»   » ಕಿಚ್ಚ ಸುದೀಪನ ಜೊತೆ ಮೈನಾ ಬೆಡಗಿ ನಿತ್ಯಾ ಮೆನನ್

ಕಿಚ್ಚ ಸುದೀಪನ ಜೊತೆ ಮೈನಾ ಬೆಡಗಿ ನಿತ್ಯಾ ಮೆನನ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರು ನಿರ್ಮಾಪಕ ಸೂರಪ್ಪ ಬಾಬು ಜೊತೆ 'ಕೋಟಿಗೊಬ್ಬ-2' ಪ್ರಾಜೆಕ್ಟ್ ಮಾಡ್ತಾ ಇದ್ದಾರೆ ಅಂತ ನಿಮಗೆ ನಾವು ಹೇಳಿದ್ವಿ ತಾನೇ ಇದೀಗ ಅವರ ಚಿತ್ರಕ್ಕೆ ಸಮಸ್ಯೆ ಏನಪ್ಪಾ ಅಂದ್ರೆ ಇನ್ನೂ ನಾಯಕಿ ಯಾರೂ ಅಂತ ಪಕ್ಕಾ ಆಗಿಲ್ಲಾ ಅಂತೆ.

ಆದರೆ ಇದೀಗ 'ಮೈನಾ' ಚಿತ್ರದಲ್ಲಿ ಅಭೂತಪೂರ್ವ ನಟನೆ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್ ಸುದೀಪ್ ಗೆ ನಾಯಕಿಯಾಗಲಿದ್ದಾರೆ ಅಂತ ಸದ್ಯಕ್ಕೆ ಇಡೀ ಗಾಂಧಿನಗರದಲ್ಲಿ ಗುಲ್ಲೆದ್ದಿದೆ.

Nithya Menen To Romance Kichcha Sudeep In 'Kotigobba 2'?

ಈ ಮೊದಲು ನಾಯಕಿಯ ಪಾತ್ರಕ್ಕಾಗಿ ತುಂಬಾ ನಾಯಕಿಯರ ಹೆಸರು ಕೇಳಿಬರುತ್ತಿದ್ದು, ಅದರಲ್ಲಿ ತಮಿಳು ನಟ ಅಜಿತ್ ಅತ್ತಿಗೆ ಶ್ಯಾಮಿಲಿ, ತೆಲುಗು ತಾರೆಯರಾದ ಸಮಂತಾ, ಕಾಜಲ್ ಅಗರ್ ವಾಲಾ ಮುಂತಾದವರು ಲೀಡ್ ನಲ್ಲಿದ್ದರು.

ಅಂದಹಾಗೆ 'ಲಿಂಗಾ' ಚಿತ್ರದ ನಿರ್ದೇಶಕ ಕೆ.ಎಸ್.ರವಿಕುಮಾರ್ 'ಕೋಟಿಗೊಬ್ಬ 2' ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಇದೇ ಜೂನ್ ತಿಂಗಳಲ್ಲಿ ಚಿತ್ರ ಸೆಟ್ಟೇರಿತ್ತು.

ಇದೀಗ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದ ಸೂರಪ್ಪ ಬಾಬು ಅವರು ನಿತ್ಯಾ ಮೆನಮ್ ಅವರನ್ನು ಕರೆತಂದಿದ್ದಾರೆ. ಇನ್ನು ಈ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಇನ್ನೂ ಮುಂದಿನ ತಿಂಗಳು ಆಗಸ್ಟ್ ಎರಡನೇ ವಾರದಲ್ಲಿ 'ಕೋಟಿಗೊಬ್ಬ 2' ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದ್ದು, ಬೆಂಗಳೂರು, ಚೆನ್ನೈ ಮುಂತಾದೆಡೆ ಚಿತ್ರೀಕರಣ ಮಾಡಲಾಗುತ್ತದೆ.

English summary
Nithya Menen will romance Kichcha Sudeep in Kotigobba 2. If the reports to be believed, Nithya has given a nod to act in the bi-lingual movie which will be directed by Lingaa director KS Ravikumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada