ಮಾತು ಬಾರದ ಮೂಕಿಯಾದ 'ಸ್ವೀಟಿ' ಅನುಷ್ಕಾ ಶೆಟ್ಟಿ

ಇತ್ತೀಚಿಗಷ್ಟೆ ಕನ್ನಡದಲ್ಲಿ ಟ್ವೀಟ್ ಮಾಡಿ, ಮತ್ತೆ ಹೆಮ್ಮೆಯ ಕನ್ನಡತಿ ಎಂದು ಸಾಬೀತು ಮಾಡಿದ್ದರು ಅನುಷ್ಕಾ ಶೆಟ್ಟಿ. ಈಗ ಈ ನಟಿ ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ.

ಅನುಷ್ಕಾ ಶೆಟ್ಟಿ ತಮ್ಮ ಕೆರಿಯರ್ ನಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಬಂದ ನಟಿ. 'ಅರುಂಧತಿ', ವೇದಂ, 'ರುದ್ರಮದೇವಿ', 'ಬಾಹುಬಲಿ', 'ಭಾಗವತಿ', 'ಸ್ವೀಟಿ' ಹೀಗೆ ಅನುಷ್ಕಾ ಅದೆಷ್ಟೋ ಸವಾಲಿನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈಗ ಮತ್ತೆ ತಮ್ಮ ಪ್ರತಿಭೆಗೆ ತಕ್ಕ ಪಾತ್ರವನ್ನು ಆಯ್ಕೆ ಮಾಡಿದ್ದಾರೆ.

ಅನುಷ್ಕಾ ಮುಂದಿನ ಸಿನಿಮಾ 'ನಿಶ್ಯಬ್ದಂ'. ಹೇಮಂತ್ ಮಧುಕರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಾಕ್ಷಿ ಎಂಬ ಪ್ರೆಂಟರ್ ಪಾತ್ರವನ್ನು ಅನುಷ್ಕಾ ಮಾಡುತ್ತಿದ್ದಾರೆ. ಅಚ್ಚರಿ ಅಂದರೆ, ಮಾತು ಬಾರದ ಹುಡುಗಿ ಪಾತ್ರವನ್ನು ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ.

Nishabdam Telugu Movie First Look Out

ಇತ್ತೀಚಿಗೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮೊದಲ ಪೋಸ್ಟರ್ ತುಂಬ ಚೆನ್ನಾಗಿದೆ. ಅನುಷ್ಕಾ ಲುಕ್ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಪೋಸ್ಟರ್ ನಲ್ಲಿ ಅನುಷ್ಕಾ ಬ್ರಷ್ ಹಿಡಿದು ಚಿತ್ರ ಬರೆಯುತ್ತಿದ್ದಾರೆ.

'ನಿಶ್ಯಬ್ದಂ' ಮೊದಲ ನೋಟದಲ್ಲಿ ಗಮನ ಸೆಳೆಯಲು ಯಶಸ್ವಿಯಾಗಿದೆ. ಅಂದಹಾಗೆ, ಸಿನಿಮಾ ತಮಿಳು, ತೆಲುಗು, ಮಲೆಯಾಳಂ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

More from Filmibeat

English summary
Actress Anushka Shetty's 'Nishabdam' telugu movie first look out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X