»   » ಅಂಕಲ್ ಸ್ಯಾಮ್ ನೆಲದಲ್ಲಿ ರಂಗಿತರಂಗದ ಮಿಂಚು

ಅಂಕಲ್ ಸ್ಯಾಮ್ ನೆಲದಲ್ಲಿ ರಂಗಿತರಂಗದ ಮಿಂಚು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಹೊಸಬರ ಚಿತ್ರ 'ರಂಗಿತರಂಗ' ವಿದೇಶದಲ್ಲಿ ಕೂಡ ಕಮಾಲ್ ಮಾಡಿದೆ ಅಂತ ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ. ಮಲ್ಟಿ ಸ್ಟಾರರ್ ಚಿತ್ರಗಳ ನಡುವೆ ಈಗಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ರಂಗಿತರಂಗ' ಹೊಸಬರು ಕೂಡ ಅತ್ಯುತ್ತಮ ಚಿತ್ರ ಕೊಡಬಲ್ಲರು ಎನ್ನುವುದನ್ನ ಪ್ರೂವ್ ಮಾಡಿದಂತಿದೆ.

ಇಡೀ ಕರ್ನಾಟಕದಾದ್ಯಂತ ಸುದ್ದಿ ಮಾಡಿದ್ದ 'ರಂಗಿತರಂಗ' ಚಿತ್ರ ತಂಡದಿಂದ ಮತ್ತೊಂದು ಸುದ್ದಿ ಏನಪ್ಪಾ ಅಂದ್ರೆ ಯೂರೋಪಿಯನ್ ಸಿಟಿಗಳಲ್ಲಿ ಪ್ರದರ್ಶನ ಕಂಡಿರುವ ಚಿತ್ರ ಈಗ ಯುಎಸ್ಎ, ಹಾಗೂ ಕೆನಡಾದಲ್ಲಿ ಮುಂದಿನ ದಿನಗಳಲ್ಲಿ ಪ್ರದರ್ಶನಗೊಳ್ಳಲಿದೆ. [ಸಪ್ತ ಸಾಗರದಾಚೆ 'ರಂಗಿತರಂಗ' ಕಮಾಲ್]

Nirup Bhandari starrer 'RangiTaranga' to release in USA and Canada

ಜಾಲಿ ಹಿಟ್ಸ್ ಡಿಸ್ಟ್ರಿಬ್ಯುಷನ್ ಅವರು ಈ ಚಿತ್ರವನ್ನು ಅಮೇರಿಕಾ ಹಾಗೂ ಕೆನಡಾ ದೇಶಗಳಲ್ಲಿ ಹಂಚಿಕೆ ಮಾಡುತ್ತಿದ್ದು, ಸುಮಾರು 20 ರಿಂದ 30 ಸೆಂಟರ್ ಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತಿದೆ. ಮಾತ್ರವಲ್ಲದೇ ಇನ್ನೂ ಪ್ರೇಕ್ಷಕರಿಂದ ಡಿಮ್ಯಾಂಡ್ ಇದ್ದರೆ ಇನ್ನೂ ಹೆಚ್ಚಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಿಗೆ ವಿಸ್ತರಿಸಲಾಗುತ್ತದಂತೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

ಕನ್ನಡಿಗರು ಯಾರದ್ರೂ ವಿದೇಶದಲ್ಲಿ ವಾಸ್ತವ್ಯ ಹೂಡಿದ್ದರೆ, ತಮ್ಮ ತಮ್ಮ ಸಿಟಿಗಳಲ್ಲಿ ಪ್ರದರ್ಶನ ಮಾಡಲು info@jollyhits.com +1 412-999-9236 ಹಾಗೂ www.jollyhits.com ಗೆ ಸಂಪರ್ಕಿಸಲು ಕೋರಲಾಗಿದೆ.['ರಂಗಿತರಂಗ' ಚಿತ್ರಕ್ಕೆ ವಿಮರ್ಶಕರು ಜೈ ಅಂದ್ರಾ?]

ಒಟ್ಟಾರೆಯಾಗಿ ಹೇಳಬೇಕೆಂದರೆ ಸ್ವದೇಶದಲ್ಲಿ ಚಿಂದಿ ಉಡಾಯಿಸಿದ ಹೊಸಬರ 'ರಂಗಿತರಂಗ' ಮತ್ತೊಮ್ಮೆ ವಿದೇಶದಲ್ಲಿ ಕಮಾಲ್ ಮಾಡಲು ಹೊರಟಿದೆ. ಏನೇ ಆದ್ರೂ ಕನ್ನಡಿಗರು ಹೊಸಬರನ್ನು ಕೈ ಹಿಡಿದು ನಡೆಸುತ್ತಿದ್ದಾರೆ ಅಂತ ಈ ಸಂದರ್ಭದಲ್ಲಿ ಹೇಳಬಹುದು ಅಲ್ವಾ.

English summary
Nirup Bhandari starrer 'Rangitaranga' is all set to release in Foreign countries. 'Jolly Hits Distributions', has bought 'RangiTaranga' overseas rights for USA and Canada release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada