿ 4 ವರ್ಷಗಳೆ ಕಳೆದಿವೆ. ಇದೆ ದಿನ ನಾಲ್ಕು ವರ್ಷದ ಹಿಂದೆ ರಂಗಿತರಂಗ ಸಿನಿಮಾ ರಿಲೀಸ್ ಆಗುವ ಮೂಲಕ ಕನ್ನಡ ಚಿತ್ರಾಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿತ್ತು.

  ಹೇಗಿರುತ್ತೆ ಸುದೀಪ್ - ಅನೂಪ್ ಜೋಡಿಯ ಸಿನಿಮಾ?

  ಅಂದ್ಹಾಗೆ ರಂಗಿತರಂಗ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ. ನಾಯಕನಾಗಿ ನಿರೂಪ್ ಬಂಡಾರಿ ಮಿಂಚಿದ್ದರು. ನಿರೂಪ್ ಗೆ ನಾಯಕಿಯಾಗಿ ಆವಂತಿಕಾ ಶೆಟ್ಟಿ, ರಾಧಿಕಾ ಚೇತನ್ ಕಾಣಿಸಿಕೊಂಡಿದ್ದರು. ಪ್ರಮುಖ ಪಾತ್ರದಲ್ಲಿ ಸಾಯಿ ಕುಮಾರ್ ಬಣ್ಣ ಹಚ್ಚಿದ್ದಾರೆ.

  2015 ಜುಲೈ 3 ರಂದು ರಂಗಿತರಂಗ ರಾಜ್ಯದಾದ್ಯಂತ ತೆರೆಗೆ ಬಂದಿತ್ತು. ಆ ನಂತರ ಸಿನಿಮಾ ಯಶಸ್ಸು ಕಾಣುತ್ತಿದ್ದಂತೆ ವಿದೇಶಗಳಲ್ಲೂ ರಂಗಿತರಂಗ ಅಬ್ಬರ ಜೋರಾಗಿತ್ತು. ಅದೆಲ್ಲ ಈಗ ಇತಿಹಾಸ. ಅಂತಹ ಅದ್ಭುತ ಸಿನಿಮಾ ನೀಡಿದ ಚಿತ್ರತಂಡಕ್ಕೆ ಇಂದು ವಿಶೇಷವಾದ ಚಿತ್ರ. ಈ ಸುದಿನವನ್ನು ಇಂದು ನೆನಪಿಸಿಕೊಳ್ಳುವ ಮೂಲಕ ಸಾಮಾಜಿಕ ತಾಲತಾಣದಲ್ಲಿ ಸಂತಸವನ್ನು ಹಂಚಿಕೊಂಡಿದೆ ಚಿತ್ರತಂಡ.

  English summary
  Kannada actor Nirup Bhandari starrer Rangitaranga film completed 4 year. This film is directed by Anup Bhandari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X