For Quick Alerts
  ALLOW NOTIFICATIONS  
  For Daily Alerts

  ನಿಶ್ವಿಕಾ ನಾಯ್ಡು ಪ್ರಕಾರ 'ಜಂಟಲ್ ಮ್ಯಾನ್' ಅಂದ್ರೆ ಇವರಂತೆ!

  |
  ನಿರೂಪಕನಿಗೆ ಕ್ಲಾಸ್ ತೆಗೆದುಕೊಂಡ ನಿಶ್ವಿಕಾ ನಾಯ್ಡು..! | Nishvika Naidu | Gentleman | FilmibeatKannada

  ಪ್ರಜ್ವಲ್ ದೇವರಾಜ್ ನಟನೆಯ 'ಜಂಟಲ್ ಮ್ಯಾನ್' ಸಿನಿಮಾ ಫೆಬ್ರವರಿ 7 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ.

  ಇತ್ತೀಚಿಗಷ್ಟೆ ಫಿಲ್ಮಿಬೀಟ್ ಕನ್ನಡದ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದ ನಿಶ್ವಿಕಾ ನಾಯ್ಡು, ತಮ್ಮ ನಿಜ ಜೀವನದಲ್ಲಿ ಜಂಟಲ್ ಮ್ಯಾನ್ ಅಂದ್ರೆ ಯಾರು ಎಂದು ಹೇಳಿಕೊಂಡಿದ್ದಾರೆ.

  'ನನ್ನ ತಂದೆ ತನ್ನ ಜೀವನದಲ್ಲಿ ನಿಜವಾದ ಜಂಟಲ್ ಮ್ಯಾನ್' ಎಂದಿದ್ದಾರೆ ನಿಶ್ವಿಕಾ ನಾಯ್ಡು. ಇನ್ನು ಜಂಟಲ್ ಮ್ಯಾನ್ ಸಿನಿಮಾದ ಬಗ್ಗೆ ಮಾತನಾಡಿದ ನಟಿ, 'ಕಥೆ ಕೇಳಿದಾಗ ಇದೊಂದು ಕಾಮಿಡಿ ಸಿನಿಮಾ ಅಂದುಕೊಂಡಿದ್ದೆ. 18 ಗಂಟೆ ನಿದ್ದೆ ಮಾಡುವುದು ಅಂದ್ರೆ ಬಹುಶಃ ಪಕ್ಕಾ ಕಾಮಿಡಿ ಸ್ಕ್ರಿಪ್ಟ್ ಇರಬಹುದು ಅನಿಸುತ್ತಿತ್ತು. ಆದರೆ, ಆಮೇಲೆ ಗೊತ್ತಾಯ್ತು ಇದು ಥ್ರಿಲ್ಲಿಂಗ್ ಸಬ್ಜೆಕ್ಟ್ ಅಂತ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ' ಎಂದು ಅನುಭವ ಹಂಚಿಕೊಂಡರು.

  ಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆಫೆಬ್ರವರಿ 7ಕ್ಕೆ 'ಜಂಟಲ್ ಮ್ಯಾನ್' ಸಿನಿಮಾ ಅದ್ಧೂರಿ ಬಿಡುಗಡೆ

  ''ಪ್ರಜ್ವಲ್ ದೇವರಾಜ್ ಜೊತೆ ನಾನು ಮೊದಲ ದೃಶ್ಯ ನಟಿಸಿದಾಗಲೇ ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ ಎಂದು ಸೆಟ್ ನಲ್ಲಿದ್ದವರೆಲ್ಲ ಹೇಳಿದರು. ನಂತರ ನಿರ್ದೇಶಕರು ಅದೇ ಹೇಳಿದರು. ಈಗ ಹಾಡುಗಳು ಬಂದಿದೆ. ಇದನ್ನ ನೋಡಿ ಜನರು ಕೂಡ ಒಳ್ಳೆಯ ಜೋಡಿ ಎನ್ನುತ್ತಿದ್ದಾರೆ. ಇದು ಖುಷಿ ಕೊಡ್ತಿದೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

  'ಎದ್ದೇಳು ಭಾರತೀಯ' ಅಂತಿದ್ದಾರೆ ಪ್ರಜ್ವಲ್ ದೇವರಾಜ್'ಎದ್ದೇಳು ಭಾರತೀಯ' ಅಂತಿದ್ದಾರೆ ಪ್ರಜ್ವಲ್ ದೇವರಾಜ್

  'ಸಿನಿಮಾದಲ್ಲಿ ಹೆಚ್ಚು ಸೀರೆಯಲ್ಲಿ ಕಾಣಿಸಿಕೊಂಡಿದ್ದೇನೆ. ಸೀರೆ ತೊಡುವುದು ಕೂಡ ಈ ಚಿತ್ರದಿಂದಲೇ ನಾನು ಕಲಿತೆ' ಎಂದು ಹೇಳಿಕೊಂಡಿದ್ದಾರೆ ನಿಶ್ವಿಕಾ ನಾಯ್ಡು. ಇನ್ನು ಹಲವು ವಿಚಾರಗಳನ್ನು ಫಿಲ್ಮಬೀಟ್ ಸಂದರ್ಶನದಲ್ಲಿ ನಿಶ್ವಿಕಾ ಹಂಚಿಕೊಂಡಿದ್ದಾರೆ. ಪೂರ್ತಿ ವಿಡಿಯೋ ಮುಂದಿದೆ ನೋಡಿ...

  ಇನ್ನುಳಿದಂತೆ ಈ ಚಿತ್ರವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಗುರುದೇಶ ಪಾಂಡೆ ನಿರ್ಮಿಸಿದ್ದಾರೆ. ಸಂಚಾರಿ ವಿಜಯ್, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದ್ದು, ಮುರಳಿ ಮಾಸ್ಟರ್ ಮತ್ತು ಗುಂಗುಮ್ ರಾಜು ಅವರ ನೃತ್ಯ ಸಂಯೋಜನೆ ಒಳಗೊಂಡಿದೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಧನಂಜಯ್, ಕಿನ್ನಲ್ ರಾಜ್ ಅವರ ಸಾಹಿತ್ಯವಿದ್ದು, ಸಂಚಿತ್ ಹೆಗ್ಡೆ, ವಿಜಯ್ ಪ್ರಕಾಶ್, ವಸಿಷ್ಠ ಸಿಂಹ ಅವರ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿದೆ.

  English summary
  Kannada actress Nishvika naidu revealed who is her gentleman of real life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X