»   » 'ಮಿಸೆಸ್ ಇಂಡಿಯಾ ಸೌತ್ 2017' ವಿಜೇತೆ ನಿಶ್ಚಿತ ಶೆಣೈ

'ಮಿಸೆಸ್ ಇಂಡಿಯಾ ಸೌತ್ 2017' ವಿಜೇತೆ ನಿಶ್ಚಿತ ಶೆಣೈ

Posted By:
Subscribe to Filmibeat Kannada

2017 ಏಪ್ರಿಲ್ 23 ರಂದು ಚೆನ್ನೈ ನ ರೆಡಿಸ್ಸನ್ ಬ್ಲು ಸಿಟಿ ಸೆಂಟರ್ ನಲ್ಲಿ ನಡೆದ 'ಮಿಸೆಸ್ ಇಂಡಿಯಾ ಸೌತ್ 2017' ಸ್ಪರ್ಧೆಯಲ್ಲಿ ಮಂಗಳೂರು ಮೂಲದ ನಿಶ್ಚಿತ ಶೆಣೈ ಅವರು ವಿಜೇತರಾಗಿದ್ದಾರೆ.

Nischitha Shenoy announced winner of Mrs. India South 2017

ಮಿಸೆಸ್ ಬ್ಯೂಟಿ ಇಂಡಿಯಾ ಸ್ಪರ್ಧೆಯು, ಅಂತರರಾಷ್ಟ್ರೀಯ ಮಟ್ಟದ " 'ಮಿಸೆಸ್ ಏಷಿಯಾ ಇಂಟರ್ ನ್ಯಾಷನಲ್', 'ಮಿಸೆಸ್ ವರ್ಲ್ಡ್' ಮತ್ತು 'ಮಿಸೆಸ್ ಪ್ಲಾನೆಟ್' " ಸ್ಪರ್ಧೆಗಳಲ್ಲಿ ಭಾಗವಹಿಸಲು ವೇದಿಕೆ ಕಲ್ಪಿಸಿಕೊಡುವ ಏಕಮಾತ್ರ ಸ್ಪರ್ಧೆಯಾಗಿದ್ದು, 20 ಅಭ್ಯರ್ಥಿಗಳು ಭಾವಹಿಸಿದ್ದ 2017 ರ ಸಾಲಿನ 'ಮಿಸೆಸ್ ಇಂಡಿಯಾ ಸೌತ್' ಸೌಂದರ್ಯ ಸ್ಪರ್ಧೆಯಲ್ಲಿ ನಿಶ್ಚಿತ ಶೆಣೈ ರವರು ವಿಜಯದ ಕಿರೀಟ ಧರಿಸಿದ್ದಾರೆ. ನಿಶ್ಚಿತ ಶೆಣೈ ರವರಿಗೆ 'ಮಿಸೆಸ್ ಇಂಡಿಯಾ 2017' ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರೆತಿದ್ದು, 'ಮಿಸೆಸ್ ಇಂಡಿಯಾ ಸೌತ್ 2017' ಜೊತೆಗೆ 'ಮಿಸೆಸ್ ಇಂಡಿಯಾ ಬಾಲಿವುಡ್ ಕ್ವೀನ್-ಸೌತ್ ಎಡಿಸನ್ 2017' ಹೆಸರನ್ನು ಗಳಿಸಿದ್ದಾರೆ.

Nischitha Shenoy announced winner of Mrs. India South 2017

ನಿಶ್ಚಿತ ಶೆಣೈ ಮೂಲತಃ ಕರ್ನಾಟಕದ ಮಂಗಳೂರು ಮೂಲದವರಾಗಿದ್ದು, ಅವರ ತಂದೆ ವಿ ಅನಂತ್ ಶೆಣೈ- ತಾಯಿ ರೇಷ್ಮ ಶೆಣೈ. ಸದಾ ತಮ್ಮ ಕಠಿಣ ಪರಿಶ್ರಮದಲ್ಲಿ ನಂಬಿಕೆ ಇಡುವ ನಿಶ್ಚಿತ ಶೆಣೈ, 10 ವರ್ಷಗಳಿಂದ ತಂತ್ರಜ್ಞಾನ ಸಲಹಾ ಉದ್ಯೋಗಿಯಾಗಿದ್ದಾರೆ. ಅಲ್ಲದೇ ಜುಂಬಾ ಫಿಟ್‌ನೆಸ್ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 10 ವರ್ಷಗಳ ಕಾಲ ಭರತನಾಟ್ಯಂ ನೃತ್ಯ ತರಬೇತಿ ಪಡೆದಿದ್ದಾರೆ.

English summary
Mangaluru based Nischitha Shenoy announced winner of Mrs. India South 2017 as part of Mrs. India Beauty Pageant

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada